ಬಳ್ಳಾರಿ : ಶೇ. 99.19 ರಷ್ಟು ಗಣತಿ ನಮೂನೆಗಳ ವಿತರಣೆ
ಬಳ್ಳಾರಿ, 13 ಜುಲೈ (ಹಿ.ಸ.) ಆ್ಯಂಕರ್ : ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ಮನೆ ಮನೆ ಸಮೀಕ್ಷೆ ಕಾರ್ಯವು ಅತ್ಯಂತ ಬಿರುಸಿನಿಂದ ಸಾಗುತ್ತಿದೆ. ಜಿಲ್ಲೆಯಾದ್ಯಂತ ಒಟ್ಟು 12,29,586 ಮತದಾರರಿದ್ದು, ಭಾನುವಾರದ ಅಂತ್ಯಕ್ಕೆ ಒಟ್ಟು 12,19,621 ಎಸ್ಐಆರ್ ಗಣತಿ ನಮೂನೆಗಳನ್ನು ವಿ
ಬಳ್ಳಾರಿ : ಶೇ. 99.19 ರಷ್ಟು ಗಣತಿ ನಮೂನೆಗಳ ವಿತರಣೆ


ಬಳ್ಳಾರಿ, 13 ಜುಲೈ (ಹಿ.ಸ.)

ಆ್ಯಂಕರ್ : ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ಮನೆ ಮನೆ ಸಮೀಕ್ಷೆ ಕಾರ್ಯವು ಅತ್ಯಂತ ಬಿರುಸಿನಿಂದ ಸಾಗುತ್ತಿದೆ. ಜಿಲ್ಲೆಯಾದ್ಯಂತ ಒಟ್ಟು 12,29,586 ಮತದಾರರಿದ್ದು, ಭಾನುವಾರದ ಅಂತ್ಯಕ್ಕೆ ಒಟ್ಟು 12,19,621 ಎಸ್ಐಆರ್ ಗಣತಿ ನಮೂನೆಗಳನ್ನು ವಿತರಿಸುವ ಮೂಲಕ ಶೇ. 99.19 ರಷ್ಟು ಪ್ರಗತಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.

ಜಿಲ್ಲೆಯ ಒಟ್ಟು ಮತದಾರರ ಪೈಕಿ ಶೇ. 97.83 ರಷ್ಟು ಮತದಾರರ ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ. ಸಮೀಕ್ಷೆ ನಡೆಸಲಾದ ಗಣತಿ ನಮೂನೆಗಳ ಪೈಕಿ ಒಟ್ಟು 4,50,323 (ಶೇ. 36.62) ಫಾರ್ಮ್ಗಳನ್ನು ಯಶಸ್ವಿಯಾಗಿ ಗಣಕೀಕೃತಗೊಳಿಸಲಾಗಿದ್ದು, 1,936 ಮತದಾರರು ಸ್ವತಃ ಆನ್ಲೈನ್ ಮೂಲಕ ನಮೂನೆಗಳನ್ನು ಸಲ್ಲಿಸಿದ್ದಾರೆ.

ಮನೆ-ಮನೆ ಭೇಟಿ ಅವಧಿಯಲ್ಲಿ ಒಟ್ಟು 9,309 ಮತದಾರರನ್ನು ಗೈರುಹಾಜರಿ, ಸ್ಥಳಾಂತರ ಹಾಗೂ ಮರಣ ಹೊಂದಿದ ವರ್ಗಕ್ಕೆ ಗುರುತಿಸಲಾಗಿದೆ. ಅದರಲ್ಲಿ 4,648 ಮರಣ ಹೊಂದಿದ ಮತದಾರರು, 3,482 ಖಾಯಂ ಸ್ಥಳಾಂತರಗೊAಡವರು, 1,008 ಈಗಾಗಲೇ ನೋಂದಾಯಿತರಾದವರು, 136 ಅಲಭ್ಯ/ಗೈರು ಹಾಜರಾದ ಮತದಾರರು ಹಾಗೂ 35 ಇತರೆ.

*ವಿಧಾನಸಭಾ ಕ್ಷೇತ್ರವಾರು ಪ್ರಗತಿ ನೋಟ:*

ಕಂಪ್ಲಿ (91): 242 ಮತಗಟ್ಟೆಗಳಿದ್ದು, ಒಟ್ಟು 2,28,666 ಮತದಾರರಿದ್ದಾರೆ. ಇಲ್ಲಿ 2,26,840 ಫಾರ್ಮ್ಗಳನ್ನು ವಿತರಿಸಲಾಗಿದ್ದು, 1,15,283 ನಮೂನೆಗಳನ್ನು ಗಣಕೀಕೃತಗೊಳಿಸಲಾಗಿದೆ.

ಸಿರಗುಪ್ಪ (92): 229 ಮತಗಟ್ಟೆಗಳಿದ್ದು, ಒಟ್ಟು 2,28,277 ಮತದಾರರಿದ್ದಾರೆ. 2,27,694 ಫಾರ್ಮ್ಗಳನ್ನು ವಿತರಿಸಿ, 99,113 ಫಾರ್ಮ್ಗಳನ್ನು ಗಣಕೀಕರಣಗೊಳಿಸಲಾಗಿದೆ. ಇಲ್ಲಿ ಅತಿ ಹೆಚ್ಚು ಅಂದರೆ 1,086 ಮತದಾರರು ಸ್ಥಳಾಂತರಗೊAಡಿದ್ದಾರೆ.

ಬಳ್ಳಾರಿ ಗ್ರಾಮೀಣ (93): 236 ಮತಗಟ್ಟೆಗಳಿದ್ದು, ಒಟ್ಟು 2,51,325 ಮತದಾರರಿದ್ದಾರೆ. 2,49,939 ಫಾರ್ಮ್ಗಳನ್ನು ವಿತರಿಸಿ, 68,541 ಫಾರ್ಮ್ಗಳನ್ನು ಗಣಕೀಕರಣಗೊಳಿಸಲಾಗಿದೆ. ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 1,707 ಮರಣ ಪ್ರಕರಣಗಳು ದಾಖಲಾಗಿವೆ.

ಬಳ್ಳಾರಿ ನಗರ (94): 261 ಮತಗಟ್ಟೆಗಳಿದ್ದು, ಅತಿ ಹೆಚ್ಚು ಅಂದರೆ 2,79,144 ಮತದಾರರನ್ನು ಹೊಂದಿದೆ. ಇಲ್ಲಿ 2,73,181 ಫಾರ್ಮ್ಗಳನ್ನು ವಿತರಿಸಲಾಗಿದ್ದು, 46,647 ಫಾರ್ಮ್ಗಳನ್ನು ಗಣಕೀಕರಣಗೊಳಿಸಲಾಗಿದೆ.

ಸಂಡೂರು (95): 259 ಮತಗಟ್ಟೆಗಳಿದ್ದು, ಒಟ್ಟು 2,42,174 ಮತದಾರರಿದ್ದಾರೆ. 2,41,967 ಫಾರ್ಮ್ಗಳನ್ನು ವಿತರಿಸಿ, ಅತಿ ಹೆಚ್ಚು ಅಂದರೆ 1,20,739 ಫಾರ್ಮ್ಗಳನ್ನು ಯಶಸ್ವಿಯಾಗಿ ಗಣಕೀಕರಣಗೊಳಿಸಲಾಗಿದೆ.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಮನೆ-ಮನೆ ಭೇಟಿ ಸಮೀಕ್ಷೆ ಮತ್ತು ಗಣಕೀಕರಣ ಪ್ರಕ್ರಿಯೆಯು ಜುಲೈ 29 ರವರೆಗೆ ಮುಂದುವರೆಯಲಿದ್ದು, ಸಾರ್ವಜನಿಕರು ಹಾಗೂ ಮತದಾರರು ಯಾವುದೇ ಗೊಂದಲಗಳಿದ್ದಲ್ಲಿ ತಮ್ಮ ಹತ್ತಿರದ ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande