
ಬೆಂಗಳೂರು, 13 ಜುಲೈ (ಹಿ.ಸ.):
ಆ್ಯಂಕರ್:
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕರಾಮುವಿ) ವತಿಯಿಂದ ಬಿ.ಎಡ್. ಪ್ರವೇಶಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಪದವಿ ವಿದ್ಯಾರ್ಹತೆ ಹೊಂದಿರುವ ಹಾಗೂ ಹೆಚ್ಚುವರಿಯಾಗಿ ಟಿ.ಸಿ.ಎಚ್./ಡಿ.ಎಡ್. ಶಿಕ್ಷಣ ತರಬೇತಿ ಪಡೆದಿರುವ ಸೇವಾ ಶಿಕ್ಷಣ ಅಭ್ಯರ್ಥಿಗಳು ದೂರ ಶಿಕ್ಷಣದಲ್ಲಿ ಬಿ.ಎಡ್. ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಬಿ.ಎಡ್. ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 10, 2026 ಕೊನೆಯ ದಿನಾಂಕವಾಗಿದ್ದು, ಸಾಮಾನ್ಯ ಪ್ರವೇಶ ಪರೀಕ್ಷೆ ಆಗಸ್ಟ್ 16, 2026 ರಂದು ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಪ್ರಾದೇಶಿಕ ಕೇಂದ್ರ–01, ಮೊದಲನೇ ಮಹಡಿ, ಕೆ.ಎಸ್.ಆರ್.ಟಿ.ಸಿ. ಸ್ಯಾಟಲೈಟ್ ಬಸ್ ನಿಲ್ದಾಣ, ಮೈಸೂರು ರಸ್ತೆ, ಬಾಪೂಜಿನಗರ, ಬೆಂಗಳೂರು–560026 ಅಥವಾ ದೂರವಾಣಿ 080-26603664, ಮೊಬೈಲ್ 98805 26439 / 90195 26439 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.