ಕೊಪ್ಪಳ : ಪ್ರವಾಸೋದ್ಯಮ : ಹೋಮ್ಸ್ಟೇ ನೋಂದಣಿ ಕಡ್ಡಾಯ
ಕೊಪ್ಪಳ, 10 ಜುಲೈ (ಹಿ.ಸ.) ಆ್ಯಂಕರ್: ರಾಜ್ಯದ ವ್ಯಾಪ್ತಿಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಹೋಮ್ಸ್ಟೇಗಳನ್ನು ಪ್ರಾರಂಭಿಸಲು ಅಥವಾ ಸ್ಥಾಪಿಸಲು ಕರ್ನಾಟಕ ಹೋಮ್ಸ್ಟೇ ನೋಂದಣಿ ನಿಯಮಾವಳಿಗಳ ಪ್ರಕಾರ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಅದರಂತೆ ಕೊಪ್ಪಳ ಜಿಲ
ಕೊಪ್ಪಳ : ಪ್ರವಾಸೋದ್ಯಮ : ಹೋಮ್ಸ್ಟೇ ನೋಂದಣಿ ಕಡ್ಡಾಯ


ಕೊಪ್ಪಳ, 10 ಜುಲೈ (ಹಿ.ಸ.)

ಆ್ಯಂಕರ್: ರಾಜ್ಯದ ವ್ಯಾಪ್ತಿಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಹೋಮ್ಸ್ಟೇಗಳನ್ನು ಪ್ರಾರಂಭಿಸಲು ಅಥವಾ ಸ್ಥಾಪಿಸಲು ಕರ್ನಾಟಕ ಹೋಮ್ಸ್ಟೇ ನೋಂದಣಿ ನಿಯಮಾವಳಿಗಳ ಪ್ರಕಾರ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

ಅದರಂತೆ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಸ್ತುತ ಹೋಮ್ಸ್ಟೇ ನಡೆಸುತ್ತಿರುವ ಹಾಗೂ ಹೊಸದಾಗಿ ಹೋಮ್ಸ್ಟೇ ಪ್ರಾರಂಭಿಸಲು ಆಸಕ್ತಿ ಹೊಂದಿರುವ ಮಾಲೀಕರು ಅಗತ್ಯ ದಾಖಲೆಗಳೊಂದಿಗೆ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್ಸೈಟ್ ಆದ https://portal.karnatakatourism.org ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಲು ಸೂಚಿಸಲಾಗಿದೆ.

ಹೆಚ್ಚಿನ ವಿವರ ಹಾಗೂ ಮಾಹಿತಿಗಾಗಿ ಸಾರ್ವಜನಿಕರು ಮತ್ತು ಹೋಮ್ಸ್ಟೇ ಮಾಲೀಕರು ಜಿಲ್ಲಾಡಳಿತ ಭವನದ 2ನೇ ಮಹಡಿಯಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬೇಕು ಅಥವಾ ಕಚೇರಿಯ ಸಹಾಯವಾಣಿ ಸಂಖ್ಯೆ: 08539-225566 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande