ಸುಸಜ್ಜಿತ ಕಟ್ಟಡಗಳ ಬಾಡಿಗೆಗೆ ಅರ್ಜಿ ಆಹ್ವಾನ
ರಾಯಚೂರು , 14 ಜುಲೈ (ಹಿ.ಸ.): ಆ್ಯಂಕರ್ : ಮಕ್ಕಳ ರಕ್ಷಣಾ ನಿರ್ದೇಶನಾಲಯದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಬಾಲಕರ ಬಾಲಮಂದಿರ ರಾಯಚೂರು ಮತ್ತು ಸರ್ಕಾರಿ ಬಾಲಕಿಯರ ಬಾಲಮಂದಿರ ರಾಯಚೂರು ಸಂಸ್ಥೆಗಳು ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ-2015ರ
ಸುಸಜ್ಜಿತ ಕಟ್ಟಡಗಳ ಬಾಡಿಗೆಗೆ ಅರ್ಜಿ ಆಹ್ವಾನ


ರಾಯಚೂರು , 14 ಜುಲೈ (ಹಿ.ಸ.):

ಆ್ಯಂಕರ್ : ಮಕ್ಕಳ ರಕ್ಷಣಾ ನಿರ್ದೇಶನಾಲಯದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಬಾಲಕರ ಬಾಲಮಂದಿರ ರಾಯಚೂರು ಮತ್ತು ಸರ್ಕಾರಿ ಬಾಲಕಿಯರ ಬಾಲಮಂದಿರ ರಾಯಚೂರು ಸಂಸ್ಥೆಗಳು ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ-2015ರಡಿ ನೊಂದಾಣಿಯಾಗಿ ಜಿಲ್ಲೆಯಲ್ಲಿ 6-18 ವರ್ಷದೊಳಗಿನ ಮಕ್ಕಳ ರಕ್ಷಣೆ ಮತ್ತು ಪೋಷಣೆಗಾಗಿ ಕಾರ್ಯನಿರ್ವಸುತ್ತಿವೆ.

ಸರ್ಕಾರಿ ಬಾಲಕರ ಬಾಲಮಂದಿರ ರಾಯಚೂರು ಸಂಸ್ಥೆಗೆ 50 ಮಕ್ಕಳು ವಾಸಿಸಲು ಹಾಗೂ ಕಛೇರಿಯ ಉಪಯೋಗಕ್ಕೆ ಮತ್ತು ಸರ್ಕಾರಿ ಬಾಲಕಿಯರ ಬಾಲಮಂದಿರ ರಾಯಚೂರು ಸಂಸ್ಥೆಗೆ 100 ಮಕ್ಕಳು ವಾಸಿಸಲು ಹಾಗೂ ಕಚೇರಿಯ ಉಪಯೋಗಕ್ಕೆ ಅನುಕೂಲವಾಗುವಂತೆ ರಾಯಚೂರು ನಗರದಲ್ಲಿ ಸುಸಜ್ಜಿತ ಕಟ್ಟಡಗಳು ಬಾಡಿಗೆಗೆ ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಾರ್ಯಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ

ಮ.ನಂ. 1-9-138 ಮಾರೆಮ್ಮ ದೇವಸ್ಥಾನದ ಹತ್ತಿರ, ಆಜಾದ ನಗರ ರಾಯಚೂರು ದೂರವಾಣಿ ಸಂಖ್ಯೆ: 08532-226226 ಅಥವಾ ಮೊಬೈಲ್ ಸಂಖ್ಯೆ: 8618362385, 9880957574, 9019862362ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande