ಕಾಂಗ್ರೆಸ್ ಪಕ್ಷಕ್ಕೆ ದೇಶಕ್ಕಿಂತ ಪಕ್ಷದ ಮತ ಭದ್ರತೆ ಮುಖ್ಯ : ಎಂ.ಎಂ.ಹಿರೇಮಠ ಆಕ್ರೋಶ
ಗದಗ, 14 ಜುಲೈ (ಹಿ.ಸ.) ಆ್ಯಂಕರ್:- ರಾಜ್ಯದಲ್ಲಿರುವ ಹಾಗು ದೇಶದಲ್ಲಿರುವ ಕಾಂಗ್ರೇಸ್ ಪಕ್ಷವು ದೇಶದ ಭದ್ರತೆಯನ್ನು ಮರೆತು ಕೇವಲ ಸ್ವಾರ್ಥಕ್ಕಾಗಿ ತಮ್ಮ ಪಕ್ಷದ ಮತಬ್ಯಾಂಕ್ನ್ನು ಗಟ್ಟಿ ಮಾಡಲು ದೇಶದ ಭದ್ರತೆಯನ್ನು ಹಾಳು ಮಾಡಲು ಹೊರಟಿರುವುದು ಇದೊಂದು ದೇಶಕ್ಕೆ ಮಾಡಿದ ದೊಡ್ಡ ದ್ರೊಹವೆಂದು ಜಿಲ್ಲಾ ಬಿಜೆ
ಫೋಟೋ


ಗದಗ, 14 ಜುಲೈ (ಹಿ.ಸ.)

ಆ್ಯಂಕರ್:- ರಾಜ್ಯದಲ್ಲಿರುವ ಹಾಗು ದೇಶದಲ್ಲಿರುವ ಕಾಂಗ್ರೇಸ್ ಪಕ್ಷವು ದೇಶದ ಭದ್ರತೆಯನ್ನು ಮರೆತು ಕೇವಲ ಸ್ವಾರ್ಥಕ್ಕಾಗಿ ತಮ್ಮ ಪಕ್ಷದ ಮತಬ್ಯಾಂಕ್ನ್ನು ಗಟ್ಟಿ ಮಾಡಲು ದೇಶದ ಭದ್ರತೆಯನ್ನು ಹಾಳು ಮಾಡಲು ಹೊರಟಿರುವುದು ಇದೊಂದು ದೇಶಕ್ಕೆ ಮಾಡಿದ ದೊಡ್ಡ ದ್ರೊಹವೆಂದು ಜಿಲ್ಲಾ ಬಿಜೆಪಿ ವಕ್ತಾರರಾದ ಎಂ.ಎಂ.ಹಿರೇಮಠರವರು ಕಾಂಗ್ರೇಸ್ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಅವರಿಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಕೇಂದ್ರ ಚುನಾವಣಾ ಆಯೋಗದವರು ದೇಶದಲ್ಲಿ ಒಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಹೊರಟಾಗ ಕಾಂಗ್ರೇಸ್ ಪಕ್ಷದವರು ತಮ್ಮ ಮತಬ್ಯಾಂಕಿಗಾಗಿ ಹೀನಕೃತ್ಯಕ್ಕೆ ಇಳಿದಿರುವುದು ನಾಚಿಕೆ ಗೆಡಿನ ಕ್ರಮ. ಕೊಟ್ಟಿ ಮತಗಳನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪರಿಷ್ಕರಣೆಗೆ ಪ್ರಕ್ರಿಯೆಗೆ ಕಾಂಗ್ರೇಸ್ ಪಕ್ಷ ಅನಗತ್ಯವಾಗಿ ತಡೆ ಒಡ್ಡುತ್ತಾ ಅಕ್ರಮವಾಗಿ ಈ ದೇಶದ ಒಳಗೆ ನುಗ್ಗಿರುವ ನುಸುಳುಕೋರರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ವಿತರಿಸಲು ಸಿದ್ಧತೆ ಮಾಡಿಕೊಂಡಿರುವುದು ಖಂಡನೀಯ.

ಶಾಶ್ವತ ನಿವಾಸಪತ್ರ ಕೊಡಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ. ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲದಿದ್ದರೂ ಹಾಗು ಕೇಂದ್ರದ ಅನುಮತಿಯನ್ನು ಪಡೆಯದೆ ಶಾಶ್ವತ ನಿವಾಸ ಪ್ರಮಾಣಪತ್ರ ಕೊಡಲು ಮುಂದಾಗಿರುವುದು ಇದು ಕಾನೂನು ವಿರೋಧಿ ಕೆಲಸವಾಗಿದೆ.

ಅಕ್ರಮ ನುಸೂಳುಕೋರರಿಗೆ ಅವರು ಹೆಚ್ಚಾಗಿ ಬಾಂಗ್ಲಾದೇಶದಿಂದ ಹಾಗು ಪಾಕಿಸ್ತಾನದಿಂದ ಬಂದು ಇಲ್ಲಿ ನೆಲೆ ಉರಿದವರು ಹೆಚ್ಚಾಗಿ ಅಲ್ಪಸಂಖ್ಯಾತರೆ ಇರುವುದರಿಂದ ಅವರ ಮತವನ್ನು ಪಡೆಯಲು ಮುಸ್ಲಿಂರ ತುಷ್ಟಿಕರಣ ಮಾಡುವ ಕೆಲಸಕ್ಕೆ ಕೈ ಹಾಕಿರುವುದು ಖಂಡನೀಯ. ದೇಶದ ಭದ್ರತೆಗೆ ಯಾವ ಪಕ್ಷದವರು ಧಕ್ಕೆ ತರುವಂತ ಕಾರ್ಯವನ್ನು ಮಾಡಬಾರದು ಆದರೆ ರಾಜ್ಯದಲ್ಲಿರುವ ಕಾಂಗ್ರೇಸ್ ಪಕ್ಷ ದೇಶದ ಭದ್ರತೆಯನ್ನು ಗಾಳಿಗೆ ತೂರಿ ಅಕ್ರಮ ವಲಸಿಗಾರರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ವಿತರಿಸುತ್ತಿರುವುದು ದೇಶದ ಭದ್ರತೆಗೆ ಗಂಡಾಂತರವಾಗಿದೆ.

ಎಸ್.ಆಯ್.ಆರ್ ಹಾಳು ಮಾಡಲು ಕಾಂಗ್ರೆಸ್ ಪಕ್ಷ ಎಲ್ಲ ರೀತಿಯಿಂದ ಪ್ರಯತ್ನ ಮಾಡುತ್ತಿದೆ. ಮ್ಯಾಪಿಂಗ್ ಮಾಡಲು ಅಕ್ರಮ ಮಾಡಲು ರಾಜ್ಯ ಸರ್ಕಾರದ ನೌಕರರಿಗೆ ಒತ್ತಾಯ ಮಾಡಿ ಅವರಿಂದ ತಪ್ಪು ಮಾಡಲು ಪ್ರೇರೆಪಿಸುತ್ತಿರುವರು.

ಹೆಸರಿನಲ್ಲಿ ಅಕ್ರಮ ನುಸುಳುಕೊರರನ್ನು ರಕ್ಷಿಸಲು ರಾಜ್ಯ ಸರ್ಕಾರ ಮುಂದಾಗಿದ್ದು ದೇಶದ ಭದ್ರತೆಗೆ ಹಾನಿ ಉಂಟು ಮಾಡುವ ಇಂತಹ ಕೆಲಸದಿಂದ ಹಿಂದೆ ಸರಿಯಬೇಕು ಹಾಗು ಸರ್ಕಾರ ಹೊರಡಿಸಿರುವ ಪಿಆರ್ಸಿ ಸುತ್ತೋಲೆಯನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಎಂ.ಎಂ.ಹಿರೇಮಠರವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande