ಹಿರಿಯ ಬಿಜೆಪಿ ನಾಯಕ ರಾಮಚಂದ್ರೇಗೌಡರಿಗೆ ಅಶೋಕ್ ಅಂತಿಮ ನಮನ
ಬೆಂಗಳೂರು, 14 ಜುಲೈ (ಹಿ.ಸ.): ಆ್ಯಂಕರ್: ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ರಾಮಚಂದ್ರೇಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಪುಷ್ಪನಮನ ಸಲ್ಲಿಸಿದರು. ಜನಸಂಘದ ಕಾಲದಿಂದಲೇ ಬೆಂಗಳೂರಿನಲ್ಲಿ ಬಿಜೆಪಿಗೆ ಭದ್ರ ಅಡಿಪಾಯ ಹಾಕಿದ ಹಿರಿಯ ನಾಯಕರಾಗಿದ್ದ ರಾ
ರಾಮಚಂದ್ರೇಗೌಡರಿಗೆ ಅಶೋಕ್ ಅಂತಿಮ ನಮನ


ಬೆಂಗಳೂರು, 14 ಜುಲೈ (ಹಿ.ಸ.):

ಆ್ಯಂಕರ್:

ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ರಾಮಚಂದ್ರೇಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಪುಷ್ಪನಮನ ಸಲ್ಲಿಸಿದರು.

ಜನಸಂಘದ ಕಾಲದಿಂದಲೇ ಬೆಂಗಳೂರಿನಲ್ಲಿ ಬಿಜೆಪಿಗೆ ಭದ್ರ ಅಡಿಪಾಯ ಹಾಕಿದ ಹಿರಿಯ ನಾಯಕರಾಗಿದ್ದ ರಾಮಚಂದ್ರೇಗೌಡರು ಸಂಘಟನಾ ನಿಷ್ಠೆ, ಸರಳ ವ್ಯಕ್ತಿತ್ವ ಮತ್ತು ಕಾರ್ಯಕರ್ತರ ಮೇಲಿನ ಅಪಾರ ಪ್ರೀತಿಯಿಂದ ಎಲ್ಲರಿಗೂ ಮಾದರಿಯಾಗಿದ್ದರು ಎಂದು ಅಶೋಕ್ ಸ್ಮರಿಸಿದರು.

ಅವರ ಆದರ್ಶ, ಪಕ್ಷದ ಮೇಲಿನ ಬದ್ಧತೆ ಹಾಗೂ ಸಾರ್ವಜನಿಕ ಸೇವೆಯ ಮನೋಭಾವ ಮುಂದಿನ ಪೀಳಿಗೆಗೂ ಸದಾ ಸ್ಪೂರ್ತಿಯಾಗಿರಲಿದೆ ಎಂದು ಅವರು ಶ್ರದ್ಧಾಂಜಲಿ ಸಲ್ಲಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande