

ರಾಯಚೂರು , 13 ಜುಲೈ (ಹಿ.ಸ.):
ಆ್ಯಂಕರ್ : ನಗರಕ್ಕೆ ಆಗಮಿಸಿದ್ದ ಕರ್ನಾಟಕ ರಾಜ್ಯದ ಲೋಕಾಯುಕ್ತರಾದ ಬಿ.ಎಸ್. ಪಾಟೀಲ್ ಅವರಿಗೆ ಹಾಗೂ ಇಂದು ರಾಯಚೂರಿನಲ್ಲಿ ನೂತನ ಸರ್ವಜ್ಞ ಶಿಕ್ಷಣ ಸಂಸ್ಥೆಯ ಜಸ್ಟಿಸ್ ಶಿವರಾಜ್ ಪಾಟೀಲ ಕಟ್ಟಡದ ಉದ್ಘಾಟನೆಗಾಗಿ ಆಗಮಿಸಿದ ನ್ಯಾಯಮೂರ್ತಿಗಳಾದ ಶಿವರಾಜ್ ಪಿ ಪಾಟೀಲ್ ಅವರಿಗೆ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹ.ಕಾದರ್ಶಿಯಾದ ಡಾಕ್ಟರ್ ದಂಡಪ್ಪ ಬಿರಾದಾರ್ ಪುಸ್ತಕವನ್ನು ಕೊಡುವುದರ ಮೂಲಕ ಅವರಿಗೆ ಆತ್ಮೀಯವಾದ ಸ್ವಾಗತ ಕೋರಿದರು .
ಪುಸ್ತಕ ಸ್ವೀಕರಿಸಿದ ಮಹನೀಯರು ಪುಸ್ತಕ ಕೊಡುವ ಸಂಪ್ರದಾಯವನ್ನು ರೂಡಿಸಿಕೊಂಡಿದ್ದಕ್ಕೆ ಅಭಿನಂದನೆಗಳನ್ನು ಹೇಳಿದರು. ಈ ಸಂದರ್ಭದಲ್ಲಿ ಮಧುಗಲ್ ತಿಮ್ಮಾಪುರ್ ಮಹಾಂತೇಶ ಮಠದ ಪೂಜ್ಯರಾದ ಮಹಾಂತ ಸ್ವಾಮಿಗಳು .ಸರ್ವಜ್ಞ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಚನ್ನ ರೆಡ್ಡಿ ಪಾಟೀಲ್ ಕಾಲೇಜಿನ ಪ್ರಾಚಾರ್ಯರ ವೀರನಗೌಡ ಪಾಟೀಲ್ .ರಾಜಶೇಖರ್ ಪಾಟೀಲ್ .ಶಿವರಾಜ್ ಪಾಟೀಲ್ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್