ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರ ಆರ್ಥಿಕ ಸಬಲೀಕರಣ
ರಾಯಚೂರು., 14 ಜುಲೈ (ಹಿ.ಸ.): ಆ್ಯಂಕರ್ : ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣದ ಬಗ್ಗೆ ವಿಶೇಷ ಕಾಳಜಿ ವಹಿಸಿ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಘೋಷಿಸಿದೆ. ಕುಟುಂಬದ ನಿರ್ವಹಣೆಯಲ್ಲಿ ಕುಟುಂಬದ ಯಜಮಾನಿಯ ಪಾತ್ರ ಅತ್ಯಂತ ಪ್ರಮುಖವಾಗಿದೆ. ಕುಟುಂಬದ ಯಜಮಾನಿಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ
Economic empowerment of women through Grihalakshmi Yojana


Economic empowerment of women through Grihalakshmi Yojana


Economic empowerment of women through Grihalakshmi Yojana


ರಾಯಚೂರು., 14 ಜುಲೈ (ಹಿ.ಸ.):

ಆ್ಯಂಕರ್ : ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣದ ಬಗ್ಗೆ ವಿಶೇಷ ಕಾಳಜಿ ವಹಿಸಿ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಘೋಷಿಸಿದೆ. ಕುಟುಂಬದ ನಿರ್ವಹಣೆಯಲ್ಲಿ ಕುಟುಂಬದ ಯಜಮಾನಿಯ ಪಾತ್ರ ಅತ್ಯಂತ ಪ್ರಮುಖವಾಗಿದೆ. ಕುಟುಂಬದ ಯಜಮಾನಿಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬ ನಿರ್ವಹಣೆ ಉತ್ತಮ ಗುಣಮಟ್ಟದಲ್ಲಿರುತ್ತದೆ ಎಂಬುದನ್ನು ಅರಿತು ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಲಾಗಿದೆ. ಈ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ರೂ.ಗಳನ್ನು ನೀಡಲಾಗುತ್ತದೆ.

ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ “ಗೃಹಲಕ್ಷ್ಮಿ” ಯೋಜನೆಯು ಸಹ ಅತ್ಯಂತ ಮಹತ್ವದ್ದಾಗಿದೆ. ಸರ್ಕಾರದಿಂದ ಅತಿ ಹೆಚ್ಚು ಹಣಕಾಸು ವಿನಿಯೋಗವಾಗುವ ಮಹತ್ವದ ಸೇವಾ ಯೋಜನೆ ಇದಾಗಿದೆ. ಈ ಯೋಜನೆಯಡಿ ಬಡ ಮತ್ತು ಮಧ್ಯಮ ವರ್ಗದ ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ಮಾಹೆ 2 ಸಾವಿರ ರೂಪಾಯಿ ನೀಡಲಾಗುತ್ತದೆ.

2023ರ ಜುಲೈ 19 ರಿಂದ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಪ್ರಾರಂಭವಾಯಿತು. ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ, ನಾಡ ಕಚೇರಿಗಳಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ರಾಜ್ಯದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಮಹಿಳೆಯರು ಈ ಯೋಜನೆಯಡಿ ನೋಂದಣಿ ಮಾಡಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ,ಅನುಷ್ಠಾನ ನಿರಂತರ ಪ್ರಕ್ರಿಯೆಯಾಗಿದ್ದು, ಎಪಿಎಲ್, ಅಂತ್ಯೋದಯ ಪಡಿತರ ಕಾರ್ಡ್ ಹೊಂದಿರುವ ಅರ್ಹ ಫಲಾನುಭವಿಗಳು ನೋಂದಣಿ ಮಾಡಲು ಯಾವಾಗಲು ಅವಕಾಶವಿರುತ್ತದೆ. ಕುಟುಂಬದ ಒಬ್ಬ ಮಹಿಳೆ ಮಾತ್ರ ಈ ಯೋಜನೆಯ ಪ್ರಯೋಜನೆ ಪಡೆಯಲು ಅವಕಾಶ ಕಲ್ಪಿಸಿದೆ.

ಗೃಹಲಕ್ಷ್ಮಿ ಯೋಜನೆಯಿಂದ ಫಲಾನುಭವಿಗಳಿಗೆ ಹಲವಾರು ರೀತಿಯಲ್ಲಿ ಪ್ರಯೋಜನವಾಗಿದೆ. ಈ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ಅನೇಕ ಮಹಿಳೆಯರು ಫ್ರಿಜ್, ವಾಷಿಂಗ್ ಮಿಷನ್, ಮಕ್ಕಳ ವಿದ್ಯಾಭ್ಯಾಸದ ಖರ್ಚು, ಪಠ್ಯ-ಪುಸ್ತಕ ಖರೀದಿ, ಔಷಧ ಖರೀದಿ ಖರ್ಚು ಭರಿಸಿದ ಯಶೋಗಾಥೆಗಳು ಪತ್ರಿಕೆಗಳಲ್ಲಿ ವರದಿಯಾಗಿದೆ.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ. ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಬ್ಬ ಮಹಿಳೆಗೆ ಮಾತ್ರ ಈ ಯೋಜನೆಯು ಅನ್ವಯಿಸುತ್ತದೆ. ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿದಾರರು ಸಲ್ಲಿಸುವ ಪೂರ್ಣ ಪ್ರಮಾಣದ ಅರ್ಜಿಯಲ್ಲಿನ ಸ್ವಯಂ ಘೋಷಣೆ ಆಧಾರದ ಮೇಲೆ ಮಂಜೂರಾತಿಯನ್ನು ನೀಡಲಾಗುತ್ತದೆ. ಈ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಯು ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ಗಳನ್ನು ಜೋಡಣೆ ಮಾಡಬೇಕು.

ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಅಥವಾ ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿಯು ಜಿಎಸ್ಟಿ ರಿಟನ್ರ್ಸ್ ಪಾವತಿದಾರರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ಯೋಜನೆಯ ಪ್ರಗತಿ; ರಾಯಚೂರು ಜಿಲ್ಲೆಯಾದ್ಯಂತ ಗೃಹಲಕ್ಷ್ಮೀ ಯೋಜನೆಯಡಿ ಕುಟುಂಬ ಯಜಮಾನಿಗೆ ಪ್ರತಿ ತಿಂಗಳು 2000 ರೂ.ಗಳನ್ನು 2023ರ ಆಗಸ್ಟ್ ನಿಂದ 2026ರ ಮೇ ಮಾಹೆಯಗೆ ಒಟ್ಟು 29 ಕಂತುಗಳಲ್ಲಿ 24,832,888,000 ರೂ. ಪಾವತಿಯಾಗಿದೆ.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಯಶೋಗಾಥೆಗಳು: ಕರ್ನಾಟಕ ಸರ್ಕಾರದ ಗೃಹಲಕ್ಷ್ಮೀ ಯೋಜನೆಯು ಅತ್ಯಂತ ಮಹತ್ವದ್ದಾಗಿದೆ. ಈ ಯೋಜನೆಯು ಬಡವರ ಆಶಾಕಿರಣವಾಗಿದೆ. ನಾರಿಶಕ್ತಿ ಬದುಕನ್ನು ಮತ್ತಷ್ಟು ಮಗದಷ್ಟು ಸುಂದರಗೊಳಿಸಿದ, ಮಹಿಳೆಯರ ಜೀವನದ ಭದ್ರತೆ ಮತ್ತು ಭವಿಷ್ಯದ ಚಿಂತನೆಗೆ ಚೇತನವಾದ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ತುಂಬಿ ಸ್ವಯಂ ಉದ್ಯೋಗದ ಕನಸನ್ನು ಭಿತ್ತಿದ ಮಹತ್ವ ಯೋಜನೆ ಗೃಹಲಕ್ಷ್ಮೀ ಯೋಜನೆಯಾಗಿದೆ. ಮಹಿಳೆಯರು ಸ್ವಾವಲಂಬಿ ಬದುಕು ನಡೆಸಲು ಅವರು ಆರ್ಥಿಕವಾಗಿ ಸಬಲರಾಗಲು ಅವಕಾಶ ಕಲ್ಪಿಸಿದೆ. ಈ ಯೋಜನೆಯ ಲಾಭ ಪಡೆದ ರಾಯಚೂರು ಜಿಲ್ಲೆಯ ಕೆಲವು ಆಯ್ದ ಫಲಾನುಭವಿಗಳ ಅಭಿಪ್ರಾಯ ಇಲ್ಲಿದೆ.

“ಗೃಹಲಕ್ಷ್ಮೀ ಯೋಜನೆಯಿಂದ ನನ್ನ ಸಂಸಾರದ ರಥ ಸಾಗುತ್ತಿದೆ.”

ಪ್ರತಿ ತಿಂಗಳು ಬರುವ ಗೃಹಲಕ್ಷ್ಮೀ ಯೋಜನೆ 2000 ರೂ.ದಿಂದ ನನ್ನ ಸಂಸಾರದ ರಥ ಯಶಸ್ವಿಯಾಗಿ ಸಾಗುತ್ತಿದೆ. ಈ ಯೋಜನೆಯಿಂದ ಬಂದ ಹಣದಿಂದ ಮನೆಯಲ್ಲಿ ತಾಳಿ ಸರ ಪೋಣಿಸುವಾ ಕೆಲಸವನ್ನು ಪ್ರಾರಂಭಸಿದ್ದು, ಇದರಿಂದ ಒಂದು ದಿನಕ್ಕೆ 650ರೂ.ಗಳನ್ನು ಲಾಭವನ್ನು ಪಡೆಯಲಾಗುತ್ತಿದೆ. ಇದರಿಂದ ಮನೆಯ ಖರ್ಚಿಗೆ ಮತ್ತು ಮಕ್ಕಳ ಪಾಲನೆಗೆ ಸಹಾಯವಾಗಿದೆ - ದೇವಮ್ಮ ಗಂಡ ವಿಜಯ ಕುಮಾರ್ ಫಲಾನುಭವಿ, ಸಿರವಾರ.

“ಗೃಹಲಕ್ಷ್ಮಿ ಯೋಜನೆಯು ನನ್ನ ಜೀವನದ ಆಶಾಕಿರಣವಾಗಿದೆ”

ನಾನು ವಿಶೇಷ ಚೇತನಳಾಗಿದ್ದೇನೆ. ಸಂಸಾರದ ಹೊರೆಯನ್ನು ನೀಗಿಸುವುದು ನನಗೆ ತುಂಬಾ ಕಷ್ಟಕರವಾಗಿತ್ತು. ಈ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯು ನನ್ನ ಜೀವನದ ಆಶಾಕಿರಣವಾಗಿ ಬಂದಿತು.ಈ ಯೋಜನೆಯಿಂದ ಬಂದಂತಹ ಹಣ ಕೂಡಿಟ್ಟು ನಾನು ಹೊಲಿಗೆಯಂತ್ರ ಮತ್ತು ಪಿಕೋ ಪಾಲ್ಸ್ ಯಂತ್ರವನ್ನು ಖರೀದಿಸಿ ಪ್ರತಿ ದಿನ ರೂಪಾಯಿ 300-400ಗಳನ್ನು ಗಳಿಸುತ್ತಿದ್ದೇನೆ. ಈ ಯೋಜನೆಯು ನನ್ನ ಆರ್ಥಿಕ ಸಬಲತೆಗೆ ಸಹಕಾರಿಯಾಗಿದೆ. ಪ್ರತಿ ತಿಂಗಳು ಬರುವ ರೂ.2000 ನನಗೆ ವರದಾನವಾಗಿದೆ. ಮಾನ್ಯ ಮುಖ್ಯಮಂತ್ರಿಗಳಿಗೆ ನಾನು ಸದಾಕಾಲ ಚಿರಋಣಿಯಾಗಿರುತ್ತೇನೆ ಎಂದು- ಹಸೀನ ಬೇಗಂ ಫಲಾನುಭವಿ ಇಂದಿರಾ ನಗರ, ದೇವದುರ್ಗ.

“ಯೋಜನೆಯಿಂದ ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರು ಆರ್ಥಿಕ ಸ್ವಾವಲಂಬನೆ”

ರಾಜ್ಯ ಸರ್ಕಾರವು ನುಡಿದಂತೆ ನಡೆಯುವ ಸರ್ಕಾರ. ಇಡೀ ದೇಶದಲ್ಲಿಯೇ ಅತೀ ದೊಡ್ಡ ಆರ್ಥಿಕ ಭದ್ರತಾ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಯು ನಮ್ಮ ರಾಜ್ಯದ ಮಹಿಳೆಯರ ಬದುಕಿನ ನಿರ್ವಹಣೆಗೆ ಹೆಚ್ಚು ಅನುಕೂಲ ಮಾಡಿಕೊಡಲಿದೆ. ಮತ್ತು ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲಿದೆ. ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಹಣವನ್ನು ನೇರವಾಗಿ ಜಮೆ ಆಗಲಿದೆ. ಈ ಆರ್ಥಿಕ ನೆರವು ನೀಡುವ ಯೋಜನೆಯಿಂದ ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರು ಆರ್ಥಿಕ ಸ್ವಾವಲಂಬನೆಯನ್ನು ಹೊಂದಲಿದ್ದಾರೆ ಎಂದು ಪಾಮಯ್ಯ ಮುರಾರಿ, ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande