ಜಪಾನ್ನ ಸ್ವಯಂರಕ್ಷಣಾ ಪಡೆಗಳ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್
ಟೋಕಿಯೊ, 13 ಜುಲೈ (ಹಿ.ಸ.): ಆ್ಯಂಕರ್: ಭಾರತದ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರು ಜುಲೈ 13ರಂದು ಜಪಾನ್‌ನ ಟೋಕಿಯೊದಲ್ಲಿರುವ ಸ್ವಯಂರಕ್ಷಣಾ ಪಡೆಗಳ ಸ್ಮಾರಕ ಶಿಲೆಗೆ ಪುಷ್ಪಗುಚ್ಛ ಅರ್ಪಿಸಿ, ರಾಷ್ಟ್ರಸೇವೆಯಲ್ಲಿ ಪರಮ ತ್ಯಾಗ ಮಾಡಿದ ವೀರ ಯೋಧರು ಹಾಗೂ ಮಹಿಳೆಯರಿಗೆ ಗೌರವ ನಮನ ಸಲ್ಲಿಸಿದ
Tribute


ಟೋಕಿಯೊ, 13 ಜುಲೈ (ಹಿ.ಸ.):

ಆ್ಯಂಕರ್:

ಭಾರತದ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರು ಜುಲೈ 13ರಂದು ಜಪಾನ್‌ನ ಟೋಕಿಯೊದಲ್ಲಿರುವ ಸ್ವಯಂರಕ್ಷಣಾ ಪಡೆಗಳ ಸ್ಮಾರಕ ಶಿಲೆಗೆ ಪುಷ್ಪಗುಚ್ಛ ಅರ್ಪಿಸಿ, ರಾಷ್ಟ್ರಸೇವೆಯಲ್ಲಿ ಪರಮ ತ್ಯಾಗ ಮಾಡಿದ ವೀರ ಯೋಧರು ಹಾಗೂ ಮಹಿಳೆಯರಿಗೆ ಗೌರವ ನಮನ ಸಲ್ಲಿಸಿದರು.

ಈ ಗೌರವ ನಮನವು ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಹಾಗೂ ಜಾಗತಿಕ ಸಹಭಾಗಿತ್ವದ ಬಲವಾದ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಉಭಯ ದೇಶಗಳ ನಡುವಿನ ಈ ಬಾಂಧವ್ಯವು ಹಂಚಿಕೊಂಡ ಮೌಲ್ಯಗಳು, ಪರಸ್ಪರ ಗೌರವ ಹಾಗೂ ಜಾಗತಿಕ ಶಾಂತಿ ಮತ್ತು ಸ್ಥಿರತೆಯತ್ತ ಇರುವ ಸಾಮಾನ್ಯ ಬದ್ಧತೆಯ ಮೇಲೆ ನಿರ್ಮಿತವಾಗಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande