ರಾಯಚೂರು : ಚಿಲ್ಲರೆಗಾಗಿ ಜಗಳ ; ಕೊಲೆಯಲ್ಲಿ ಅಂತ್ಯ
ರಾಯಚೂರು, 10 ಜುಲೈ (ಹಿ.ಸ.) ಆ್ಯಂಕರ್ : ಪೆಟ್ರೋಲ್ ಬಂಕ್ನಲ್ಲಿ 10 ರೂಪಾಯಿ ಚಿಲ್ಲರೆಗಾಗಿ ಪ್ರಾರಂಭವಾದ ಜಗಳವು ಜಗಳ ಬಿಡಿಸಲು ಬಂದಿದ್ದ ವ್ಯಕ್ತಿಯ ಕೊಲೆಯಲ್ಲಿ ಕೊನೆಗೊಂಡಿದೆ. ರಾಯಚೂರುನ ಹಂಚಿನಾಳ ಗ್ರಾಮದ ಪೆಟ್ರೋಲ್ ಬಂಕ್ನಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದ್ದು, ಮೃತನು ಗ್ರಾಮ ಪಂಚಾಯಿತಿ ಮಾಜಿ
ರಾಯಚೂರು : ಚಿಲ್ಲರೆಗಾಗಿ ಜಗಳ ; ಕೊಲೆಯಲ್ಲಿ ಅಂತ್ಯ


ರಾಯಚೂರು, 10 ಜುಲೈ (ಹಿ.ಸ.)

ಆ್ಯಂಕರ್ : ಪೆಟ್ರೋಲ್ ಬಂಕ್ನಲ್ಲಿ 10 ರೂಪಾಯಿ ಚಿಲ್ಲರೆಗಾಗಿ ಪ್ರಾರಂಭವಾದ ಜಗಳವು ಜಗಳ ಬಿಡಿಸಲು ಬಂದಿದ್ದ ವ್ಯಕ್ತಿಯ ಕೊಲೆಯಲ್ಲಿ ಕೊನೆಗೊಂಡಿದೆ.

ರಾಯಚೂರುನ ಹಂಚಿನಾಳ ಗ್ರಾಮದ ಪೆಟ್ರೋಲ್ ಬಂಕ್ನಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದ್ದು, ಮೃತನು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೇಘನಾಥ ನಾಯಕ (42) ಎಂದು ಪೊಲೀಸರು ತಿಳಿಸಿದ್ದಾರೆ.

ಗಿಲ್ಲೆಸೂಗೂರು ಗ್ರಾಮದ ನಿವಾಸಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೇಘನಾಥ ನಾಯಕ (42) ಅವರು ಜಗಳ ಬಿಡಿಸಲು ಬಂದಾಗ ಈ ಘಟನೆ ನಡೆದಿದೆ. ಮೃತನ ಸ್ನೇಹಿತ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕಿಸಿದ್ದು, ಬಂಕ್ನ ಸಿಬ್ಬಂದಿ ನಡುವೆ 10 ರೂಪಾಯಿ ಚಿಲ್ಲರೆ ಹಣಕ್ಕಾಗಿ ಜಗಳ ಶುರುವಾಗಿದೆ. ಮೃತನ ಸ್ನೇಹಿತನು ಜಗಳ ನಡೆಯುತ್ತಿದ್ದಾಗಲೇ ಸ್ನೇಹಿತರನ್ನು ಮೊಬೈಲ್ ಮೂಲಕ ಬಂಕ್ಗೆ ಬರಲು ಕರೆದಿದ್ದಾನೆ. ಆಗ, ಜಗಳ ಬಿಡಿಸಲು ಸ್ಥಳಕ್ಕೆ ಬಂದಿದ್ದ ಮೇಘನಾಥ ನಾಯಕನ ಕೊಲೆಯಲ್ಲಿ ಕೊನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಕೊಲೆ ಆರೋಪಿಗಳಾಗಿರುವ ರವಿ, ವೀರೇಶ, ನರಸಿಂಹ, ಮಾರೆಪ್ಪ ಸೇರಿದಂತೆ ಆರು ಜನರ ವಿರುದ್ಧ ಇಡಪನೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆದಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande