
ಕೊಪ್ಪಳ, 10 ಜುಲೈ (ಹಿ.ಸ.)
ಆ್ಯಂಕರ್: ಕೊಪ್ಪಳ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 ರ ಮನೆಮನೆ ಭೇಟಿ ಮುಂದುವರೆದಿದ್ದು, ಜೂನ್ 30 ರಿಂದ ಜುಲೈ 9ರ ಸಂಜೆ 06 ಗಂಟೆವರೆಗೆ ಒಟ್ಟು 11,61,202 ಗಣತಿ ನಮೂನೆಗಳನ್ನು ಮತದಾರರಿಗೆ ಹಂಚಿಕೆ ಮಾಡಲಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ಸಂಬ0ಧಿಸಿದ0ತೆ ಒಟ್ಟು 11,90,214 ಮತದಾರರಿದ್ದು, ಈ ಎಲ್ಲಾ ಮತದಾರರ ಮುದ್ರಿತವಾಗಿರುವ ಗಣತಿ ನಮೂನೆಗಳನ್ನು ಈಗಾಗಲೇ ಸಂಬ0ಧಪಟ್ಟ ಬೂತ್ ಮಟ್ಟದ ಅಧಿಕಾರಿಗಳಿಗೆ ವಿತರಿಸಲಾಗಿರುತ್ತದೆ.
ಇಲ್ಲಿಯವರೆಗೆ ಒಟ್ಟು 11,61,202 ಗಣತಿ ನಮೂನೆಗಳನ್ನು ಮತದಾರರಿಗೆ ಹಂಚಿಕೆ ಮಾಡಲಾಗಿದ್ದು, 3,53,761 ಗಣತಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್