
ಬಳ್ಳಾರಿ, 10 ಜುಲೈ (ಹಿ.ಸ.)
ಆ್ಯಂಕರ್ : ಪ್ರಸ್ತಕ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಈಗಾಗಲೇ ಜಿಲ್ಲೆಯಲ್ಲಿ ಆರಂಭವಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತೋಟಗಾರಿಕೆ ಜಂಟಿ ನಿರ್ದೇಶಕ ಶಶಿಕಾಂತ ಕೋಟಿಮನಿ ಅವರು ಕೋರಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಸಂಭವಿಸಬಹುದಾದ ಅಧಿಕ ಮಳೆ, ನೆರೆ/ಪ್ರವಾಹ, ಬೆಳೆ ಮುಳುಗಡೆ, ದೀರ್ಘಾಕಾಲದ ತೇವಾಂಶ ಕೊರತೆ, ತೀವ್ರ ಬರಗಾಲ ಹಾಗೂ ಆಲಿಕಲ್ಲು ಮಳೆ, ಮೇಘಾಸ್ಫೋಟ, ನೈಸರ್ಗಿಕ ಬೆಂಕಿ ಅವಗಡಗಳು ಮತ್ತು ಕೋಯ್ಲೋತ್ತರ ನಷ್ಟಗಳಿಂದ ಬೆಳೆ ಹಾನಿಯಾದಲ್ಲಿ ವಿಮಾ ಸಂಸ್ಥೆಗಳ ಮೂಲಕ ರೈತರಿಗೆ ಪರಿಹಾರ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಪ್ರಸ್ತುತ ಸಾಲಿಗೆ ಎಸ್ಬಿಐ ಜನರಲ್ ಇನ್ಸುರೆನ್ಸ್ ಕಂಪನಿಯನ್ನು ವಿಮಾ ಸಂಸ್ಥೆಯಾಗಿ ಆಯ್ಕೆ ಮಾಡಲಾಗಿದೆ.
*ಬೆಳೆವಾರು ವಿಮೆ ವಿವರಗಳು:*
ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿಗೆ ಕೆಂಪು ಮೆಣಸಿನಕಾಯಿ (ನೀರಾವರಿ) ಮತ್ತು ಈರುಳ್ಳಿ (ನೀರಾವರಿ) ಬೆಳೆಗಳನ್ನು ವಿಮೆಗೆ ಒಳಪಡಿಸಲಾಗಿದೆ.
*ಕೆಂಪು ಮೆಣಸಿನಕಾಯಿ (ನೀರಾವರಿ):* ಪ್ರತಿ ಹೆಕ್ಟೇರ್ ವಿಮಾ ಮೊತ್ತ ರೂ. 1,24,500/-, ರೈತರು ಪಾವತಿಸಬೇಕಾದ ಪ್ರೀಮಿಯಂ (ಶೇ.5) ರೂ. 6,225/-
*ಒಳಪಡುವ ಹೋಬಳಿಗಳು:* ಕಂಪ್ಲಿ (ಕಂಪ್ಲಿ), ಕುರುಗೋಡು (ಕುರುಗೋಡು, ಕೋಳೂರು), ಬಳ್ಳಾರಿ (ಬಳ್ಳಾರಿ, ಮೋಕಾ, ರೂಪನಗುಡಿ), ಸಿರುಗುಪ್ಪ (ಕರೂರು, ತೆಕ್ಕಲಕೋಟೆ, ಸಿರುಗುಪ್ಪ, ಹಚ್ಚೊಳ್ಳಿ) ಮತ್ತು ಸಂಡೂರು (ತೋರಣಗಲ್ಲು).
*ಈರುಳ್ಳಿ (ನೀರಾವರಿ):*
ಪ್ರತಿ ಹೆಕ್ಟೇರ್ ವಿಮಾ ಮೊತ್ತ ರೂ. 93,900/-, ರೈತರು ಪಾವತಿಸಬೇಕಾದ ಪ್ರೀಮಿಯಂ (ಶೇ.5) ರೂ. 4,695/-
*ಒಳಪಡುವ ಹೋಬಳಿಗಳು:* ಸಂಡೂರು ತಾಲೂಕಿನ ಚೋರನೂರು ಮತ್ತು ತೋರಣಗಲ್ಲು ಹೋಬಳಿಗಳು.
ನೋಂದಾಯಿಸಲು ಜುಲೈ 31 ಕೊನೆಯ ದಿನ. ನೋಂದಾಯಿಸಲು ಹತ್ತಿರದ ಬ್ಯಾಂಕ್ಗಳು, ಸಾಮಾನ್ಯ ಸೇವಾ ಕೇಂದ್ರಗಳು, ಗ್ರಾಮ ಒನ್ ಕೇಂದ್ರಗಳು ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘಗಳು.
*ಅಗತ್ಯ ದಾಖಲೆಗಳು:* ಇತ್ತೀಚಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್, ಸ್ವಯಂ ದೃಢೀಕರಣ ಪತ್ರ ಮತ್ತು ಎಫ್ಐಡಿ ಸಂಖ್ಯೆ.
ರೈತರು ಹೆಚ್ಚಿನ ವಿವರಗಳಿಗಾಗಿ ತಮ್ಮ ವ್ಯಾಪ್ತಿಯ ತಾಲ್ಲೂಕು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಬಳ್ಳಾರಿ, ಕಂಪ್ಲಿ, ಕುರುಗೋಡು-08392-278177, 9480257282.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಸಂಡೂರು- 08395-260389, 9740934208.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಸಿರುಗುಪ್ಪ- 08396-222066, 9448910277.
ರೈತರು ನೈಸರ್ಗಿಕ ವಿಕೋಪಗಳಿಂದಾಗುವ ಆರ್ಥಿಕ ನಷ್ಟದಿಂದ ಪಾರಾಗಲು ತಕ್ಷಣವೇ ವಿಮೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಅವರು ವಿನಂತಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್