ಸಾಮಾನ್ಯರಂತೆ ಸಂತೆಗೆ ಬಂದು ತರಕಾರಿ ಖರೀದಿಸಿದ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ
ಬಾಗಲಕೋಟೆ, 12 ಜುಲೈ (ಹಿ.ಸ.): ಆ್ಯಂಕರ್ : ಜನಪ್ರತಿನಿಧಿಗಳು ಭದ್ರತಾ ಸಿಬ್ಬಂದಿ ಮತ್ತು ಪ್ರೋಟೋಕಾಲ್ ನಡುವೆ ಸಂಚರಿಸುವುದು ಸಾಮಾನ್ಯ. ಆದರೆ ಬಾಗಲಕೋಟೆಯ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ಯಾವುದೇ ಆಡಂಬರಕ್ಕೆ ಅವಕಾಶ ನೀಡದೇ ಸಾಮಾನ್ಯ ನಾಗರಿಕರಂತೆ ಸ್ಥಳೀಯ ಸಂತೆಗೆ ಆಗಮಿಸಿ ತರಕಾರಿ ಖರೀದಿಸುವ
ಸಂತೆ


ಬಾಗಲಕೋಟೆ, 12 ಜುಲೈ (ಹಿ.ಸ.):

ಆ್ಯಂಕರ್ : ಜನಪ್ರತಿನಿಧಿಗಳು ಭದ್ರತಾ ಸಿಬ್ಬಂದಿ ಮತ್ತು ಪ್ರೋಟೋಕಾಲ್ ನಡುವೆ ಸಂಚರಿಸುವುದು ಸಾಮಾನ್ಯ. ಆದರೆ ಬಾಗಲಕೋಟೆಯ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ಯಾವುದೇ ಆಡಂಬರಕ್ಕೆ ಅವಕಾಶ ನೀಡದೇ ಸಾಮಾನ್ಯ ನಾಗರಿಕರಂತೆ ಸ್ಥಳೀಯ ಸಂತೆಗೆ ಆಗಮಿಸಿ ತರಕಾರಿ ಖರೀದಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ಸಂತೆಯಲ್ಲಿ ವಿವಿಧ ತರಕಾರಿಗಳ ಬೆಲೆ, ಗುಣಮಟ್ಟ ಹಾಗೂ ಲಭ್ಯತೆಯ ಬಗ್ಗೆ ವ್ಯಾಪಾರಿಗಳೊಂದಿಗೆ ಆತ್ಮೀಯವಾಗಿ ಮಾತನಾಡಿದ ಅವರು, ಸ್ಥಳೀಯ ರೈತರು ಬೆಳೆದ ತಾಜಾ ತರಕಾರಿಗಳನ್ನು ಖರೀದಿಸಿದರು. ಈ ವೇಳೆ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಅವರೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿ ಸಂತಸ ವ್ಯಕ್ತಪಡಿಸಿದರು.

ಯಾವುದೇ ವಿಶೇಷ ಪ್ರೋಟೋಕಾಲ್ ಅಥವಾ ಗದ್ದಲವಿಲ್ಲದೆ ಸರಳವಾಗಿ ಸಂತೆಯಲ್ಲಿ ಸಂಚರಿಸಿ, ಇತರ ಗ್ರಾಹಕರಂತೆ ತರಕಾರಿ ಆಯ್ಕೆ ಮಾಡಿಕೊಂಡು ಖರೀದಿಸಿದ ನಾರಾಯಣಸಾ ಭಾಂಡಗೆ ಅವರ ಸರಳತೆ ಎಲ್ಲರ ಗಮನ ಸೆಳೆಯಿತು. ಅವರ ಈ ನಡೆ ಜನಸಾಮಾನ್ಯರೊಂದಿಗೆ ಹೊಂದಿರುವ ನಿಕಟ ಸಂಬಂಧವನ್ನು ಪ್ರತಿಬಿಂಬಿಸುವಂತಿತ್ತು.

ಸಂತೆಗೆ ಆಗಮಿಸಿದ್ದ ಹಲವರು ರಾಜ್ಯಸಭಾ ಸದಸ್ಯರೊಂದಿಗೆ ಫೋಟೋ ತೆಗೆಸಿಕೊಂಡು ಶುಭಾಶಯ ಕೋರಿದರು. ಜನರ ನಡುವೆ ಬೆರೆತು ಅವರ ಬದುಕನ್ನು ಅರಿಯುವ ಜನಪ್ರತಿನಿಧಿಗಳ ಅಗತ್ಯ ಇಂದು ಹೆಚ್ಚಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟರು.

ರಾಜಕೀಯ ಹುದ್ದೆಗಿಂತ ಸರಳ ಜೀವನಶೈಲಿ ಮತ್ತು ಜನಸ್ನೇಹಿ ನಡೆಗೆ ಆದ್ಯತೆ ನೀಡಿರುವ ನಾರಾಯಣಸಾ ಭಾಂಡಗೆ ಅವರ ಈ ಭೇಟಿ ಸಾಮಾಜಿಕ ಜಾಲತಾಣಗಳಲ್ಲಿಯೂ ಮೆಚ್ಚುಗೆಗೆ ಪಾತ್ರವಾಗಿದ್ದು, ಜನಪ್ರತಿನಿಧಿಯೊಬ್ಬರು ಸಾಮಾನ್ಯರಂತೆ ನಡೆದುಕೊಳ್ಳುವುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande