ಚಿನ್ನ ಬೆಳ್ಳಿ ದರದಲ್ಲಿ ಕುಸಿತ
ನವದೆಹಲಿ, 24 ಜೂನ್ (ಹಿ.ಸ.) : ಆ್ಯಂಕರ್ : ದೇಶೀಯ ಚಿನಿವಾರ ಮಾರುಕಟ್ಟೆಯಲ್ಲಿ ಬುಧವಾರ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಗಮನಾರ್ಹ ಇಳಿಕೆ ದಾಖಲಾಗಿದೆ. ಚಿನ್ನದ ಬೆಲೆಯಲ್ಲಿ ಕುಸಿತ ಉಂಟಾದ ಪರಿಣಾಮ, ಚೆನ್ನೈ ಹೊರತುಪಡಿಸಿ ದೇಶದ ಬಹುತೇಕ ಪ್ರಮುಖ ನಗರಗಳಲ್ಲಿ 10 ಗ್ರಾಂ ಚಿನ್ನದ ದರ ₹1,770 ರಿಂದ ₹1,930ರ
Gold silver


ನವದೆಹಲಿ, 24 ಜೂನ್ (ಹಿ.ಸ.) :

ಆ್ಯಂಕರ್ : ದೇಶೀಯ ಚಿನಿವಾರ ಮಾರುಕಟ್ಟೆಯಲ್ಲಿ ಬುಧವಾರ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಗಮನಾರ್ಹ ಇಳಿಕೆ ದಾಖಲಾಗಿದೆ. ಚಿನ್ನದ ಬೆಲೆಯಲ್ಲಿ ಕುಸಿತ ಉಂಟಾದ ಪರಿಣಾಮ, ಚೆನ್ನೈ ಹೊರತುಪಡಿಸಿ ದೇಶದ ಬಹುತೇಕ ಪ್ರಮುಖ ನಗರಗಳಲ್ಲಿ 10 ಗ್ರಾಂ ಚಿನ್ನದ ದರ ₹1,770 ರಿಂದ ₹1,930ರವರೆಗೆ ಇಳಿಕೆಯಾಗಿದೆ. ಚೆನ್ನೈನಲ್ಲಿ ಮಾತ್ರ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹400 ರಿಂದ ₹440ರವರೆಗೆ ಕಡಿತ ಕಂಡುಬಂದಿದೆ. ಬೆಳ್ಳಿಯ ದರದಲ್ಲೂ ಪ್ರತಿ ಕೆ.ಜಿ.ಗೆ ₹5,000ರವರೆಗೆ ಇಳಿಕೆ ದಾಖಲಾಗಿದೆ.

ಬೆಲೆ ಇಳಿಕೆಯ ನಂತರ ದೇಶದ ವಿವಿಧ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ದರವು 10 ಗ್ರಾಂಗೆ ₹1,44,590 ರಿಂದ ₹1,47,920ರ ನಡುವೆ ವಹಿವಾಟಾಗುತ್ತಿದೆ. 22 ಕ್ಯಾರೆಟ್ ಚಿನ್ನದ ದರವು ₹1,32,540 ರಿಂದ ₹1,35,590ರ ಮಟ್ಟದಲ್ಲಿ ಮಾರಾಟವಾಗುತ್ತಿದೆ.

ಬೆಳ್ಳಿಯ ದರ ಕುಸಿತದ ಹಿನ್ನೆಲೆಯಲ್ಲಿ ದೆಹಲಿಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಬೆಳ್ಳಿ ₹2,44,900ಕ್ಕೆ ಮಾರಾಟವಾಗುತ್ತಿದೆ.

ರಾಜಧಾನಿ ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹1,44,740 ಆಗಿದ್ದು, 22 ಕ್ಯಾರೆಟ್ ಚಿನ್ನ ₹1,32,690ಕ್ಕೆ ವಹಿವಾಟಾಗುತ್ತಿದೆ. ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನ ₹1,44,590 ಹಾಗೂ 22 ಕ್ಯಾರೆಟ್ ಚಿನ್ನ ₹1,32,540ಕ್ಕೆ ಮಾರಾಟವಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande