
ನವದೆಹಲಿ, 13 ಜುಲೈ (ಹಿ.ಸ.):
ಆ್ಯಂಕರ್:ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಮೈ ಭಾರತ್ ವತಿಯಿಂದ ‘ನಶಾ ಮುಕ್ತ ಯುವ ಫಾರ್ ವಿಕಸಿತ ಭಾರತ’ ಅಭಿಯಾನದಡಿ ಜಿಲ್ಲಾ ಮಟ್ಟದ ಸೃಜನಾತ್ಮಕ ಸ್ಪರ್ಧೆಗಳಿಗಾಗಿ ಇಂದಿನಿಂದ ನೋಂದಣಿ ಪ್ರಾರಂಭಿಸಲಾಗಿದೆ.
15ರಿಂದ 29 ವರ್ಷದೊಳಗಿನ ಯುವಕರು ವೈಯಕ್ತಿಕ ಅಥವಾ ತಂಡವಾಗಿ ನೃತ್ಯ, ಸಂಗೀತ, ರೀಲ್ಸ್ ಮತ್ತು ಕಿರುಚಿತ್ರ, ನುಕ್ಕಡ್ ನಾಟಕ ಹಾಗೂ ಸ್ಲ್ಯಾಮ್ ಕವಿತೆ ವಿಭಾಗಗಳಲ್ಲಿ ಭಾಗವಹಿಸಬಹುದು. ಸ್ಪರ್ಧೆಗಳು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಹಂತಗಳಲ್ಲಿ ನಡೆಯಲಿದ್ದು, ರಾಷ್ಟ್ರೀಯ ಸುತ್ತು ಆಗಸ್ಟ್ 12 ಮತ್ತು 13ರಂದು ನವದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಯುವ ಶೃಂಗಸಭೆಯಲ್ಲಿ ನಡೆಯಲಿದೆ.
ಜಿಲ್ಲಾ ಮಟ್ಟದ ಸ್ಪರ್ಧೆಗಳು ಜುಲೈ 24ರಿಂದ 27ರವರೆಗೆ, ರಾಜ್ಯ ಮಟ್ಟದ ಆಯ್ಕೆ ಸುತ್ತುಗಳು ಜುಲೈ 30ರಿಂದ ಆಗಸ್ಟ್ 6ರವರೆಗೆ ನಡೆಯಲಿವೆ.
ಭಾಗವಹಿಸಲು ಆಸಕ್ತ ಯುವಕರು ಮೈ ಭಾರತ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡು ತಮ್ಮ ಸೃಜನಾತ್ಮಕ ಕೃತಿಗಳನ್ನು ಹಿಂದಿ, ಇಂಗ್ಲಿಷ್ ಅಥವಾ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ಅಪ್‌ಲೋಡ್ ಮಾಡಬಹುದು. ಈ ಅಭಿಯಾನದ ಮೂಲಕ ಮಾದಕವಸ್ತು ಮುಕ್ತ ಭಾರತ ನಿರ್ಮಾಣದಲ್ಲಿ ಯುವಜನರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಕೇಂದ್ರ ಸರ್ಕಾರ ಕರೆ ನೀಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.