ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ವಿಷಾಧನೀಯ : ಎ. ತಿಮ್ಮನಗೌಡ
ಬಳ್ಳಾರಿ, 10 ಜುಲೈ (ಹಿ.ಸ.) ಆ್ಯಂಕರ್ : ಪ್ರಸ್ತುತ ದಿನಗಳಲ್ಲಿ ಭೌತಿಕ ಸಂಪತ್ತನ್ನು ಗಳಿಸುವದನ್ನೇ ಜೀವನದ ಪರಮಗುರಿಯಾಗಿ ಮಾನವೀಯ ಸಂಬಂಧಗಳು ಬದಲಾಗಿ ಸಾಮಾಜಿಕ ಮೌಲ್ಯಗಳ ಕುಸಿಯುತ್ತಿವೆ ಎಂದು ನಿವೃತ್ತ ಉಪನ್ಯಾಸಕರಾದ ಎ. ತಿಮ್ಮನಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ ಜಿಲ್ಲಾ ಕನ್ನಡ
ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ವಿಷಾಧನೀಯ : ಎ. ತಿಮ್ಮನಗೌಡ


ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ವಿಷಾಧನೀಯ : ಎ. ತಿಮ್ಮನಗೌಡ


ಬಳ್ಳಾರಿ, 10 ಜುಲೈ (ಹಿ.ಸ.)

ಆ್ಯಂಕರ್ : ಪ್ರಸ್ತುತ ದಿನಗಳಲ್ಲಿ ಭೌತಿಕ ಸಂಪತ್ತನ್ನು ಗಳಿಸುವದನ್ನೇ ಜೀವನದ ಪರಮಗುರಿಯಾಗಿ ಮಾನವೀಯ ಸಂಬಂಧಗಳು ಬದಲಾಗಿ ಸಾಮಾಜಿಕ ಮೌಲ್ಯಗಳ ಕುಸಿಯುತ್ತಿವೆ ಎಂದು ನಿವೃತ್ತ ಉಪನ್ಯಾಸಕರಾದ ಎ. ತಿಮ್ಮನಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಪ್ಪಗಲ್ಲು ಅಯ್ಯಪ್ಪ ನ್ಯಾಶನಲ್ ಸ್ಕೂಲ್ನಲ್ಲಿ ಏರ್ಪಡಿಸಿದ್ದ `ಕುಪ್ಪಗಲ್ಲು ನಾಗಪ್ಶ ದತ್ತಿ, ವಡ್ಡಿನಶೆಟ್ರ ಸಿದ್ಧರಾಮಯ್ಯ ಮತ್ತು ಶ್ರೀಮತಿ ಮಹಾಂತಮ್ಮ ದತ್ತಿ, ಸಂಗನಕಲ್ಲು ಶಾಂತಮ್ಮ ಸ್ಮಾರಕ ದತ್ತಿ'ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಜಾಲತಾಣಗಳ ಪ್ರಭಾವ, ಎಲೆಕ್ಟ್ರಾನಿಕ್ ಮಾಧ್ಯಮಗಳ ಒತ್ತಡಗಳಿಂದ ಬಹುತೇಕರ ಜೀವನ ಪರಾವಲಂಭಿ ಆಗಿದೆ. ವಿದ್ಯುನ್ಮಾನ ಯಂತ್ರಗಳ ಪ್ರಭಾವದಲ್ಲಿ ಮಾನವೀಯತೆ ಮಾಸುತ್ತಿರುವುದು ಮನುಷ್ಯರಲ್ಲಿ ಆಗುತ್ತಿರುವ ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.

ಸಹ ಶಿಕ್ಷಕರಾದ ಪಿ. ಹರಿಪ್ರಸಾದ್ ಅವರು, ನೈತಿಕತೆಯಿಂದ ಕೂಡಿದ ಜೀವನ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು, ಜೀವನ ಭದ್ರತೆಯನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಬಾಲ್ಯದಿಂದಲೂ ನೈತಿಕ ಮೌಲ್ಯಗಳನ್ನು ರೂಢಿಸಿಕೊಂಡು ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಕುಪ್ಪಗಲ್ಲು ಅಯ್ಯಪ್ಪ ನ್ಯಾಶನಲ್ ಸ್ಕೂಲ್ನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎಂ. ಮರಿದೇವಯ್ಯ ಅವರು ಕಾರ್ಯಕ್ರಮದ

ಅಧ್ಯಕ್ಷತೆವಹಿಸಿ, ವಿದ್ಯಾರ್ಥಿಗಳು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು, ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಂಡು ನೈತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಈ ರೀತಿಯ ಕಾರ್ಯಕ್ರಮಗಳು ನೆರವಾಗುತ್ತವೆ ಎಂದು ಹೇಳಿದರು.

ವೀರಶೈವ ವಿದ್ಯಾವರ್ಧಕ ಸಂಘದ ನೌಕರರ ಪತ್ತಿನ ಸಹಕಾರ ಸಂಘದ ನಿವೃತ್ತ ವ್ಯವಸ್ಥಾಪಕರಾದ ಕೋಳೂರು ವೆಂಕಟೇಶಗೌಡ, ರಾಷ್ಟ್ರಕವಿ ಕುವೆಂಪು ಕನ್ನಡ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎಂ. ವಿಶ್ವನಾಥ ಶಾಸ್ತ್ರಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ನ್ಯಾಯವಾದಿಗಳಾದ ಅರಿವಿ ಭೀಮನಗೌಡ, ಕಣೇಕಲ್ಲು ಎರ್ರಿಸ್ವಾಮಿ, ಶ್ರೀಮತಿ ಕುಪ್ಪಗಲ್ಲು ಗಿರಿಜಾ, ಕಸಾಪ ಮಾಜಿ ಅಧ್ಯಕ್ಷ ಹೆಚ್. ಹಂಪನಗೌಡ, ಕರ್ನಾಟಕ ಯುವಕ ಸಂಘದ ಮಾಜಿ ಅಧ್ಯಕ್ಷ ವಿ.ಎಸ್. ಬಸವರಾಜ್, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ, ಕುಪ್ಪಗಲ್ಲು ಅಯ್ಯಪ್ಪ ನ್ಯಾಶನಲ್ ಸ್ಕೂಲ್ನ ಮುಖ್ಯೋಪಾಧ್ಯಾಯಿನಿ ಹೆಚ್. ಆಶಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ದತ್ತಿ ದಾನಿಗಳ ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande