ಬಳ್ಳಾರಿ : ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ; ಸಾಧಕರಿಗೆ ಗೌರವ ಸನ್ಮಾನ
ಬಳ್ಳಾರಿ, 09 ಮೇ (ಹಿ.ಸ.) : ಆ್ಯಂಕರ್ : ಬಳ್ಳಾರಿ ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಹಾಗೂ ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಜಿಲ್ಲಾ ಘಟಕದ ಸಹಯೋಗದಲ್ಲಿ ಭಾನುವಾರ ನಡೆಯಲಿರುವ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿಯಲ್ಲಿ ಡಾ. ಯಶವಂತ ಭೂಪಾಲ್, ಸಂಗನಕಲ್ಲು
ಬಳ್ಳಾರಿ : ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ : ಸಾಧಕರಿಗೆ ಗೌರವ ಸನ್ಮಾನ


ಬಳ್ಳಾರಿ : ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ : ಸಾಧಕರಿಗೆ ಗೌರವ ಸನ್ಮಾನ


ಬಳ್ಳಾರಿ : ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ : ಸಾಧಕರಿಗೆ ಗೌರವ ಸನ್ಮಾನ


ಬಳ್ಳಾರಿ : ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ : ಸಾಧಕರಿಗೆ ಗೌರವ ಸನ್ಮಾನ


ಬಳ್ಳಾರಿ : ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ : ಸಾಧಕರಿಗೆ ಗೌರವ ಸನ್ಮಾನ


ಬಳ್ಳಾರಿ : ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ : ಸಾಧಕರಿಗೆ ಗೌರವ ಸನ್ಮಾನ


ಬಳ್ಳಾರಿ, 09 ಮೇ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಹಾಗೂ ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಜಿಲ್ಲಾ ಘಟಕದ ಸಹಯೋಗದಲ್ಲಿ ಭಾನುವಾರ ನಡೆಯಲಿರುವ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿಯಲ್ಲಿ ಡಾ. ಯಶವಂತ ಭೂಪಾಲ್, ಸಂಗನಕಲ್ಲು ಬಸವರಾಜ್, ಪತ್ರಕರ್ತ ಎನ್. ವೀರಭದ್ರಗೌಡ, ಬಿಮ್ಸ್ನ ನಿವೃತ್ತ ಪ್ರಾಂಶುಪಾಲ ಡಾ. ಎನ್. ಮಂಜುನಾಥ್, ಮಾಜಿ ಮೇಯರ್ ಪಾರ್ವತಿ ಎಸ್. ಇಂದುಶೇಖರ್, ಸಿಂಧವಾಳ ಕೇಶವರೆಡ್ಡಿ ಅವರನ್ನು ಗೌರವಿಸಲಾಗುತ್ತಿದೆ.

ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಜಿಲ್ಲಾ ಅಧ್ಯಕ್ಷರಾಗಿರುವ ಡಾ.ಎಸ್.ಜೆ.ವಿ. ಮಹಿಪಾಲ್ ಅವರು ಈ ಮಾಹಿತಿ ನೀಡಿದ್ದು, ಹೇಮರಡ್ಡಿ ಮಲ್ಲಮ್ಮ ಸಮಾಜದ ಆರು ಜನ ಗಣ್ಯರಿಗೆ ಗೌರವ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಕಿಷ್ಕಿಂದ ವಿಶ್ವ ವಿದ್ಯಾಲಯದ ಕಲಾಧಿಪತಿ ಡಾ. ಯಶವಂತ ಭೂಪಾಲ್, ಸಮಾಜಸೇವೆಗಾಗಿ ಸಂಗನಕಲ್ಲು ಬಸವರಾಜ್, ವೈದ್ಯಕೀಯ ಕ್ಷೇತ್ರದ ಸೇವೆಗಾಗಿ ಬಳ್ಳಾರಿ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿರುವ ಡಾ. ಎನ್. ಮಂಜುನಾಥ, ನ್ಯಾಯಾಂಗ ಕ್ಷೇತ್ರದ ಸೇವೆಗಾಗಿ ಮಾಜಿ ಮೇಯರ್ ಪಾರ್ವತಿ ಎಸ್. ಇಂದುಶೇಖರ್, ಸಾವಯವ ಕೃಷಿ ಕ್ಷೇತ್ರದಲ್ಲಿ ಸಿಂಧುವಾಳ ಕೇಶವರಡ್ಡಿ ಮತ್ತು

ಮಾಧ್ಯಮ ಕ್ಷೇತ್ರದ ಸೇವೆಗಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾಗಿರುವ ನಡವಿ ವೀರಭದ್ರಗೌಡ ಅವರನ್ನು ಗೌರವಿಸಿ - ಅಭಿನಂದಿಸಲಾಗುತ್ತದೆ ಎಂದು ಅವರು ಹೇಳಿದರು.

ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮ ಗುಡಿಯ ಆವರಣದಿಂದ ಭಾನುವಾರ ಸಂಜೆ 4.15 ರಿಂದ

ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರವನ್ನು ಸಾಂಸ್ಕøತಿಕ ತಂಡಗಳ ಮೇಳಗಳ ಜೊತೆಯಲ್ಲಿ ಮೆರವಣಿಗೆ ಪ್ರಾರಂಭವಾಗಿ ವಾಲ್ಮೀಕಿ ವೃತ್ತ(ಎಸ್ಪಿ ವೃತ್ತ)ದ ಮೂಲಕ ಬಸವ ಭವನವನ್ನು ತಲುಪಲಿದೆ.

ಬಸವಭವನದಲ್ಲಿ ನಡೆಯುವ ವೇದಿಕೆಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್. ಕೆ., ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್. ಎನ್., ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ ಹಾಗೂ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ ಎಂದರು.

ಬಸವರಾಜ ಅಮಾತಿ ಅವರು ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಅವರು ಕುರಿತು ಉಪನ್ಯಾಸ ನೀಡಲಿದ್ದಾರೆ.

ಎನ್. ಬಸವರಾಜ ಮತ್ತು ತಂಡವು ಹೇಮರೆಡ್ಡಿ ಮಲ್ಲಮ್ಮ ಅವರು ಕುರಿತಾದ ಗೀತೆಗಳ ಗಾಯನ ಮಾಡಲಿದೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande