
ಕೋಲಾರ, ೧೨ ಜುಲೈ (ಹಿ.ಸ):
ಆ್ಯಂಕರ್ : ಜಿಲ್ಲೆಯಲ್ಲಿ ತರಕಾರಿ ಬೆಳೆಗಳಿಂದ ಸಾಲದ ಸುಳಿಯಲ್ಲಿ ಇರುವ ರೈತರಿಗೆ ಹಾಲು ಉತ್ಪಾದನೆಯು ರೈತರಿಗೆ ಕೇವಲ ಉಪಕಸುಬಾಗಿರದೆ ಪ್ರತ್ಯೇಕವಾದ ಲಾಭದಾಯಕ ಉದ್ಯಮವಾಗಬೇಕಾಗಿದೆ ಎಂದು ಕೋಮುಲ್ ನಿರ್ದೇಶಕ ಚಂಜಿಮಲೆ ಬಿ.ರಮೇಶ್ ತಿಳಿಸಿದರು
ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ಚನ್ನಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೨-೨೬ ಸಾಲಿನ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದರು. ರೈತರು ಡೇರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಿದರೆ ಉತ್ತಮ ಆದಾಯ ಗಳಿಸಲು ಸಾಧ್ಯವಾಗುತ್ತದೆ. ಕೃಷಿ ಉತ್ಪನ್ನಗಳ ಬೆಲೆ ಏರಿಳಿತವಾಗುವ ಸಂದರ್ಭದಲ್ಲಿ ಹಾಲಿಗೆ ಮಾತ್ರ ನಿಗದಿತ ಬೆಲೆ ದೊರೆಯುವುದರಿಂದ ಹೈನುಗಾರಿಕೆ ರೈತರಿಗೆ ಸ್ಥಿರ ಆದಾಯದ ಮೂಲವಾಗಿದೆ ಎಂದು ತಿಳಿಸಿದರು.
ಹಳ್ಳಿಗಳಲ್ಲಿ ಪ್ರತಿಯೊಬ್ಬ ರೈತರು ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳುವ ಜೊತೆಗೆ ತಮ್ಮ ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಕೋಮುಲ್ ಒಕ್ಕೂಟದಿಂದ ದೊರೆಯುವ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಮತ್ತಷ್ಟು ಅಭಿವೃದ್ಧಿ ಹೊಂದುವಂತೆ ಆಗಬೇಕು ಎಂದರು
ಸಭೆಯಲ್ಲಿ ಸಂಘದ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಲಾಯಿತು. ಈ ಸಾಲಿನಲ್ಲಿ ಸಂಘವು ₹೨೦ ಲಕ್ಷ ಆದಾಯ ಗಳಿಸಿದ್ದು, ₹೧೧ ಲಕ್ಷ ವೆಚ್ಚವನ್ನು ಕಳೆದು ₹೯ ಲಕ್ಷ ನಿವ್ವಳ ಲಾಭ ದಾಖಲಿಸಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಕೋಮುಲ್ ಉಪ ವ್ಯವಸ್ಥೆಯ ವ್ಯವಸ್ಥಾಪಕ ಡಾ.ಮಹೇಶ್, ವಿಸ್ತಾರಣಾಧಿಕಾರಿ ಡಾ.ಅಶ್ವಕ್ ಅಹಮದ್, ಗ್ರಾಮದ ಹಿರಿಯರಾದ ಸಿ.ಡಿ ರಾಮಚಂದ್ರೇಗೌಡ, ರಮೇಶ್, ಚನ್ನಸಂದ್ರ ಡೇರಿ ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ಲಕ್ಷ್ಮೀ, ಕಾರ್ಯದರ್ಶಿ ಶಿವಾನಂದ್, ಸೇರಿದಂತೆ ಆಡಳಿತ ಮಂಡಳಿಯ ನಿರ್ದೇಶಕರು, ಹಾಲು ಉತ್ಪಾದಕರು ಹಾಗೂ ರೈತರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್