256ನೇ ದಿನದ ಬಲ್ಡೋಟ ತೊಲಗಿಸಿ ಧರಣಿ : ರಾಜಕಾರಣಿಗಳು ದೂರ
ಕೊಪ್ಪಳ, 13 ಜುಲೈ (ಹಿ.ಸ.) ಆ್ಯಂಕರ್ : ನವೆಂಬರ್ 15ರಂದು ಪರಿಸರ ಮಾಲಿನ್ಯ ವಿರೋಧಿಸಿ ರಾಷ್ಟ್ರದ ಗಮನ ಸೆಳೆಯಲು ಮೇ ಸಾಹಿತ್ಯ ಮೇಳ ಬಳಗದಿಂದ ಕಾರ್ಖಾನೆ ಬಾಧಿತ ಹಿರೇಬಗನಾಳ ಗ್ರಾಮದಲ್ಲಿ ಎಚ್ಚರಿಕೆ ಸಮಾವೇಶ ನಡೆಸಲಾಗುವುದು ಎಂದು ಮಾನವ ಬಂಧುತ್ವ ವೇದಿಕೆಯ ಮುಖಂಡ ಟಿ. ರತ್ನಾಕರ ಅವರು ಬಲ್ಡೋಟ ತೊಲಗಿಸಿ 2
256ನೇ ದಿನದ ಬಲ್ಡೋಟ ತೊಲಗಿಸಿ ಧರಣಿ : ರಾಜಕಾರಣಿಗಳು ದೂರ


256ನೇ ದಿನದ ಬಲ್ಡೋಟ ತೊಲಗಿಸಿ ಧರಣಿ : ರಾಜಕಾರಣಿಗಳು ದೂರ


256ನೇ ದಿನದ ಬಲ್ಡೋಟ ತೊಲಗಿಸಿ ಧರಣಿ : ರಾಜಕಾರಣಿಗಳು ದೂರ


ಕೊಪ್ಪಳ, 13 ಜುಲೈ (ಹಿ.ಸ.)

ಆ್ಯಂಕರ್ : ನವೆಂಬರ್ 15ರಂದು ಪರಿಸರ ಮಾಲಿನ್ಯ ವಿರೋಧಿಸಿ ರಾಷ್ಟ್ರದ ಗಮನ ಸೆಳೆಯಲು ಮೇ ಸಾಹಿತ್ಯ ಮೇಳ ಬಳಗದಿಂದ ಕಾರ್ಖಾನೆ ಬಾಧಿತ ಹಿರೇಬಗನಾಳ ಗ್ರಾಮದಲ್ಲಿ ಎಚ್ಚರಿಕೆ ಸಮಾವೇಶ ನಡೆಸಲಾಗುವುದು ಎಂದು ಮಾನವ ಬಂಧುತ್ವ ವೇದಿಕೆಯ ಮುಖಂಡ ಟಿ. ರತ್ನಾಕರ ಅವರು ಬಲ್ಡೋಟ ತೊಲಗಿಸಿ 256ನೇ ದಿನದ ಧರಣಿ ನಿರತರನ್ನು ಉದ್ದೇಶಸಿ ಮಾತನಾಡಿದರು.

ಐಬಿಯಲ್ಲಿ ಸಭೆ ಜರುಗಿಸಿ ನಿರ್ಣಯ ಸ್ವೀಕರಿಸಿದಂತೆ ಈಗಿರುವ ಬಲ್ಡೋಟ ಹಾಗೂ ಮಾಲಿನ್ಯ ವಿರೋಧಿ ಹೋರಾಟಕ್ಕೆ ಮತ್ತಷ್ಟು ವೇಗ ಕೊಡಲು, ರಾಷ್ಟ್ರ ಮಟ್ಟಕ್ಕೆ ಈ ಸಮಸ್ಯೆ ಎತ್ತಿ ತೋರಿಸಲು ನರ್ಮದಾ ಬಚಾವೋ ಆಂದೋಲನ ನಾಯಕಿ ಮೇಧಾ ಪಾಟ್ಕರ್, ರೈತ ನಾಯಕ ರಾಕೇಶ ಟಿಕಾಯತ್, ದರ್ಶನ್ ಪಾಲ್,

ಚಿತ್ರನಟ ಪ್ರಕಾಶ್ ರಾಜ್, ಪರಿಸರ ಹೋರಾಟಗಾರ ಸೋನುಮ್ ವಾಂಗ್ಚುಕ್, ಬೃಂದಾ ಕಾರಟ್, ಜಿಗ್ನೇಶ್ ಮೇವಾನಿ, ನಾಗೇಶ್ ಹೆಗಡೆ, ನ್ಯಾ. ಗೋಪಾಲ ಗೌಡ,

ನ್ಯಾ. ನಾಗಮೋಹನ ದಾಸ, ಧಾರವಾಡದ ಎಸ್.ಆರ್ ಹಿರೇಮಠ ಅವರನ್ನು ಅತಿಥಿಗಳನ್ನಾಗಿ ಕರೆಯಿಸಿ ಮಾತನಾಡಿಸಲಾಗುವುದು. ಹೋರಾಟದ ಅನುಭವಗಳನ್ನು ಜನರಿಗೆ ತಿಳಿಸಿ, ಜಾಗೃತಿ ಮೂಡಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದರು.

ಮಾತು ಮುಂದವರೆಸಿ ಈ ಸಮಾವೇಶ ಸಂಪೂರ್ಣವಾಗಿ ರಾಜಕಾರಣಿಗಳಿಂದ ಅಂತರ ಕಾಯ್ದುಕೊಂಡು ಹೋರಾಟ ನಿರತ ಸಂಘಟನೆಗಳು, ಬಾಧಿತ ರೈತರನ್ನು ಸಂಘಟಿಸಿ ಬೃಹತ್ ಸಮಾವೇಶ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಗ್ರಹಿಸುತ್ತೇವೆ ಎಂದರು.

ಧರಣಿಯಲ್ಲಿ ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಶಂಭುಲಿಂಗಪ್ಪ ಹರಗೇರಿ, ಬಿ.ಜಿ. ಕರಿಗಾರ, ರಾಜಶೇಖರ ಏಳುಭಾವಿ, ಸಂಪಾದಕ ಡಾ. ಬಸವರಾಜ ಪೂಜಾರ, ವೈ.ಎಚ್. ಹಳ್ಳಿಕೇರಿ, ಮೂಕಪ್ಪ ಮೇಸ್ತ್ರಿ ಬಸಾಪುರ, ನಾಗರತ್ನಾ ಮಾದಿನೂರು, ಮಹಾದೇವಪ್ಪ ಮಾವಿನಮಡು, ಗವಿಸಿದ್ದಪ್ಪ ಮಾಲಿಪಾಟೀಲ್, ಶಿವಪ್ಪ ಜಲ್ಲಿ, ಮಲ್ಲಪ್ಪ ಮಾದಿನೂರು, ಮಂಜುನಾಥ ಕವಲೂರು, ಶಿವಪ್ಪ ಹಲಗೆರಿ, ಗಾಳೆಪ್ಪ ಇಂದ್ರಿಗಿ, ಗಂಗಮ್ಮ ಕುರುಗೋಡು ಮುಂತಾದವರು ಪಾಲ್ಗೊಂಡರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande