ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ: 2,03,410 ಎಸ್ಐಆರ್ ವಿತರಣೆ
ಬಳ್ಳಾರಿ, 10 ಜುಲೈ (ಹಿ.ಸ.) ಆ್ಯಂಕರ್: 94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ನಡೆಯುತ್ತಿದ್ದು, ಮತದಾರರಿಗೆ ಗಣತಿ ಅರ್ಜಿಗಳನ್ನು ವಿತರಿಸಲು ಬಿ.ಎಲ್.ಓ ಗಳ ಮೂಲಕ ಮನೆ ಮನೆ ಭೇಟಿ ನೀಡುತ್ತಿದ್ದಾರೆ. ಒಟ್ಟು 2,79,144 ಮತದಾ
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ: 2,03,410 ಎಸ್ಐಆರ್ ವಿತರಣೆ


ಬಳ್ಳಾರಿ, 10 ಜುಲೈ (ಹಿ.ಸ.)

ಆ್ಯಂಕರ್: 94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ನಡೆಯುತ್ತಿದ್ದು, ಮತದಾರರಿಗೆ ಗಣತಿ ಅರ್ಜಿಗಳನ್ನು ವಿತರಿಸಲು ಬಿ.ಎಲ್.ಓ ಗಳ ಮೂಲಕ ಮನೆ ಮನೆ ಭೇಟಿ ನೀಡುತ್ತಿದ್ದಾರೆ. ಒಟ್ಟು 2,79,144 ಮತದಾರರಿದ್ದು, ಬುಧವಾರಕ್ಕೆ 2,03,410 (ಶೇ. 72.87) ಎಸ್ಐಆರ್ ಗಣತಿ ನಮೂನೆಗಳನ್ನು ವಿತರಿಸಲಾಗಿದೆ.

ಈ ಮನೆ ಮನೆ ಗಣತಿ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಯು ಜುಲೈ 29 ರವರೆಗೆ ನಡೆಯಲಿದೆ. ಈಗಾಗಲೇ ಶೇ.98.01 ರಷ್ಟು ಮತದಾರರನ್ನು ಮ್ಯಾಪ್ ಮಾಡಲಾಗಿದೆ. 15,033 (ಶೇ. 5.39) ಅರ್ಜಿಗಳು ಡಿಜಿಟಲೀಕರಣಗೊಂಡಿವೆ. 664 ಅರ್ಜಿಗಳು ಆನ್ಲೈನ್ ಮೂಲಕ ಸಲ್ಲಿಕೆಯಾಗಿವೆ.

431- ಮರಣ ಹೊಂದಿದವರು, 203 -ಶಾಶ್ವತವಾಗಿ ವಲಸೆ ಹೋದವರು, 28- ಈಗಾಗಲೇ ದಾಖಲಾಗಿರುವ ಮತದಾರರು, 02- ಗೈರುಹಾಜರಿ ಹಾಗೂ 10-ಇತರ ಪ್ರಕರಣಗಳು (10) ಸೇರಿವೆ ಎಂದು ಬಳ್ಳಾರಿ ನಗರ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯೂ ಆದ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande