ಟ್ರಾಯ್ ಮೊಬೈಲ್ ನೆಟ್ವರ್ಕ್ ಪರೀಕ್ಷೆ: ಜಿಯೋ ಅಗ್ರಸ್ಥಾನ, ಬಿಎಸ್ಎನ್ಎಲ್ನಲ್ಲಿ ಅತಿ ಹೆಚ್ಚು ಕರೆ ಕಡಿತ
ನವದೆಹಲಿ, 01 ಜುಲೈ (ಹಿ.ಸ.): ಆ್ಯಂಕರ್: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ನಡೆಸಿದ ಮೊಬೈಲ್ ನೆಟ್‌ವರ್ಕ್ ಗುಣಮಟ್ಟ ಪರೀಕ್ಷೆಯಲ್ಲಿ ರಿಲಯನ್ಸ್ ಜಿಯೋ ಅತ್ಯುತ್ತಮ ಸಾಧನೆ ಮಾಡಿದೆ. ಡೌನ್‌ಲೋಡ್ ವೇಗ, ನೆಟ್‌ವರ್ಕ್ ವ್ಯಾಪ್ತಿ ಮತ್ತು ಕರೆ ಗುಣಮಟ್ಟ
ಟ್ರಾಯ್


ನವದೆಹಲಿ, 01 ಜುಲೈ (ಹಿ.ಸ.):

ಆ್ಯಂಕರ್:

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ನಡೆಸಿದ ಮೊಬೈಲ್ ನೆಟ್‌ವರ್ಕ್ ಗುಣಮಟ್ಟ ಪರೀಕ್ಷೆಯಲ್ಲಿ ರಿಲಯನ್ಸ್ ಜಿಯೋ ಅತ್ಯುತ್ತಮ ಸಾಧನೆ ಮಾಡಿದೆ. ಡೌನ್‌ಲೋಡ್ ವೇಗ, ನೆಟ್‌ವರ್ಕ್ ವ್ಯಾಪ್ತಿ ಮತ್ತು ಕರೆ ಗುಣಮಟ್ಟ ಸೇರಿದಂತೆ ಹೆಚ್ಚಿನ ಮಾನದಂಡಗಳಲ್ಲಿ ಜಿಯೋ ಇತರೆ ಕಂಪನಿಗಳನ್ನು ಹಿಂದಿಕ್ಕಿದೆ. ಮತ್ತೊಂದೆಡೆ ಬಿಎಸ್‌ಎನ್‌ಎಲ್ ಅತಿ ಹೆಚ್ಚು ಕರೆ ಕಡಿತ (ಕಾಲ್ ಡ್ರಾಪ್) ಹಾಗೂ ದುರ್ಬಲ ನೆಟ್‌ವರ್ಕ್ ವ್ಯಾಪ್ತಿ ದಾಖಲಾಗಿದೆ.

ಕೇಂದ್ರ ಸಂವಹನ ಸಚಿವಾಲಯದ ಮಾಹಿತಿ ಪ್ರಕಾರ, ಟ್ರಾಯ್ ಮಾರ್ಚ್ 10ರಿಂದ 13ರವರೆಗೆ ಸತಾರಾ ಜಿಲ್ಲೆಯಲ್ಲಿ ಈ ಪರೀಕ್ಷೆಯನ್ನು ನಡೆಸಿತ್ತು. ಇದರಲ್ಲಿ 535.5 ಕಿ.ಮೀ. ನಗರ ಮಾರ್ಗ, 103.3 ಕಿ.ಮೀ. ಹೆದ್ದಾರಿ ಮಾರ್ಗ, 15 ಪ್ರಮುಖ ಹಾಟ್‌ಸ್ಪಾಟ್‌ಗಳು ಹಾಗೂ 9.8 ಕಿ.ಮೀ. ವಾಕ್ ಟೆಸ್ಟ್ ಪ್ರದೇಶಗಳಲ್ಲಿ ಮೊಬೈಲ್ ಸೇವೆಗಳ ಗುಣಮಟ್ಟವನ್ನು ಪರಿಶೀಲಿಸಲಾಯಿತು. ಈ ವೇಳೆ ಏರ್‌ಟೆಲ್, ಬಿಎಸ್‌ಎನ್‌ಎಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ (ವಿ) ಸಂಸ್ಥೆಗಳ ನೆಟ್‌ವರ್ಕ್ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲಾಯಿತು.

ವರದಿಯ ಪ್ರಕಾರ, ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಟ್‌ವರ್ಕ್ ವ್ಯಾಪ್ತಿಯ ಪರೀಕ್ಷೆಯಲ್ಲಿ ಜಿಯೋಗೆ ಒಟ್ಟು 57,826 ಮಾದರಿಗಳಲ್ಲಿ 3,467 ದುರ್ಬಲ ಸಿಗ್ನಲ್ ಮಾದರಿಗಳು ದಾಖಲಾಗಿವೆ. ಏರ್‌ಟೆಲ್‌ನಲ್ಲಿ 4,033, ವಿಯಲ್ಲಿ 4,191, ಬಿಎಸ್‌ಎನ್‌ಎಲ್‌ನಲ್ಲಿ 16,393 ದುರ್ಬಲ ಸಿಗ್ನಲ್ ಮಾದರಿಗಳು ಪತ್ತೆಯಾಗಿದ್ದು, ಬಿಎಸ್‌ಎನ್‌ಎಲ್‌ನ ನೆಟ್‌ವರ್ಕ್ ವ್ಯಾಪ್ತಿ ಇತರೆ ಕಂಪನಿಗಳಿಗಿಂತ ಗಮನಾರ್ಹವಾಗಿ ಹಿಂದುಳಿದಿದೆ.

ಕಾಲ್ ಡ್ರಾಪ್ ಪರೀಕ್ಷೆಯಲ್ಲಿಯೂ ಬಿಎಸ್‌ಎನ್‌ಎಲ್ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಬಿಎಸ್‌ಎನ್‌ಎಲ್‌ನಲ್ಲಿ ಯಶಸ್ವಿಯಾದ 493 ಕರೆಗಳಲ್ಲಿ 38 ಕರೆಗಳು ಮಧ್ಯದಲ್ಲೇ ಕಡಿತಗೊಂಡಿವೆ. ಏರ್‌ಟೆಲ್‌ನಲ್ಲಿ 515ರಲ್ಲಿ 5, ಜಿಯೋದಲ್ಲಿ 524ರಲ್ಲಿ 6 ಹಾಗೂ ವಿಯಲ್ಲಿ 521ರಲ್ಲಿ 3 ಕರೆಗಳು ಮಾತ್ರ ಕಡಿತಗೊಂಡಿವೆ.

ಡೇಟಾ ಡೌನ್‌ಲೋಡ್ ವೇಗದಲ್ಲಿಯೂ ಜಿಯೋ ಮೊದಲ ಸ್ಥಾನದಲ್ಲಿದೆ. ನಗರ ಪ್ರದೇಶಗಳಲ್ಲಿ ಜಿಯೋದ ಸರಾಸರಿ ಡೌನ್‌ಲೋಡ್ ವೇಗ 176.95 ಎಂಬಿಪಿಎಸ್ ದಾಖಲಾಗಿದೆ. ಏರ್‌ಟೆಲ್‌ನದು 113.79 ಎಂಬಿಪಿಎಸ್, ವಿಯದು 46.86 ಎಂಬಿಪಿಎಸ್ ಹಾಗೂ ಬಿಎಸ್‌ಎನ್‌ಎಲ್‌ನದು ಕೇವಲ 5.66 ಎಂಬಿಪಿಎಸ್ ಆಗಿದೆ.

ಅಪ್‌ಲೋಡ್ ವೇಗದಲ್ಲಿಯೂ ಜಿಯೋ 19.81 ಎಂಬಿಪಿಎಸ್ನೊಂದಿಗೆ ಮುನ್ನಡೆ ಸಾಧಿಸಿದೆ. ಏರ್‌ಟೆಲ್ 19.33 ಎಂಬಿಪಿಎಸ್, ವಿ 12.92 ಎಂಬಿಪಿಎಸ್ ಹಾಗೂ ಬಿಎಸ್‌ಎನ್‌ಎಲ್ 2.14 ಎಂಬಿಪಿಎಸ್ ಸರಾಸರಿ ವೇಗ ದಾಖಲಿಸಿವೆ.

ಪುಣೆ–ಸತಾರಾ ಹೆದ್ದಾರಿ ಮಾರ್ಗದಲ್ಲಿಯೂ ಜಿಯೋ ಅಗ್ರಸ್ಥಾನ ಕಾಯ್ದುಕೊಂಡಿದೆ. ಇಲ್ಲಿ ಜಿಯೋದ ಸರಾಸರಿ ಡೌನ್‌ಲೋಡ್ ವೇಗ 261.99 ಎಂಬಿಪಿಎಸ್ ಆಗಿದ್ದು, ಏರ್‌ಟೆಲ್ 113.12 ಎಂಬಿಪಿಎಸ್, ವಿ 25.88 ಎಂಬಿಪಿಎಸ್ ಹಾಗೂ ಬಿಎಸ್‌ಎನ್‌ಎಲ್ 8.73 ಎಂಬಿಪಿಎಸ್ ವೇಗ ದಾಖಲಿಸಿವೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande