ಸ್ಪೇನ್, ಬೆಲ್ಜಿಯಂ ಮತ್ತು ಫಿನ್ಲ್ಯಾಂಡ್ ಪ್ರವಾಸಕ್ಕೆ ಕೇಂದ್ರ ಸಚಿವ ಪಿಯೂಷ್ ಗೋಯಲ್
ನವದೆಹಲಿ, 13 ಜುಲೈ (ಹಿ.ಸ.): ಆ್ಯಂಕರ್: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಇಂದಿನಿಂದ ಜುಲೈ 17ರವರೆಗೆ ಸ್ಪೇನ್, ಬೆಲ್ಜಿಯಂ ಹಾಗೂ ಫಿನ್‌ಲ್ಯಾಂಡ್‌ಗೆ ಉನ್ನತ ಮಟ್ಟದ ಭಾರತೀಯ ವ್ಯಾಪಾರ ನಿಯೋಗದೊಂದಿಗೆ ಅಧಿಕೃತ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸದ ವೇಳೆ ವ್ಯಾಪಾರ, ಹೂಡ
ಸ್ಪೇನ್, ಬೆಲ್ಜಿಯಂ ಮತ್ತು ಫಿನ್ಲ್ಯಾಂಡ್ ಪ್ರವಾಸಕ್ಕೆ ಕೇಂದ್ರ ಸಚಿವ ಪಿಯೂಷ್ ಗೋಯಲ್


ನವದೆಹಲಿ, 13 ಜುಲೈ (ಹಿ.ಸ.):

ಆ್ಯಂಕರ್:

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಇಂದಿನಿಂದ ಜುಲೈ 17ರವರೆಗೆ ಸ್ಪೇನ್, ಬೆಲ್ಜಿಯಂ ಹಾಗೂ ಫಿನ್‌ಲ್ಯಾಂಡ್‌ಗೆ ಉನ್ನತ ಮಟ್ಟದ ಭಾರತೀಯ ವ್ಯಾಪಾರ ನಿಯೋಗದೊಂದಿಗೆ ಅಧಿಕೃತ ಪ್ರವಾಸ ಕೈಗೊಂಡಿದ್ದಾರೆ.

ಈ ಪ್ರವಾಸದ ವೇಳೆ ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ನವೋದ್ಯಮ, ಹಸಿರು ಇಂಧನ, ಸುಧಾರಿತ ಉತ್ಪಾದನೆ ಹಾಗೂ ಭಾರತ–ಯುರೋಪಿಯನ್ ಒಕ್ಕೂಟ (ಇಯು) ನಡುವಿನ ಆರ್ಥಿಕ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆಗಳು ನಡೆಯಲಿವೆ.

ಸ್ಪೇನ್‌ನಲ್ಲಿ ಉಭಯ ದೇಶಗಳ ಸಚಿವರು ಹಾಗೂ ಉದ್ಯಮ ವಲಯದ ಪ್ರತಿನಿಧಿಗಳೊಂದಿಗೆ ದ್ವಿಪಕ್ಷೀಯ ಸಭೆಗಳು ಮತ್ತು ಭಾರತ–ಸ್ಪೇನ್ ವ್ಯವಹಾರ ಗೋಲ್ಮೇಜು ಸಭೆ ನಡೆಯಲಿದೆ. ಬೆಲ್ಜಿಯಂನಲ್ಲಿ ಆಂಟ್‌ವರ್ಪ್ ಬಂದರು, ವಿಶ್ವ ವಜ್ರ ಕೇಂದ್ರಕ್ಕೆ ಭೇಟಿ ನೀಡಿ, ಭಾರತ–ಇಯು ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿ ಸಚಿವ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಫಿನ್‌ಲ್ಯಾಂಡ್‌ನಲ್ಲಿ ಅಲ್ಲಿನ ಪ್ರಧಾನಿ ಆಹ್ವಾನದ ಮೇರೆಗೆ ನವೋದ್ಯಮ, ಡಿಜಿಟಲ್ ತಂತ್ರಜ್ಞಾನ, 6ಜಿ ಸಂಶೋಧನೆ, ಸ್ವಚ್ಛ ಇಂಧನ ಹಾಗೂ ಸುಧಾರಿತ ಉತ್ಪಾದನಾ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಗೆ ಒತ್ತು ನೀಡಲಿದ್ದಾರೆ. ಈ ವೇಳೆ ಫಿನ್‌ಲ್ಯಾಂಡ್‌ನ ಪ್ರಮುಖ ಕಂಪನಿಗಳು ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಈ ಪ್ರವಾಸವು ಭಾರತ–ಇಯು ಮುಕ್ತ ವ್ಯಾಪಾರ ಒಪ್ಪಂದ ಪ್ರಕ್ರಿಯೆಗೆ ವೇಗ ನೀಡುವುದರ ಜೊತೆಗೆ ವ್ಯಾಪಾರ, ಹೂಡಿಕೆ, ತಂತ್ರಜ್ಞಾನ ಮತ್ತು ಸುಸ್ಥಿರ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande