ರಾಯಚೂರು : ಯುವತಿ ಕಾಣೆ;ದೂರು ದಾಖಲು
ರಾಯಚೂರು , 13 ಜುಲೈ (ಹಿ.ಸ.): ಆ್ಯಂಕರ್ : ರಾಯಚೂರಿನ ಪಶ್ಚಿಮ ಪೊಲೀಸ್ ಠಾಣೆಯ ವ್ಯಾಪ್ತಿಯ ನಂದಿನಿ (19) ತಂದೆ ದಿವಂಗತ ನಾಗರಾಜ ಕಾಣೆಯಾಗಿರುವ ಕುರಿತು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಸಂ:71/2026 ಕಲಂ ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ. ಕಾಣೆಯಾದ ಮಹಿಳ
Raichur: Nandini missing


ರಾಯಚೂರು , 13 ಜುಲೈ (ಹಿ.ಸ.):

ಆ್ಯಂಕರ್ : ರಾಯಚೂರಿನ ಪಶ್ಚಿಮ ಪೊಲೀಸ್ ಠಾಣೆಯ ವ್ಯಾಪ್ತಿಯ ನಂದಿನಿ (19) ತಂದೆ ದಿವಂಗತ ನಾಗರಾಜ ಕಾಣೆಯಾಗಿರುವ ಕುರಿತು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಸಂ:71/2026 ಕಲಂ ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.

ಕಾಣೆಯಾದ ಮಹಿಳೆ ಚಹರೆ ಪಟ್ಟಿ: 5.4 ಅಡಿ ಎತ್ತರ, ಕೆಂಪು ಬಣ್ಣ, ಸದೃಢ ಮೈಕಟ್ಟು, ದುಂಡುಮುಖ, ತಲೆಯಲ್ಲಿ ಕಪ್ಪುಕೂದಲು ಹೊಂದಲಾಗಿದೆ. ಗುಲಾಬಿ ಬಣ್ಣದ ಟಾಪ್ ಹಾಗೂ ನೀಲಿ ಜೀನ್ಸ ಪ್ಯಾಂಟ್ ಧರಿಸಲಾಗಿದ್ದು, ಕನ್ನಡ, ತೆಲುಗು, ಹಿಂದಿ ಹಾಗೂ ಇಂಗ್ಲೀಷ್ ï ಭಾಷೆ ಮಾತನಾಡುತ್ತಾಳೆ.

ಈ ಚಹರೆವುಳ್ಳ ಮಹಿಳೆಯು ಕಂಡುಬಂದಲ್ಲಿ ಪಶ್ಚಿಮ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08532-232570, ಪಿಎಸ್ಐ ಮೊಬೈಲ್ ಸಂಖ್ಯೆ: 9480803847 ಸಿ.ಪಿ.ಐ ಪಶ್ಚಿಮ ವೃತ್ತ, ರಾಯಚೂರು : 08532-226856, 9480803831, ಜಿಲ್ಲಾ ನಿಸ್ತಂತು ಘಟಕ ರಾಯಚೂರು: 08532-235635 ಅಥವಾ 9480803800ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಪಶ್ಚಿಮ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande