
ಕೋಲಾರ,೧೩ ಜುಲೈ (ಹಿ.ಸ):
ಆ್ಯಂಕರ್: ಕೆಜಿಎಫ್ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಕೆ.ಜಿ.ಎಫ್ ನಗರದ ಮುನ್ಸಿಪಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಲ್ಟಾç ೨೦೨೬ ಮ್ಯಾರಥಾನ್ನಲ್ಲಿ ಕೋಲಾರ ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾಇಲಾಖೆಯ ಕ್ರೀಡಾ ವಸತಿ ನಿಲಯದ ೦೯ ಬಾಲಕರು ಹಾಗೂ ೦೪ ಬಾಲಕಿಯರು ಸೇರಿ ಒಟ್ಟು ೧೩ ಕ್ರೀಡಾ ಪಟುಗಳು ೦೫ ಕಿ.ಮೀ ಹಾಗೂ ೦೩ ಕಿ.ಮೀ ವರ್ಗಗಳಲ್ಲಿ ಪಾಲ್ಗೊಂಡು ಪ್ರಾಬಲ್ಯ ಮೆರೆದರು.
ಮ್ಯಾರಥಾನ್ ಕ್ರೀಡೆಗಳಲ್ಲಿ ೦೫ ಕಿ.ಮೀ ವರ್ಗದಲ್ಲಿ ಸುಮಾರು ೬೦೦ ರಿಂದ ೭೦೦ ಬಾಲಕ ಹಾಗೂ ಬಾಲಕಿಯರು ಹಾಗೂ ೦೩ ಕಿ.ಮೀ ಸ್ಪರ್ಧೆಯಲ್ಲಿ ೭೦೦ ರಿಂದ ೮೦೦ ಬಾಲಕ ಹಾಗೂ ಬಾಲಕಿಯರು ಸದರಿ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದರು. ನೂರಾರು ಸಂಖ್ಯೆಯಲ್ಲಿ ಕ್ರೀಡಾ ಪಟುಗಳು ಪಾಲ್ಗೊಂಡಿದ್ದ ಈ ಸ್ಪರ್ಧೆಯಲ್ಲಿ ಕೋಲಾರ ಕ್ರೀಡಾ ವಸತಿ ನಿಲಯದ ಕ್ರೀಡಾ ಪಟುಗಳು ಪ್ರಾಬಲ್ಯವನ್ನು ಮೆರೆದು ೦೫ ಕಿ.ಮೀ ವರ್ಗದ ಪುರುಷರ ವಿಭಾಗದಲ್ಲಿ ಎಂ. ವಿದ್ಯಾಸಾಗರ್ ಪ್ರಥಮ ಸ್ಥಾನ ಹಾಗೂ ದನುಷ್ ಎಸ್ ದ್ವಿತೀಯ ಸ್ಥಾನವನ್ನು ಗಳಿಸಿದ್ದು, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಶ್ರೀನಿವಾಸ ನೇತೃತ್ವ ವಹಿಸಿದ್ದರು. ಸುಮಾರು ೦೫ ಕಿ.ಮೀ ವರ್ಗದ ಮಹಿಳೆಯರ ವಿಭಾಗದಲ್ಲಿ ಅಂಜಲಿ ಪ್ರಥಮ ಸ್ಥಾನ ಗಳಿಸಿದರು. ೦೩ ಕಿ.ಮೀ ವರ್ಗದ ಬಾಲಕರ ವಿಭಾಗದಲ್ಲಿ ದೀಕ್ಷಿತ್ ಗೌಡ. ಆರ್ ದ್ವಿತೀಯ ಸ್ಥಾನ ಗಳಿಸಿದರು. ನೂರಾರು ಅಭ್ಯರ್ಥಿಗಳು ಪಾಲ್ಗೊಂಡಿದ್ದ ಈ ಸ್ಪರ್ಧೆಗಳಲ್ಲಿ ಕೋಲಾರ ಕ್ರೀಡಾ ವಸತಿ ನಿಲಯದ ಬಹುತೇಕ ಅಭ್ಯರ್ಥಿಗಳು ೨೦ರೊಳಗಿನ ಸ್ಥಾನವನ್ನು ಪಡೆದಿದ್ದಾರೆ ಎಂದು ಮಾಹಿತಿ ಹಂಚಿಕೊAಡಿದ್ದಾರೆ.
ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ೭೦ ಕಿ.ಮೀ, ೫೦ ಕಿ.ಮೀ, ೨೫ ಕಿ.ಮೀ, ೦೫ ಕಿ.ಮೀ ಹಾಗೂ ೦೩ ಕಿ.ಮೀ ವರ್ಗಗಳಲ್ಲಿ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಸದರಿ ಓಟದ ಸ್ಪರ್ಧೆಗಳಿಗೆ ಓಟದ ಪ್ರಾರಂಭದ ಸ್ಥಳ ಹಾಗೂ ಓಟ ಮುಕ್ತಾಯಗೊಳ್ಳುವ ಸ್ಥಳಗಳ ಬಗ್ಗೆ ಮಾರ್ಗನಕ್ಷೆಯನ್ನು ನಿಗದಿಪಡಿಸಲಾಗಿತ್ತು.ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ೦೩ ಕಿ.ಮೀ ಹಾಗೂ ೦೫ ಕಿ.ಮೀ ಮ್ಯಾರಥಾನ್ ಓಟದಲ್ಲಿ ಭಾಗವಹಿಸುವಂತೆ ಮಾಹಿತಿ ನೀಡಲಾಗಿತ್ತು. ಸದರಿ ಸ್ಪರ್ಧೆಯಲ್ಲಿ ಮ್ಯಾರಥಾನ್ ಕ್ರೀಡೆಯ ಕ್ರೀಡಾಪಟುಗಳು ಮಾತ್ರವಲ್ಲದೇ ಇತರ ಕ್ರೀಡೆಗಳ ಕ್ರೀಡಾ ಪಟುಗಳ ಸಹ ಪಾಲ್ಗೊಳ್ಳುವಂತೆ ಪ್ರಚಾರವನ್ನು ನೀಡಲಾಗಿತ್ತು. ಹಲವಾರು ಸಂಸ್ಥೆಗಳು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾದ ಮ್ಯಾರಥಾನ್ ಓಟಕ್ಕೆ ಪ್ರಾಯೋಜಕತ್ವವನ್ನು ನೀಡಿದ್ದವು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಕ್ರೀಡಾ ಪಟುಗಳ ಸುರಕ್ಷತೆ, ಸಂರಕ್ಷಣೆ ಹಾಗೂ ಆತಿಥ್ಯದ ಬಗ್ಗೆ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿತ್ತು.
ಮ್ಯಾರಥಾನ್ ಕ್ರೀಡೆಗಳನ್ನು ಕೆ.ಜಿ.ಎಫ್ ಶಾಸಕಿ ರೂಪಕಲಾ ಎಂ ಶಶಿಧರ್ ಹಾಗೂ ಕೆ.ಜಿ.ಎಫ್ ಪೊಲೀಸ್ ವರಿಷ್ಟಾಧಿಕಾರಿ ಶಿವಾಂಶು ರಜಪೂತ್ ಉದ್ಘಾಟಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲಾ ಅಭ್ಯರ್ಥಿಗಳಿಗೆ ಕೆನರಾ ಬ್ಯಾಂಕ್ ಸಂಸ್ಥೆ ವತಿಯಿಂದ ಪದಕಗಳನ್ನು ನೀಡಲಾಯಿತು.
ಶಾಸಕಿ ರೂಪಕಲಾ ಎಂ ಶಶಿಧರ್, ಕೋಲಾರ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಕೆ.ಜಿ.ಎಫ್ ನಗರದಲ್ಲಿ ಈ ರೀತಿಯ ಬೃಹತ್ ಪ್ರಮಾಣದ ಮ್ಯಾರಥಾನ್ ಕ್ರೀಡೆಯನ್ನು ಆಯೋಜಿಸಿರುವುದಾಗಿ ತಿಳಿಸಿ ಕೆ.ಜಿ.ಎಫ್ನಲ್ಲಿ ಕ್ರೀಡಾ ಪರಂಪರೆಯನ್ನು ಬೆಳಸಲು ಮುಂದಿನ ದಿನಗಳಲ್ಲಿ ಈ ರೀತಿಯ ಮ್ಯಾರಥಾನ್ ಓಟಗಳನ್ನು ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವುದಾಗಿ ತಿಳಿಸಿದರು.
ಕೆ.ಜಿ.ಎಫ್ ಪೊಲೀಸ್ ವರಿಷ್ಟಾಧಿಕಾರಿ ಶಿವಾಂಶು ರಜಪೂತ್ ಮಾತನಾಡಿ, ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ತಿಳಿಸಿ ಯುವ ಜನರು ದುಶ್ಚಟಗಳನ್ನು ತೊರೆಯಬೇಕು ಹಾಗೂ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್