ಇಂಡಿ ಕ್ಷೇತ್ರಕ್ಕೆ ಶಿಕ್ಷಣದ ಹೊಸ ಬೆಳಕು ; ಮೂರು ಗ್ರಾಮಗಳಿಗೆ ಪದವಿಪೂರ್ವ ಕಾಲೇಜು ಮಂಜೂರು
ಯಶವಂತರಾಯಗೌಡ
Collage


ವಿಜಯಪುರ, 09 ಮೇ (ಹಿ.ಸ.) :

ಆಂಕರ್ : ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಶಿರಶ್ಯಾಡ, ಹಡಲಸಂಗ ಹಾಗೂ ಬಸನಾಳ ಗ್ರಾಮಗಳಿಗೆ ರಾಜ್ಯ ಸರ್ಕಾರ ಏಕಕಾಲದಲ್ಲಿ ಮೂರು ಪದವಿಪೂರ್ವ ಕಾಲೇಜುಗಳನ್ನು ಮಂಜೂರು ಮಾಡಿರುವುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಹೊಸ ಸಂಭ್ರಮ ಮೂಡಿಸಿದೆ. ಹಲವು ವರ್ಷಗಳಿಂದ ಸ್ಥಳೀಯವಾಗಿ ಕಾಲೇಜುಗಳ ಕೊರತೆಯಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವ ಆತಂಕ ಎದುರಿಸುತ್ತಿದ್ದು, ಇದೀಗ ಸರ್ಕಾರದ ಈ ಮಹತ್ವದ ನಿರ್ಧಾರದಿಂದ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ದೊಡ್ಡ ಮಟ್ಟದ ನೆಮ್ಮದಿ ದೊರೆತಿದೆ ಎಂದ ಇಂಡಿ ಶಾಸಕ ಯಶವಂತರಾಯಗೌಡ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಈ ಕಾಲೇಜುಗಳು ಕಾರ್ಯಾರಂಭಗೊಳ್ಳಲಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ತಮ್ಮ ಊರಿನ ಸಮೀಪದಲ್ಲೇ ಗುಣಮಟ್ಟದ ಶಿಕ್ಷಣ ಪಡೆಯುವ ಅವಕಾಶ ಸಿಗಲಿದೆ. ವಿಶೇಷವಾಗಿ ದೂರದ ಊರುಗಳಿಗೆ ತೆರಳಿ ಶಿಕ್ಷಣ ಮುಂದುವರಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಇದು ವರದಾನವಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಶಿಕ್ಷಣಾಭಿಮಾನಿಗಳ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಕ್ಷೇತ್ರದ ಜನತೆ ಸ್ವಾಗತಿಸಿದ್ದಾರೆ. ಶಿಕ್ಷಣದ ಅಭಿವೃದ್ಧಿಯ ಮೂಲಕ ಗ್ರಾಮೀಣ ಭಾಗದ ಯುವಜನತೆಗೆ ಹೊಸ ಭವಿಷ್ಯ ರೂಪಿಸುವ ದಿಸೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಲಾಗಿದೆ.

ಈ ಕುರಿತು ಸಂತಸ ವ್ಯಕ್ತಪಡಿಸಿರುವ ನಾಯಕರು, “ಬಹುಕಾಲದ ಕನಸಾಗಿದ್ದ ಪದವಿಪೂರ್ವ ಕಾಲೇಜುಗಳ ಮಂಜೂರಾತಿ ಇದೀಗ ನನಸಾಗಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮಧ್ಯದಲ್ಲಿ ನಿಲ್ಲದಂತೆ ಸರ್ಕಾರ ಕೈಗೊಂಡ ಈ ಕ್ರಮ ಶ್ಲಾಘನೀಯ” ಎಂದು ತಿಳಿಸಿದ್ದಾರೆ.

ಹೊಸ ಕಾಲೇಜುಗಳ ಸ್ಥಾಪನೆಯಿಂದ ಶೈಕ್ಷಣಿಕ ವಾತಾವರಣ ಮತ್ತಷ್ಟು ವಿಸ್ತಾರಗೊಳ್ಳಲಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಹೊಸ ಗರಿ ಮೂಡಿದಂತಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande