
ಕೋಲಾರ, ೧೨ ಜುಲೈ (ಹಿ.ಸ):
ಆ್ಯಂಕರ್ : ಈ ತಿಂಗಳ ಜುಲೈ ೨೭ ರಿಂದ ೨೯ ರವರೆಗೆ ಮೂರು ದಿನಗಳ ಕಾಲ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ಸನ್ನಿಧಿಯಲ್ಲಿ ಶ್ರದ್ಧಾಭಕ್ತಿಗಳಿಂದ ಗುರುಪೂಜಾ ಸಂಗೀತೋತ್ಸವವನ್ನು ಆಚರಿಸಲಾಗುವುದು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ತಿಳಿಸಿದರು.
ಕೈವಾರದ ಶ್ರೀ ಯೋಗಿನಾರೇಯಣ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗುರುಪೂಜಾ ಸಂಗೀತೋತ್ಸವದ ವಿವಿರಗಳನ್ನು ನೀಡಿದರು.
ಕೈವಾರದ ಗುರುಪೂಜಾ ಸಂಗೀತೋತ್ಸವವು ಈ ಭಾಗದಲ್ಲಿ ನಡೆಯುವ ಒಂದು ಸಾಂಸ್ಕöÈತಿಕ ಹಬ್ಬ. ಹರಿ-ಹರ ಕ್ಷೇತ್ರವಾಗಿರುವ ಕೈವಾರವು ಭಕ್ತರ ಭಕ್ತಿಯ ಕೇಂದ್ರವಾಗಿದೆ. ಇಲ್ಲಿ ಪ್ರತಿನಿತ್ಯ ಭಜನೆ, ಹರಿಕಥೆ, ಸಂಗೀತ ಮುಂತಾದ ಭಕ್ತಿಯ ಸಮರ್ಪಣೆ ಮಾಡುವ ಕಾರ್ಯಕ್ರಮಗಳಿಗೆ ಒತ್ತನ್ನು ನೀಡಲಾಗುತ್ತಿದೆ. ಭಕ್ತಿಯ ಮಾರ್ಗದಲ್ಲಿ ಕೈವಾರ ಮಠವು ನಡೆಯುತ್ತಿದೆ. ದೇಶದ ನಾನಾ ಭಾಗಗಳಿಂದ ಸಂಗೀತಗಾರರು, ಭಕ್ತರು ಬಂದು ತಮ್ಮ ಸೇವೆಯನ್ನು ಸದ್ಗುರು ತಾತಯ್ಯನವರಿಗೆ ಸಮರ್ಪಿಸುತ್ತಿದ್ದಾರೆ. ಸದ್ಗುರು ಕೈವಾರ ತಾತಯ್ಯನವರ ೩೦೦ ವರ್ಷದ ಜಯಂತಿಯನ್ನು ವರ್ಷಪೂರ್ತಿ ಶ್ರೀಮಠದ ವತಿಯಿಂದ ಆಚರಿಸಲಾಗುತ್ತಿದೆ. ಭಕ್ತಿಯಿಂದ ಗುರುಪೂಜಾ ಸಂಗೀತೋತ್ಸವದಲ್ಲಿ ಭಾಗವಹಿಸಿ ಎಂದು ಮನವಿಯನ್ನು ಮಾಡಿದರು.
ಶ್ರೀಯೋಗಿನಾರೇಯಣ ನಾದಸುಧಾರಸ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್ ರವರು ಮಾತನಾಡಿ ಕೈವಾರದಲ್ಲಿ ನಡೆಯುವ ಗುರುಪೂಜಾ ಸಂಗೀತೋತ್ಸವದಲ್ಲಿ ಎಲ್ಲಾ ವೈವಿಧ್ಯಮಯ ಕಲೆಗಳನ್ನು ಒಂದೇ ವೇದಿಕೆಯಲ್ಲಿ ಕಾಣಬಹುದಾಗಿದೆ. ಸ್ಥಳೀಯ ಕಲಾವಿದರನ್ನು ಒಳಗೊಂಡಂತೆ ಹಲವಾರು ಸಂಗೀತ ಕಲಾವಿದರುಗಳಿಂದ ನಿರಂತರವಾಗಿ ೭೨ ಗಂಟೆಗಳು ಸಂಗೀತದ ರಸದೌತಣವಿರುತ್ತದೆ ಎಂದರು.
ಜುಲೈ ೨೭ ರಂದು ಪ್ರಾತ:ಕಾಲದಲ್ಲಿ ಘಂಟಾನಾದ, ಸುಪ್ರಭಾತ, ಗೋಪೂಜೆ, ಸಾಮೂಹಿಕ ನಾಮ ಸಂಕೀರ್ತನೆಯೊAದಿಗೆ ಸಂಗೀತೋತ್ಸವಕ್ಕೆ ಚಾಲನೆಯನ್ನು ನೀಡಲಾಗುತ್ತದೆ. ಸಂಜೆ ವಿಶೇಷ ಕಾರ್ಯಕ್ರಮಗಳಲ್ಲಿ ದೆಹಲಿಯ ಸರಸ್ವತಿ ರಾಜಗೋಪಾಲನ್ ರವರಿಂದ ವೀಣಾವಾದನ, ಮಹಾಲಿಂಗಯ್ಯ ಮಠದ್ ತಂಡದವರಿಂದ ಗಾಯನ, ಬೆಂಗಳೂರಿನ ವಿನಯ್ಶರ್ವ ಹಾಗೂ ತಿರುಪತಿಯ ಬಿ.ರಘುನಾಥ್ ರವರಿಂದ ಗಾಯನ ಕಾರ್ಯಕ್ರಮ ಇರುತ್ತದೆ ಎಂದರು.
ಜುಲೈ ೨೮ ರಂದು ಸುಮಂತ್ ಹಾಗೂ ಮಾಳವಿರವರಿಂದ ಪಿಟೀಲು ಸೋಲೋ, ಶಂಕರ್ ನಂಬೂದರಿ ರವರಿಂದ ಗಾಯನ, ಅಮಿತ್ ಎ.ನಾಡಿಗ್ ರವರಿಂದ ಕೊಳಲುವಾದನ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್ ತಂಡದವರಿಂದ ಗಾಯನ, ಹೈದ್ರಾಬಾದ್ನ ಎಸ್.ಎಂ.ಸುಭಾನಿ ರವರಿಂದ ಮ್ಯಾಂಡೋಲಿನ್ ವಾದನ, ನೂಪುರ ಫೈನ್ ಆರ್ಟ್ಸ್ ರೂಪಾರಾಜೇಶ್ ತಂಡದವರಿಂದ ಕೂಚಿಪುಡಿ ನೃತ್ಯರೂಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜುಲೈ ೨೯ ಗುರುಪೂರ್ಣಿಮ ದಿನ ಬೆಳಿಗ್ಗೆ ೧೦.೦೦ಗೆ ನಾಡಿನ ಪ್ರಸಿದ್ಧ ವಿದ್ವಾಂಸರುಗಳಿಂದ ತಾತಯ್ಯನವರು ರಚಿಸಿರುವ ಪಂಚರತ್ನ ಕೀರ್ತನೆಗಳ ಗೋಷ್ಠಿಗಾಯನ ನಡೆಯಲಿದೆ. ನಂತರ ಸದ್ಗುರು ಯೋಗಿ ನಾರೇಯಣ ತಾತಯ್ಯನವರಿಗೆ ವಿಶೇಷ ಗುರುಪೂಜೆಯನ್ನು ನಡೆಸಲಾಗುವುದು. ಸಂಜೆ ವಿಶೇಷ ಕಾರ್ಯಕ್ರಮಗಳಲ್ಲಿ ಎ.ಸಿ.ರಾಜಶೇಖರ್ ತಂಡದವರಿಂದ ನಾದಸ್ವರ ತವಿಲ್ ವಾದನ, ಕೋಲಾರದ ಡಿ.ಆರ್.ರಾಜಪ್ಪ ತಂಡದವರಿAದ ಗಾಯನ, ವಿಶಾಖಪಟ್ನಂ ಪಂತುಲ ರಮಾ ಗಾಯನ, ಕೇರಳದ ಕೆ.ಎಸ್.ವಿಷ್ಣುದೇವ್ ಗಾಯನ, ಮೈಸೂರು ನಾಗರಾಜ್ ಮತ್ತು ಡಾ.ಮೈಸೂರು ಮಂಜುನಾಥರವರಿಂದ ಪಿಟೀಲು ಸೋಲೋ, ನಯನಾ ರಮೇಶ್ ಭರತನಾಟ್ಯ, ಕೇರಳದ ಕಣ್ಣನ್ ಮತ್ತು ಆನಂದ್ ನಾದಸ್ವರ, ಶ್ರೀಲಂಕಾದ ಬದಲೆಶಂಕರ್ ಹಾಗೂ ವಿಳಂಬಾಕಂ ಗಣಪತಿ ರವರಿಂದ ತವಿಲ್ ವಾದನದ ಕಾರ್ಯಕ್ರಮವಿರುತ್ತದೆ ಎಂದರು.
ಸಂಗೀತೋತ್ಸವದಲ್ಲಿ ಹಿರಿಯ ಕಲಾವಿದರಾದ ಪದ್ಮಶ್ರೀ ಪುರಸ್ಕöÈತ ತಿರುವಾರೂರು ಭಕ್ತವತ್ಸಲಂ, ಚೆನ್ನೆöÊನ ಕೆ.ವಿ.ಪ್ರಸಾದ್, ತಿರುಚಿ ಬಿ.ಹರಿಕುಮಾರ್, ಬೆಂಗಳೂರು ಬಿ.ರಾಜಶೇಖರ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಮಾಹಿತಿಯನ್ನು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀಯೋಗಿನಾರೇಯಣ ಮಠದ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಖಜಾಂಚಿಗಳಾದ ಆರ್.ಪಿ.ಎಂ.ಸತ್ಯ ನಾರಾಯಣ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್