ಲೆಕ್ಕಪರಿಶೋಧನಾ ಇಲಾಖೆಯ ಹಿರಿಯ ಉಪನಿರ್ದೇಶಕ ವಿಶ್ವಾಸಗೆ ಗೌರವ ಡಾಕ್ಟರೇಟ್
ಲೆಕ್ಕಪರಿಶೋಧನಾ ಇಲಾಖೆಯ ಹಿರಿಯ ಉಪನಿರ್ದೇಶಕ ವಿಶ್ವಾಸ್ಗೆ 'ಗೌರವ ಡಾಕ್ಟರೇಟ್'
ವಿಶ್ವಾಸ್


ಕೋಲಾರ, ೧೨ ಜುಲೈ (ಹಿ.ಸ):

ಆ್ಯಂಕರ್ : ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಹಿರಿಯ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ, ಮೂಲತಃ ಕೋಲಾರದವರಾದ ವಿಶ್ವಾಸ್ ಎಸ್.ವಿ. ಅವರ ದಕ್ಷ ಸೇವೆ ಹಾಗೂ ವೃತ್ತಿಪರ ಸಾಧನೆಯನ್ನು ಗುರುತಿಸಿ ನವದೆಹಲಿಯ 'ವಿಶ್ವ ಸಂಸ್ಕತಿ ಹಾಗೂ ಪರಿಸರ ಸಂರಕ್ಷಣಾ ಆಯೋಗ'ವು ಪ್ರತಿಷ್ಠಿತ 'ಗೌರವ ಡಾಕ್ಟರೇಟ್' ಪ್ರಕಟಿಸಿದೆ.

ಲೆಕ್ಕಪರಿಶೋಧನಾ ವಿಭಾಗದ ಕುರಿತು ಅವರು ಮಂಡಿಸಿದ ಮಹಾಪ್ರಬಂಧ ಹಾಗೂ ಇಲಾಖೆಯಲ್ಲಿ ಅವರು ಸಲ್ಲಿಸುತ್ತಿರುವ ದಕ್ಷ ಮತ್ತು ಪಾರದರ್ಶಕ ಸೇವೆಯನ್ನು ಪರಿಗಣಿಸಿ, ಆಯೋಗವು ೨೦೨೬ನೇ ಸಾಲಿನ ಈ ಅತ್ಯುನ್ನತ ಪುರಸ್ಕಾರಕ್ಕೆ ಅವರನ್ನು ಆಯ್ಕೆ ಮಾಡಿದೆ.

ಇದೇ ಜುಲೈ ೧೮ರಂದು ನವದೆಹಲಿಯಲ್ಲಿ ನಡೆಯಲಿರುವ ಆಯೋಗದ ಭವ್ಯ ಘಟಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶ್ವಾಸ್ ಅವರು ಅಧಿಕೃತವಾಗಿ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಲಿದ್ದಾರೆ.

ಮೂಲತಃ ಕೋಲಾರ ನಗರದ ೧೩ನೇ ವಾರ್ಡ್ನ ಪಿ.ಸಿ. ಬಡಾವಣೆ ನಿವಾಸಿಯಾಗಿರುವ ವಿಶ್ವಾಸ್ ಅವರು, ರಾಜ್ಯ ಮಟ್ಟದ ಉನ್ನತ ಹುದ್ದೆಯಲ್ಲಿದ್ದು ತಮ್ಮ ವೃತ್ತಿಪರತೆಯ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಭಾರತ ಸರ್ಕಾರದ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ ಈ ಡಾಕ್ಟರೇಟ್ ಲಭಿಸುತ್ತಿರುವುದು ಅವರ ವೃತ್ತಿಜೀವನದ ಪ್ರಮುಖ ಮೈಲುಗಲ್ಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande