ರಾಯಚೂರು ನಗರದ ಮಾಜಿ ಶಾಸಕ ಸೈಯದ್ ಯಾಸೀನ್ ನಿಧನ
ರಾಯಚೂರು, 12 ಜುಲೈ (ಹಿ.ಸ.): ಆ್ಯಂಕರ್ : ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸೈಯದ್ ಯಾಸೀನ್ (74) ಅವರು ಅನಾರೋಗ್ಯದ ಕಾರಣದಿಂದ ಇಂದು ಬೆಳಿಗ್ಗೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ನಾಲ್ಕು ಜನ ಗಂಡು ಮಕ್ಕಳು ಹಾಗೂ ಅಪಾರ ಬಂಧು-ಬಳಗ, ಅಭಿಮಾನಿಗಳನ್ನು ಅಗ
Former Raichur City MLA Syed Yasin passes away


Former Raichur City MLA Syed Yasin passes away


Former Raichur City MLA Syed Yasin passes away


Former Raichur City MLA Syed Yasin passes away


Former Raichur City MLA Syed Yasin passes away


Former Raichur City MLA Syed Yasin passes away


Former Raichur City MLA Syed Yasin passes away


Former Raichur City MLA Syed Yasin passes away


ರಾಯಚೂರು, 12 ಜುಲೈ (ಹಿ.ಸ.):

ಆ್ಯಂಕರ್ : ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸೈಯದ್ ಯಾಸೀನ್ (74) ಅವರು ಅನಾರೋಗ್ಯದ ಕಾರಣದಿಂದ ಇಂದು ಬೆಳಿಗ್ಗೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ನಾಲ್ಕು ಜನ ಗಂಡು ಮಕ್ಕಳು ಹಾಗೂ ಅಪಾರ ಬಂಧು-ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ. ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ಅಳಿಯರಾಗಿದ್ದ ಸೈಯದ್ ಯಾಸೀನ್ ಅವರು ರಾಯಚೂರು ಜಿಲ್ಲೆಯ ಹಿರಿಯ ಹಾಗೂ ಪ್ರಭಾವಿ ರಾಜಕಾರಣಿಯಾಗಿದ್ದರು.

ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಒಟ್ಟು ಆರು ಬಾರಿ ಸ್ಪರ್ಧಿಸಿದ್ದ ಅವರು, ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1999 ಹಾಗೂ 2008ರಲ್ಲಿ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದ ಅವರು, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಹಾಗೂ ಕೆಪಿಸಿಸಿಯ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುವ ಮೂಲಕ ಪಕ್ಷ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿ ನಿಭಾಯಿಸಿದ್ದರು.

ಯಾಸೀನ್ ಅವರ ರಾಜಕೀಯ ಜೀವನವು ಹಲವು ಏಳು-ಬೀಳುಗಳಿಂದ ಕೂಡಿತ್ತು. 1994 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದಾಗ ಎಂ.ಎಸ್ ಪಾಟೀಲ್ ವಿರುದ್ಧ ಸೋಲನ್ನಪ್ಪಿದ್ದರು. ಆದರೆ, 1999 ರ ಚುನಾವಣೆಯಲ್ಲಿ ಬಿಜೆಪಿಯ ಎ.ಪಾಪಾರೆಡ್ಡಿಯವರ ವಿರುದ್ಧ 5,556 ಮತಗಳ ಅಂತರದಿಂದ ಗೆದ್ದು ಮೊದಲ ಬಾರಿಗೆ ಶಾಸಕರಾದರು. ನಂತರ 2004 ರಲ್ಲಿ ಮತ್ತೆ ಎ.ಪಾಪರೆಡ್ಡಿಯವರ ವಿರುದ್ಧವೇ 9,596 ಮತಗಳಿಂದ ಸೋಲನುಭವಿಸಿದರು. 2008 ರ ಚುನಾವಣೆಯಲ್ಲಿ ಭರ್ಜರಿ ಪುನರಾಗಮನ ಮಾಡಿದ ಅವರು, ಜೆಡಿಎಸ್ನ ಎಂ.ಈರಣ್ಣನವರ ವಿರುದ್ಧ 8,401 ಮತಗಳಿಂದ ಗೆದ್ದು ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

ಅವರ ಕೊನೆಯ ಎರಡು ಚುನಾವಣೆಗಳು ಡಾ.ಎಸ್.ಶಿವರಾಜ್ ಪಾಟೀಲ್ ಅವರ ವಿರುದ್ಧದ ತೀವ್ರ ಪೈಪೋಟಿಗೆ ಸಾಕ್ಷಿಯಾಗಿದ್ದವು. 2013 ರ ಚುನಾವಣೆಯಲ್ಲಿ ಸೈಯದ್ ಯಾಸಿನ್ 37,392 ಮತಗಳನ್ನು ಪಡೆದರೆ, ಜೆಡಿಎಸ್ನಿಂದ ಸ್ಪರ್ಧಿಸಿದ್ದ ಡಾ.ಶಿವರಾಜ್ ಪಾಟೀಲ್ 45,263 ಮತಗಳನ್ನು ಗಳಿಸಿ 7,871 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಅದೇ ರೀತಿ 2018 ರ ಚುನಾವಣೆಯಲ್ಲಿ ಯಾಸಿನ್ ಅವರು 45,520 ಮತಗಳನ್ನು ಪಡೆದರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ.ಶಿವರಾಜ್ ಪಾಟೀಲ್ 56,511 ಮತಗಳನ್ನು ಗಳಿಸಿ 10,991 ಮತಗಳಿಂದ ಜಯಭೇರಿ ಬಾರಿಸಿದರು. ಈ ಸರಣಿ ಸೋಲುಗಳ ಬಳಿಕ ಯಾಸೀನ್ ಅವರು ಸಕ್ರಿಯ ರಾಜಕೀಯದಿಂದ ಕೊಂಚ ದೂರ ಸರಿದಿದ್ದರು.

ಮಾಜಿ ಶಾಸಕರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ರಾಯಚೂರಿಗೆ ತರಲಾಗುತ್ತಿದ್ದು, ರಾಯಚೂರು ನಗರದ ಕಮಲಿವಾಲೆ ಬಾಬಾ ಕಬರಸ್ಥಾನದಲ್ಲಿ ಇಂದು ಸಾಯಂಕಾಲ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಸೈಯದ್ ಯಾಸೀನ್ ಅವರ ನಿಧನಕ್ಕೆ ಜಿಲ್ಲೆಯ ರಾಜಕೀಯ ಮುಖಂಡರು ಮತ್ತು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande