
ಕೋಲಾರ,ಜು.೧೧ (ಹಿ.ಸ):
ಆ್ಯಂಕರ್ : ಏಳನೇ ಓಪನ್ ಅಂತರ ಜಿಲ್ಲಾಮಟ್ಟದ ಪ್ರೋಪಾತ್ ಅಕಾಡೆಮಿ ವತಿಯಿಂದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಹಾಗೂ ೬ನೇ ಅಂತರ ಜಿಲ್ಲಾಮಟ್ಟದ ವೇದಿಕ್ ಮ್ಯಾಥಮೆಟಿಕ್ಸ್ ಸ್ಪರ್ಧೆಯನ್ನು ಅಕ್ಟೋಬರ್ ೮ ರಂದು ರಂದು ಕೋಲಾರದ ಸ್ಕೌಟ್ಸ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಪ್ರೋಪಾತ್ ಅಕಾಡೆಮಿ ನಿರ್ದೇಶಕ ವೀರೇಶ್ ತಿಮ್ಮಾಪುರ್ ಪ್ರತಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ೫ ರಿಂದ ೧೨ ವರ್ಷದ ಮಕ್ಕಳಿಗೆ ಅಬಾಕಸ್ ಸ್ಪರ್ಧೆ ಹಾಗೂ ೧೨ ವರ್ಷ ಮೇಲ್ಪಟ್ಟ ಮಕ್ಕಳಿಗೆ ವೇದಿಕ್ ಮ್ಯಾಥಮೆಟಿಕ್ಸ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಈ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭವು ಚನ್ನಯ್ಯ ರಂಗಮಂದಿರದಲ್ಲಿ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಲು ಶೈಕ್ಷಣಿಕ ಸ್ಪರ್ಧೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ಹೆಸರನ್ನು ನೋಂದಾಯಿಸಲು ಕೊನೆಯ ದಿನಾಂಕ ೧೫-೦೭-೨೦೨೬. ಹೆಚ್ಚಿನ ಮಾಹಿತಿಗಾಗಿ ೯೬೦೬೯೬೦೦೧೧ ಸಂಪರ್ಕಿಸಬೇಕಾಗಿ ಕೋರಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್