
ಜಮ್ಮು, 12 ಜುಲೈ (ಹಿ.ಸ.):
ಆ್ಯಂಕರ್:
ವಾರ್ಷಿಕ ಅಮರನಾಥ ಯಾತ್ರೆಯ 11ನೇ ತಂಡದಲ್ಲಿ 9,153ಕ್ಕೂ ಹೆಚ್ಚು ಭಕ್ತರು ಭಾನುವಾರ ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸದಿಂದ ಬಿಗಿ ಭದ್ರತೆಯ ನಡುವೆ ಪವಿತ್ರ ಅಮರನಾಥ ಗುಹೆಯತ್ತ ಪ್ರಯಾಣ ಬೆಳೆಸಿದರು.
ಅಧಿಕಾರಿಗಳ ಮಾಹಿತಿ ಪ್ರಕಾರ, ಈ ತಂಡದಲ್ಲಿ 2,345 ಮಹಿಳೆಯರು ಹಾಗೂ 18 ಮಕ್ಕಳು ಸೇರಿದ್ದಾರೆ. ಒಟ್ಟು 359 ವಾಹನಗಳಲ್ಲಿ ಎರಡು ಪ್ರತ್ಯೇಕ ಬೆಂಗಾವಲು ತಂಡಗಳಾಗಿ ಭಕ್ತರನ್ನು ಬಾಲ್ತಾಲ್ ಮತ್ತು ಪಹಲ್ಗಾಮ್‌ನ ನುನ್ವಾನ್ ಮೂಲ ಶಿಬಿರಗಳಿಗೆ ಕಳುಹಿಸಲಾಯಿತು. ಯಾತ್ರಿಕರ ಸುರಕ್ಷತೆಗಾಗಿ ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಗಿ ಭದ್ರತೆ, ವೈದ್ಯಕೀಯ ನೆರವು, ಸಂಚಾರ ನಿಯಂತ್ರಣ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.
ಜುಲೈ 3ರಂದು ಆರಂಭವಾದ ಅಮರನಾಥ ಯಾತ್ರೆಯಲ್ಲಿ ಇದುವರೆಗೆ 2.30 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಹಿಮ ಶಿವಲಿಂಗದ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. 57 ದಿನಗಳ ಕಾಲ ನಡೆಯಲಿರುವ ಈ ಯಾತ್ರೆಯು ಆಗಸ್ಟ್ 28ರಂದು ರಕ್ಷಾಬಂಧನದಂದು ಸಮಾಪ್ತಿಯಾಗಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.