
ಧಾರವಾಡ, 12 ಜುಲೈ (ಹಿ.ಸ.):
ಆ್ಯಂಕರ್:
ಧಾರವಾಡ ಜಿಲ್ಲೆಯಲ್ಲಿ 2025-26 ನೇ ಸಾಲಿನ ಮಲ್ಲಕಂಭ ಕ್ರೀಡೋತ್ಸವವನ್ನು ಜುಲೈ 17 ಮತ್ತು 18, 2026 ರಂದು ನೂತನವಾಗಿ ನಿರ್ಮಿಸಲಾದ ಕ್ರೀಡಾ ಸಂಕೀರ್ಣದಲ್ಲಿ (ಡಿ.ಸಿ.ಕಂಪೌಂಡ ಹತ್ತಿರ) ಆಯೋಜಿಸಲಾಗಿದೆ.
ಆಸಕ್ತಿಯುಳ್ಳ 14 ವರ್ಷ ಒಳಪಟ್ಟ ಮತ್ತು 14 ವರ್ಷ ಮೇಲ್ಪಟ್ಟ ಬಾಲಕ, ಬಾಲಕಿಯರಿಗೆ ವೈಯಕ್ತಿಕ ಮತ್ತು ಗುಂಪು ವಿಭಾಗಗಳಲ್ಲಿ ಪೋಲ್ ಮತ್ತು ರೋಪ್ ಮಲ್ಲಕಂಭ ಕ್ರೀಡೆಯನ್ನು ನಡೆಸಲಾಗುವುದು.
ಮಲ್ಲಕಂಭ ಕ್ರೀಡೋತ್ಸವದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಜುಲೈ 13, 2026 ರೊಳಗಾಗಿ ಸಂಘಟಕರಲ್ಲಿ ನೋಂದಾಯಿಸಿಕೊಳ್ಳಬೇಕು.
ತಡವಾಗಿ ಬಂದ ತಂಡಗಳನ್ನು ಕ್ರೀಡೋತ್ಸವದಲ್ಲಿ ಭಾಗವಹಿಸಲು ಪರಿಗಣಿಸಲಾಗುವುದಿಲ್ಲ.
ಭಾಗವಹಿಸುವ ಕ್ರೀಡಾಪಟುಗಳು ಜುಲೈ 16, 2026 ರಂದು ಮಧ್ಯಾಹ್ನದ ನಂತರ ನೂತನವಾಗಿ ನಿರ್ಮಿಸಲಾದ ಕ್ರೀಡಾ ಸಂಕೀರ್ಣ (ಡಿ.ಸಿ.ಕಂಪೌಂಡ ಹತ್ತಿರ) ಧಾರವಾಡದಲ್ಲಿ ವರದಿ ಮಾಡಿಕೊಳ್ಳತಕ್ಕದ್ದು, ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ: 0836-2447424 ಅಥವಾ ಮೊಬೈಲ್ ನಂ:9535330378, 6361629305 ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.