ಜು.೧೪ರಂದು ನ್ಯಾಯಾಲಯದಿಂದ ವಿಲೇವಾರಿಗೊಂಡ ವಾಹನಗಳ ಹರಾಜು
ಧಾರವಾಡ, 10 ಜುಲೈ (ಹಿ.ಸ.): ಆ್ಯಂಕರ್: ಧಾರವಾಡ ಜಿಲ್ಲೆಯ ನವಲಗುಂದ ಪೊಲೀಸ್ ಠಾಣೆಗೆ ಸಂಬಂಧಿಸಿದಂತೆ 14 ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ವಿಲೇವಾರಿಗೊಂಡಂತಹ 13 ದ್ವೀಚಕ್ರ ವಾಹನಗಳು, 1 ಆಟೋ ರಿಕ್ಷಾ ಮತ್ತು 1 ನಾಲ್ಕು ಚಕ್ರದ ಟಾಟಾ ಇಂಡಿಕಾ ವಾಹನಗಳನ್ನು ನ್ಯಾಯಾಲಯದಿಂದ ಹರಾಜು ಪ್ರಕ್ರಿಯೆಗೆ
ಜು.೧೪ರಂದು ನ್ಯಾಯಾಲಯದಿಂದ ವಿಲೇವಾರಿಗೊಂಡ ವಾಹನಗಳ ಹರಾಜು


ಧಾರವಾಡ, 10 ಜುಲೈ (ಹಿ.ಸ.):

ಆ್ಯಂಕರ್:

ಧಾರವಾಡ ಜಿಲ್ಲೆಯ ನವಲಗುಂದ ಪೊಲೀಸ್ ಠಾಣೆಗೆ ಸಂಬಂಧಿಸಿದಂತೆ 14 ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ವಿಲೇವಾರಿಗೊಂಡಂತಹ 13 ದ್ವೀಚಕ್ರ ವಾಹನಗಳು, 1 ಆಟೋ ರಿಕ್ಷಾ ಮತ್ತು 1 ನಾಲ್ಕು ಚಕ್ರದ ಟಾಟಾ ಇಂಡಿಕಾ ವಾಹನಗಳನ್ನು ನ್ಯಾಯಾಲಯದಿಂದ ಹರಾಜು ಪ್ರಕ್ರಿಯೆಗೆ ಆದೇಶವಾಗಿರುತ್ತದೆ.

ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಆದೇಶದಂತೆ ವಾಹನಗಳ ದರ ನಿಗದಿ ಪಡಿಸಿದ್ದು, ಮತ್ತು ವಾರಸುದಾರರಿಗೆ ಕಾಲಾವಕಾಶ ನೀಡಿ ವಿಲೇವಾರಿ ಮಾಡಲು ಸೂಚಿಸಿದೆ.

ಸದರಿ ವಾಹನಗಳ ಹರಾಜು ಪ್ರಕ್ರಿಯೆಯನ್ನು ಜುಲೈ 14, 2026 ರಂದು ನವಲಗುಂದ ಪೊಲೀಸ್ ಠಾಣೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತರು ನವಲಗುಂದ ಪೊಲೀಸ್ ಠಾಣೆಗೆ ಭೇಟಿ ನೀಡಬಹುದು ಎಂದು ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande