
ಕೊಪ್ಪಳ, 10 ಜುಲೈ (ಹಿ.ಸ.)
ಆ್ಯಂಕರ್: ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಂಜೂರಾಗಿರುವ 7,000 ಮೆಗಾವ್ಯಾಟ್ ನವೀಕರಿಸಬಹುದಾದ ಇಂಧನ (ಸೌರ ಶಕ್ತಿ, ಪವನ ಶಕ್ತಿ ಮತ್ತು ಟ್ರಾನ್ಸಮಿಷನ್ (ವಿದ್ಯುತ್ ಪ್ರಸರಣ) ಯೋಜನೆಯ ಮೂಲಕ ಜಿಲ್ಲೆಯ ಕೆಲವು ತಾಲೂಕಿನ ಹಲವು ಗ್ರಾಮಗಳ ಜಮೀನುಗಳಲ್ಲಿ ವಿದ್ಯುತ್ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರಸ್ತಾಪಿತ ಯೋಜನೆಗಳಿಂದ ರೈತರ ಭೂಮಿ, ಬೆಳೆ, ಭೂ ಪರಿಹಾರ ಇತರೆ ಅಂಶಗಳಿಗೆ ಸಂಬ0ಧಿಸಿದ0ತೆ ಹಲವು ತೊಂದರೆಗಳಾಗುತ್ತಿರುವುದಾಗಿ ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ದೂರುಗಳು ಸ್ವೀಕೃತಗೊಂಡಿರುವ ಹಿನ್ನೆಲೆಯಲ್ಲಿ ರೈತರ, ಭೂಮಾಲೀಕರ ಹಿತರಕ್ಷಣೆಗಾಗಿ ಹಾಗು ಸದರಿಯವರ ದೂರುಗಳಿಗೆ ಶೀಘ್ರ ಸ್ಪಂದಿಸುವುದು ಮತ್ತು ಪರಿಹಾರ ದೊರಕಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡು ಸಮಿತಿಯನ್ನು ರಚಿಸಿ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ ಅವರು ಆದೇಶ ಹೊರಡಿಸಿದ್ದಾರೆ.
ಅಪರ ಜಿಲ್ಲಾಧಿಕಾರಿಗಳು ಸಮಿತಿಯ ಅಧ್ಯಕ್ಷರಾಗಿದ್ದು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಕಾರ್ಯನಿರ್ವಾಹಕ ಅಭಿಯಂತರರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಲಿಮಿಟೇಡ್ನ ಕಾರ್ಯನಿರ್ವಾಹಕ ಅಭಿಯಂತರರು, ಕೊಪ್ಪಳ, ಗಂಗಾವತಿ, ಕುಷ್ಟಗಿ, ಕನಕಗಿರಿ, ಕಾರಟಗಿ, ಕುಕನೂರ ಮತ್ತು ಯಲಬುರ್ಗಾ ತಾಲೂಕಿನ ತಹಸೀಲ್ದಾರರು, ಕೊಪ್ಪಳ ಪವರ್ಗ್ರಿಡ್ ಕೊಪ್ಪಳ ಗದಗ ಟ್ರಾನ್ಸಮಿಷನ್ ಲಿಮಿಟೇಡ್ನ ಪ್ರಧಾನ ವ್ಯವಸ್ಥಾಪಕರು ಹಾಗೂ ಪಿಜಿಸಿಐಎಲ್ ಅಧಿಕಾರಿಗಳು ಸಮಿತಿಯ ಸದಸ್ಯರಾಗಿರುತ್ತಾರೆ.
ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ ಹಾಗೂ ವಿವಿಧ ಖಾಸಗಿ ಕಂಪನಿಗಳಿ0ದ ಒಟ್ಟಾರೆಯಾಗಿ 7,000 ಮೆಗಾವ್ಯಾಟ್ ನವೀಕರಿಸಬಹುದಾದ ಇಂಧನ (ಸೌರಶಕ್ತಿ ಮತ್ತು ಪವನಶಕ್ತಿ) ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೃಷಿ ಭೂಮಿಯನ್ನು ಸೌರಶಕ್ತಿ/ಪವನಶಕ್ತಿ ಯೋಜನೆಗೆ ಬಳಸಲು ಪ್ರತ್ಯೇಕವಾಗಿ ಭೂ ಪರಿವರ್ತನೆ (ನಾನ್ ಅಗ್ರಿಕಲ್ಚರಲ್) ಮಾಡುವ ಅಗತ್ಯವಿರುವುದಿಲ್ಲ.
ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಸರ್ಕಾರಿ ಸ್ವಾಮ್ಯ/ವಿವಿಧ ಕಂಪನಿಗಳು ಕೆಲವೊಮ್ಮೆ ರೈತರ/ಭೂಮಾಲೀಕರೊಂದಿಗೆ ಒಪ್ಪಂದ ಪತ್ರ/ಒಡಂಬಡಿಕೆ ಪತ್ರಗಳನ್ನು ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ. ರೈತರು ತಮ್ಮ ಜಮೀನುಗಳಲ್ಲಿ ಈ ಯೋಜನೆಯ ವಿದ್ಯುತ್ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅನುಮತಿಯನ್ನು ನೀಡಿ ಪರಿಹಾರ ಧನವನ್ನು ಪಡೆದುಕೊಂಡಿರುತ್ತಾರೆ. ಇಂತಹ ಪ್ರಕರಣಗಳಲ್ಲಿ ಜಮೀನಿನ ಭೂಪರಿಹಾರ ನಿಗದಿಯು ಸಂಪೂರ್ಣವಾಗಿ ರೈತರು ಮತ್ತು ಕಂಪನಿಯ ನಡುವಿನ ಖಾಸಗಿ ವಿಷಯವಾಗಿರುತ್ತದೆ.
ಇದಕ್ಕೆ ಮಾನ್ಯ ಸರ್ಕಾರದಿಂದ ಯಾವುದೇ ಪ್ರತ್ಯೇಕ ಮಾರ್ಗಸೂಚಿಗಳಿರುವುದಿಲ್ಲ. ಇದು ಸಂಪೂರ್ಣವಾಗಿ ರೈತರ ಸ್ವ-ಇಚ್ಛೆಗೆ ಒಳಪಟ್ಟಿರುತ್ತದೆ. ಇಂತಹ ಸಂದರ್ಭಗಳಲ್ಲಿ ವಿದ್ಯುತ್ ಕಾಮಗಾರಿಯನ್ನು ಅನುಷ್ಠಾನಗೊಳಿಸುವವರು ಕೆಲವೊಮ್ಮೆ ರೈತರಿಗೆ ಆರಂಭದಲ್ಲಿ ಅರ್ಧ ಪರಿಹಾರ ಮೊತ್ತವನ್ನು ಪಾವತಿಸಿ ತದನಂತರ ವಿದ್ಯುತ್ ಕಾಮಗಾರಿಗಳು ಪೂರ್ಣಗೊಂಡ ನಂತರ ಬಾಕಿ ಉಳಿದ ಪರಿಹಾರ ಧನವನ್ನು ಪಾವತಿಸದೇ ಪಲಾಯನ/ನಿರ್ಗಮನ ಮಾಡಿರುವ ಕುರಿತಂತೆ ದೂರುಗಳು ಸ್ವೀಕೃತಗೊಂಡಲ್ಲಿ ರೈತರ ಕಾಳಜಿ ಮತ್ತು ಹಿತಾಸಕ್ತಿಯಿಂದ ಈ ಸಮಿತಿಯು ಸದರಿ ದೂರಿನ ಕುರಿತು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಬೇಕು.
ಪ್ರಸ್ತಾಪಿತ ನವೀಕರಿಸಬಹುದಾದ ಇಂಧನ (ಸೌರಶಕ್ತಿ, ಪವನಶಕ್ತಿ ಮತ್ತು ಟ್ರಾನ್ಸ್ಮಿಷನ್ಲೈನ್ (ವಿದ್ಯುತ್ ಪ್ರಸರಣ)) ವಿದ್ಯುತ್ ಉತ್ಪಾದನೆ ಹಾಗೂ ಸರಬರಾಜು ಮಾಡುವ ಯೋಜನೆಗಳು ಮಹತ್ವಾಕಾಂಕ್ಷಿ ಯೋಜನೆ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿರುವುದರಿAದ ಈ ಯೋಜನೆಗಳಿಗೆ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಬೇಕಾಗಿರುತ್ತದೆ. ಈ ಹಿನ್ನಲೆಯಲ್ಲಿ ಈ ಯೋಜನೆಗಳ ಮಹತ್ವ ಹಾಗೂ ಅಗತ್ಯತೆ ಕುರಿತು ಸಾರ್ವಜನಿಕರಿಗೆ/ ರೈತರಿಗೆ/ಭೂಮಾಲೀಕರಿಗೆ ಅಗತ್ಯ ತಿಳಿವಳಿಕೆ ಮೂಡಿಸಬೇಕು.
ಈ ಯೋಜನೆಗೆ ಒಳಪಡುವ ರೈತರ/ಭೂಮಾಲೀಕರ ಸಮಸ್ಯೆಗಳಿಗೆ ಕೂಡ ಸೂಕ್ತ ರೀತಿಯಲ್ಲಿ ಸ್ಪಂದಿಸುವುದು ಹಾಗೂ ಅವರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವುದು ಕೂಡ ಜಿಲ್ಲಾಡಳಿತ ಕರ್ತವ್ಯವಾಗಿರುತ್ತದೆ. ಈ ಪ್ರಯುಕ್ತ ಈ ಸಮಿತಿಯಲ್ಲಿ ನಿಯೋಜಿಸಲಾದ ಅಧಿಕಾರಿ ವರ್ಗದವರು ಮೇಲೆ ತಿಳಿಸಲಾದ ಬೇರೆ ಬೇರೆ ಅಂಶಗಳ ಕುರಿತಂತೆ ನಿಯಮಾನುಸಾರ ಅಗತ್ಯ ಕ್ರಮವಹಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ರಚಿಸಿದ ಸಮಿತಿಗೆ
ಸೂಚಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್