ಗ್ರಾಮ ದೇವತೆಗಳ ಹರಿಜಾತ್ರೆಯನ್ನು ವಿಜ್ರಂಭಣೆಯಿಂದ ಆಚರಿಸಲು ಭಕ್ತರ ನಿರ್ಧಾರ
ಗದಗ, 14 ಜುಲೈ (ಹಿ.ಸ.) ಆ್ಯಂಕರ್:- ಪ್ರತಿ 12 ವರ್ಷಕೊಮ್ಮೆ ನಡೆಯುವ ಗದಗ-ಬೆಟಗೇರಿ ಗ್ರಾಮ ದೇವತೆಯರಾದ ಶ್ರೀ ದ್ಯಾಮವ್ವ ಮತ್ತು ಶ್ರೀ ದುರಗಮ್ಮ ದೇವಿಯವರ ಹರಿಜಾತ್ರೆಯು 18-08-2026 ರಿಂದ 28-08-2026ರ ವರೆಗೆ ಗದಗ ನಗರದ ಒಕ್ಕಲಗೇರಿ ಓಣಿ ದ್ಯಾಮವ್ವನ ಕಟ್ಟೆ ಹಾಗೂ ಜೋಡ ಮಾರುತಿ ದೇವಸ್ಥಾನದ ಎದುರಿಗೆ
ಫೋಟೋ


ಗದಗ, 14 ಜುಲೈ (ಹಿ.ಸ.)

ಆ್ಯಂಕರ್:- ಪ್ರತಿ 12 ವರ್ಷಕೊಮ್ಮೆ ನಡೆಯುವ ಗದಗ-ಬೆಟಗೇರಿ ಗ್ರಾಮ ದೇವತೆಯರಾದ ಶ್ರೀ ದ್ಯಾಮವ್ವ ಮತ್ತು ಶ್ರೀ ದುರಗಮ್ಮ ದೇವಿಯವರ ಹರಿಜಾತ್ರೆಯು 18-08-2026 ರಿಂದ 28-08-2026ರ ವರೆಗೆ ಗದಗ ನಗರದ ಒಕ್ಕಲಗೇರಿ ಓಣಿ ದ್ಯಾಮವ್ವನ ಕಟ್ಟೆ ಹಾಗೂ ಜೋಡ ಮಾರುತಿ ದೇವಸ್ಥಾನದ ಎದುರಿಗೆ ಇರುವ ದ್ಯಾಮಮ್ಮ-ದುರಗಮ್ಮ ದೇವಸ್ಥಾನದಲ್ಲಿ ನಡೆಯುವ ಹರಿಜಾತ್ರೆಯನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲು ಸೇರಿದ ದೇವಿಯ ಭಕ್ತಾಧಿಗಳು ನಿರ್ಧರಿಸಿದರು.

ಇಂದು ನಡೆದ ಭಕ್ತರ ಸಭೆಯಲ್ಲಿ ಬಹಳ ವರ್ಷಗಳಿಂದ ನಂತರ ನಡೆಯುತ್ತಿರುವ ಈ ವರ್ಷ ಜಾತ್ರೆಯನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲು ಸರ್ವಸದಸ್ಯರು ನಿರ್ಧರಿಸಿದರು. ಗದಗ ಒಕ್ಕಲಗೇರಿ ಓಣಿಯ ಶ್ರೀ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗದಗ ನಗರದ 64 ವಿವಿಧ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿ ಕಾರ್ಯಕ್ರಮವನ್ನು ಹೇಗೆ ನಡೆಸಬೇಕು ಅನ್ನುವುದರ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ದಿನಾಂಕ 18-08-2026 ರಂದು ದ್ಯಾಮವ್ವನ ಕಟ್ಟೆಯಲ್ಲಿ ದ್ಯಾಮಮ್ಮ ದುರ್ಗಮ್ಮ ದೇವಿಯರ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗುವದು.

ದಿನಾಂಕ : 18-08-2026 ರಿಂದ ದಿನಾಂಕ: 25-08-2026 ರ ವರೆಗೆ ಪ್ರತಿ ದಿನ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವವು

ದಿನಾಂಕ 24-08-2026 ರಂದು ಮದ್ಯಾನ್ಹ 1 ಗಂಟೆಗೆ ದ್ಯಾಮವ್ವನ ಕಟ್ಟೆಯಲ್ಲಿ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ದಿನಾಂಕ 25-08-2026 ರಂದು ಬೆಳಿಗ್ಗೆಯಿಂದ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಧ್ಯಾಹ್ನ ನಗರದಲ್ಲಿರುವ ದೇವಸ್ಥಾನಗಳಿಗೆ ಉಡಿ ತುಂಬುವ ಹಾಗೂ ಕಾಯಿ ಒಡೆಸುವ ಕಾರ್ಯಕ್ರಮ ಜರುಗಲಿವೆ. ದಿನಾಂಕ : 26-08-2026 ರಂದು ಮುಂಜಾನೆ 11-00ಗಂಟೆಗೆ ದ್ಯಾಮವ್ವ ಹಾಗೂ ದುರಗಮ್ಮ ದೇವತೆಯರನ್ನು ಸಕಲ ಮಂಗಲ ವಾದ್ಯ ವೈಭವಗಳೊಂದಿಗೆ ಒಕ್ಕಲಗೇರಿಯ ದ್ಯಾಮವ್ವನ ಕಟ್ಟೆಯಿಂದ ಕಿಲ್ಲಾದಲ್ಲಿರುವ ದ್ಯಾಮವ್ವ ಹಾಗೂ ದುರಗಮ್ಮನ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ದಿನಾಂಕ : 28-08-2026 ರಂದು ದ್ಯಾಮವ್ವ ದುರಗಮ್ಮ ದೇವಸ್ಥಾನದಲ್ಲಿ ಬೆಳಿಗ್ಗೆ 7 ಗಂಟೆಗೆ ಮಹಾ ಹೋಮ ಹಾಗೂ ಮಧ್ಯಾನ್ಹ ಅನ್ನಸಂತರ್ಪಣೆ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಯಿತು.

ಈ ಸಭೆಯಲ್ಲಿ ಆಗಮಿಸದಂತ ವಿವಿಧ ಸಮಾಜದ ಮುಖಂಡರುಗಳು ತಮ್ಮ ಅನಿಸಿಕೆಗಳನ್ನ ವ್ಯಕ್ತಪಡಿಸಿ ತಾವು ಈ ಬೃಹತ್ ಹರಿಜಾತ್ರೆ ಕಾರ್ಯಕ್ರಮದಲ್ಲಿ ತನು, ಮನ, ದನದಿಂದ ಸೇವೆ ಸಲ್ಲಿಸುವುದಾಗಿ ಮಾತನಾಡಿದರು. ರಾಜ್ಯ ಪ್ರಶಸ್ತಿ ವಿಜೇತ ಕೀರ್ತನಕಾರರಾದ ಕಲ್ಲಿನಾಥ ಶಾಸ್ತ್ರಿಗಳು ಜಾತ್ರೆಯ ಬಗ್ಗೆ ಹಾಗು ದೇವಿಯರ ಬಗ್ಗೆ ವಿಶೇಷವಾದ ಉಪನ್ಯಾಸವನ್ನು ನೀಡಿದರು.

ಎಂ.ಎಂ.ಹಿರೇಮಠ ಹಾಗು ರಾಜು ಖಾನಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಕೊಟ್ರಪ್ಪ ಕಮತರ ವಹಿಸಿದ್ದರು, ಕಾರ್ಯಅಧ್ಯಕ್ಷರಾದ ಪಕ್ಕಿರಪ್ಪ ಹೆಬಸೂರ, ಉಪಾಧ್ಯಕ್ಷರಾದ ಮಂಜುನಾಥ ಅಬ್ಬಿಗೇರಿ, ಪ್ರಶಾಂತ ಶಾಬಾದಿಮಠ, ರಾಮಣ್ಣ ಪಲದೊಡ್ಡಿ, ಅರುಣಕುಮಾರ ಚವ್ಹಾಣ, ಆನಂದ ಸರೋದೆ, ಕೊಶಾಧ್ಯಕ್ಷ ವಿಜಯಕುಮಾರ ಗಡ್ಡಿ, ರಾಜು ಕುರುಡಗಿ, ಪ್ರಕಾಶ ಬೊಮ್ಮನಳ್ಳಿ, ಪಕ್ಕಿರಸಾ ಭಾಂಡಗೆ, ಶ್ರೀಕಾಂತ ಖಟವಟೆ, ಅಶೋಕ ಮಂದಾಲಿ, ಚಂದ್ರಶೇಖರಪ್ಪ ಪಟ್ಟಣಶೆಟ್ಟಿ, ಶಿವಪ್ಪ ಕತ್ತಿ, ಮುರಗೇಪ್ಪ ನಾಲ್ವಾಡ, ಅರವಿಂದ ಹುಲ್ಲೂರ, ರುದ್ರಣ್ಣ ಗುಳಗುಳಿ, ಸುರೇಶ ಮೇರವಾಡೆ, ಉಡಚಪ್ಪ ಹಳ್ಳಿಕೇರಿ, ಆರ್.ಡಿ.ಕೊಂಡಿಕೊಪ್ಪ, ಗುರುಶಾಂತಗೌಡ ಮರೀಗೌಡ್ರ, ಈರಣ್ಣ ಕರಿಬಿಷ್ಠಿ, ಶಂಕ್ರಪ್ಪ ಕನಾಜ, ಡಾ|| ಎಸ್.ಆರ್.ಹಿರೇಮಠ, ಡಾ|| ನಾರಾಯಣಪೂರ, ಕೊಟ್ರೇಶ ಕೊಟ್ರಶೆಟ್ಟಿ, ಮುರುಗೆಪ್ಪ ನಾಲ್ವಾಡ, ವೀರುಪಾಕ್ಷಪ್ಪ ಅಕ್ಕಿ, ಲೋಕನಾಥಸಾ ಬದಿ, ನಾಗಪ್ಪ ಗುಗ್ಗರಿ, ನಂದು ಬೇವಿನಕಟ್ಟಿ, ವೀರಣ್ಣ ಮೇಟಿ, ಮೃತ್ಯುಂಜಯ ನೀಲುಗಲ್, ಬಸವರಾಜ ಜಂತ್ಲಿ, ನರಸಪ್ಪ ತುಕ್ಕಪ್ಪನವರ, ಪ್ರಕಾಶ ಭಾಂಡಗೆ, ಮಾದುಸಾ ಬದಿ, ನವೀನ ನಾಲ್ವಾಡ, ಬಸವರಾಜ ಮಡಿವಾಳರ, ಬಸವರಾಜ ಹಡಪದ, ಬಸವರಾಜ ಹುಬ್ಬಳ್ಳಿ, ಪರಪ್ಪ ಕಮತರ, ಮಹೇಶ ರೊಕಡೆ, ಹೆಮಂತ ಗಿಡ್ಡಹನುಮಣ್ಣವರ, ಸುಧೀರ ಕಾಟಿಗರ, ಸುರೇಶ ಹೆಬಸೂರ, ಕಿರಣ ಕಮತರ, ರವಿ ಹುಡೇದ, ಶಿವಪ್ಪ ಮುಳ್ಳಾಳ, ರವಿ ಜೋಗಿನ, ನಾಗರಾಜ ಮೆಣಸಗಿ, ಎಂ.ಬಿ.ತುಕ್ಕಪ್ಪನವರ, ಬಸವರಾಜ ಹೊರಪೇಟೆ, ಸಿ.ಕೆ.ಟೆಂಗಿನಕಾಯಿ, ರಾಜೇಶ ಖೊಡೆ, ವಸಂತ ಪಡಗದ, ನಾಗಪ್ಪ ಚುರ್ಚಿಹಾಳ, ಎಂ.ಕೆ.ನಲೂಡಿ, ಉಮೇಶ ನಾಲ್ವಾಡ, ಸುರೇಶ ಕಲಬುರ್ಗಿ, ಕೆ.ಬಿ.ತಡಕೋಡ, ವೀರಣ್ಣ ಗಡಗಿ, ರಾಚಯ್ಯ ನಾಲ್ವತ್ವಾಡಮಠ, ಬಸಪ್ಪ ಕಲ್ಬಂಡಿ, ಪಂಚಾಕ್ಷರಿ ಅಂಗಡಿ, ರತ್ನಾಕರ್ಭಟ್ ಜೋಶಿ, ದೇವಿಂದ್ರಪ್ಪ ಹೂಗಾರ, ಸಿದ್ಲಿಂಗಪ್ಪ ಅರಳಿ, ಸುರೇಶ ಗುಂಜಾಳ, ಪ್ರತಿಕ ಬೊಸ್ಲೆ, ಅಶೋಕ ತಂಬ್ರಳ್ಳಿ, ಮಾಲತೇಶಗೌಡ ಪಾಟೀಲ, ಮಹೇಶ ಪಡಗದ, ಮುತ್ತು ಹೊನಗಣ್ಣವರ, ಹಾಗು ನೂರಾರು ಭಕ್ತಾದಿಗಳು ಉಪಸ್ಥೀತರಿದ್ದರು.

ಸರ್ವರನ್ನು ಸುರೇಶ ಮರಳಪ್ಪನವರ ಸ್ವಾಗತಿ ಕಾರ್ಯಕ್ರಮ ನಿರೂಪಣೆ ಮಾಡಿದರು, ಪ್ರಧಾನ ಕಾರ್ಯದರ್ಶಿ ಗಂಗಾಧರ ಮೇಲಗಿರಿ ವಂದನಾರ್ಪಣೆ ಮಾಡಿದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande