ಎಸ್ಐಆರ್: ಕೊಪ್ಪಳ ವಿಧಾನಸಭಾ ಕ್ಷೇತ್ರ :2,56,757 ನಮೂನೆ ವಿತರಣೆ
ಕೊಪ್ಪಳ, 10 ಜುಲೈ (ಹಿ.ಸ.) ಆ್ಯಂಕರ್: ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 ಗೆ ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಜೂನ್ 30 ರಂದು 64-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 290 ಬೂತ್ ಮಟ್ಟದ ಅಧಿಕಾರಿಗಳು ಗಣತಿ ನಮೂನೆಗಳನ್ನು ವಿತರಿಸುವ ಸಲುವಾಗಿ ಮನೆ ಮನೆ ಭೇಟಿ
ಎಸ್ಐಆರ್: ಕೊಪ್ಪಳ ವಿಧಾನಸಭಾ ಕ್ಷೇತ್ರ :2,56,757 ನಮೂನೆ ವಿತರಣೆ


ಕೊಪ್ಪಳ, 10 ಜುಲೈ (ಹಿ.ಸ.)

ಆ್ಯಂಕರ್: ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 ಗೆ ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಜೂನ್ 30 ರಂದು 64-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 290 ಬೂತ್ ಮಟ್ಟದ ಅಧಿಕಾರಿಗಳು ಗಣತಿ ನಮೂನೆಗಳನ್ನು ವಿತರಿಸುವ ಸಲುವಾಗಿ ಮನೆ ಮನೆ ಭೇಟಿ ಕಾರ್ಯವನ್ನು ಪ್ರಾರಂಭಿಸಿರುತ್ತಾರೆ.

64-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ಮತದಾರರ ಪಟ್ಟಿಯಲ್ಲಿ 2026 ರ ಜೂನ್ 16 ರವರೆಗೆ ಒಟ್ಟು 2,69,395 ಮತದಾರರಿದ್ದು, ಎಲ್ಲಾ ಮತದಾರರ ಗಣತಿ ನಮೂನೆಗಳು ಮುದ್ರಿತವಾಗಿದ್ದು, ಮುದ್ರಿತ ನಮೂನೆಗಳನ್ನು ಈಗಾಗಲೇ ಸಂಬAಧಪಟ್ಟ ಬೂತ್ ಮಟ್ಟದ ಅಧಿಕಾರಿಗಳಿಗೆ ವಿತರಿಸಲಾಗಿರುತ್ತದೆ.

ಜೂನ್ 30 ರಿಂದ ಜುಲೈ 8 ರ ಸಂಜೆ 4 ಗಂಟೆಯವರೆಗೆ ಒಟ್ಟು 2,52,291 ಗಣತಿ ನಮೂನೆಗಳನ್ನು ಮತದಾರರಿಗೆ ಹಂಚಿಕೆ ಮಾಡಲಾಗಿದ್ದು, 47,449 ಗಣತಿ ನಮೂನೆಗಳನ್ನು ಡಿಜಟಲೀಕರಣ ಮಾಡಲಾಗಿದೆ.

ಜೂನ್ 30 ರಿಂದ ಜುಲೈ 9 ರ ಸಂಜೆ 4 ಗಂಟೆಯವರೆಗೆ ಒಟ್ಟು 2,56,757 ಗಣತಿ ನಮೂನೆಗಳನ್ನು ಮತದಾರರಿಗೆ ಹಂಚಿಕೆ ಮಾಡಲಾಗಿದ್ದು, 65,082 ಗಣತಿ ನಮೂನೆಗಳನ್ನು ಡಿಜಟಲೀಕರಣ ಮಾಡಲಾಗಿದೆ ಎಂದು ಕೊಪ್ಪಳ ಉಪ ವಿಭಾಗಾಧಿಕಾರಿಗಳು ಹಾಗೂ 64-ಕೊಪ್ಪಳ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳಾದ ಮಹಮ್ಮದ್ ಜೀಲಾನ್ ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande