190ನೇ ದಿನಕ್ಕೆ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಹೋರಾಟ
ಕೊಪ್ಪಳ, 08 ಮೇ (ಹಿ.ಸ.) : ಆ್ಯಂಕರ್ : ನಗರಸಭೆ ಮುಂದಿನ ಬಲ್ಡೋಟ ಕಾರ್ಖಾನೆ ತೊಲಗಿಸಿ ಅವಳಿ ನಗರದ 1.5 ಲಕ್ಷ ಜನರ ಜೀವ, ಆರೋಗ್ಯ ಉಳಿಸಬೇಕು ಎನ್ನುವ ಹೋರಾಟ 190 ದಿನ ಪೂರೈಸಿತು. ಕೊಪ್ಪಳ ನಗರದ ಅಣತಿ ದೂರದಲ್ಲಿರುವ ಬಲ್ಡೋಟ ಎಂಎಸ್ಪಿಎಲ್ ಪೆಲ್ಲೆಟ್ ಘಟಕ 2011ರಿಂದ ಕಾರ್ಯಾಚರಣೆ ಮಾಡುತ್ತಿರುವದರ
190ನೇ ದಿನದ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಹೋರಾಟ ಯಶಸ್ವಿ


190ನೇ ದಿನದ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಹೋರಾಟ ಯಶಸ್ವಿ


ಕೊಪ್ಪಳ, 08 ಮೇ (ಹಿ.ಸ.) :

ಆ್ಯಂಕರ್ : ನಗರಸಭೆ ಮುಂದಿನ ಬಲ್ಡೋಟ ಕಾರ್ಖಾನೆ ತೊಲಗಿಸಿ ಅವಳಿ ನಗರದ 1.5 ಲಕ್ಷ ಜನರ ಜೀವ, ಆರೋಗ್ಯ ಉಳಿಸಬೇಕು ಎನ್ನುವ ಹೋರಾಟ 190 ದಿನ ಪೂರೈಸಿತು.

ಕೊಪ್ಪಳ ನಗರದ ಅಣತಿ ದೂರದಲ್ಲಿರುವ ಬಲ್ಡೋಟ ಎಂಎಸ್ಪಿಎಲ್ ಪೆಲ್ಲೆಟ್ ಘಟಕ 2011ರಿಂದ ಕಾರ್ಯಾಚರಣೆ ಮಾಡುತ್ತಿರುವದರಿಂದ ನಗರದ ಅರ್ಧದಷ್ಟು ವಾರ್ಡಗಳನ್ನು ಮಾಲಿನ್ಯ ಮಾಡಿ ಇಲ್ಲಿನ ಜನರ ಆರೋಗ್ಯದ ಮೇಲೆ ದುಃಷ್ಪರಿಣಾಮ ಮಾಡುತ್ತಿರುವುದರಿಂದ ಈ ಘಟಕ ಬಂದ್ ಮಾಡಿ ಜನರ ಆರೋಗ್ಯ ಕಾಪಾಡಬೇಕು. ಬಲ್ಡೋಟ ಕಾರ್ಖಾನೆ ಅತಿಕ್ರಮಿಸಿರುವ ಬಸಾಪುರ ಕೆರೆಯನ್ನು ಜನ, ಜಾನುವಾರು ನೀರು ಕುಡಿಯಲು ಕಾಂಪೌಂಡ್ ತೆರವು ಮಾಡಬೇಕು. ತುಂಗಭದ್ರಾ ಜಲಾಶಯ ವಿಷಗೊಳಿಸುವ ಕಾರ್ಖಾನೆಗಳನ್ನು ಬಂದ್ ಮಾಡಬೇಕು. ಹಿರೇಬಗನಾಳ, ಅಲ್ಲಾನಗರ ಸುತ್ತಲಿನ ಸ್ಪಾಂಜ್ ಐರನ್ ಮುಂತಾದ ಘಟಕಗಳನ್ನು ಕೇಂದ್ರ ಪರಿಸರ ಇಲಾಖೆ ತಜ್ಞರ ಶಿಫಾರಸ್ಸಿನಂತೆ ನಿರ್ಜನ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕು. ಕಾರ್ಖಾನೆ ಬಾಧಿತ 22 ಹಳ್ಳಿಗಳ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಎಐಐಎಂಎಸ್ ಮತ್ತು ಐಐಎಸ್ಸಿ ಸಂಸ್ಥೆಗಳಿಂದ ಜನರ ಆರೋಗ್ಯ ಮತ್ತು ಪರಿಸರ ಹಾನಿಯ ಸಮೀಕ್ಷೆ ಮಾಡಿಸಬೇಕು ಎಂದು ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ಹೋರಾಟ ನಡೆಸಲಾಯಿತು.

ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹಲಗೇರಿ, ರಾಜಶೇಖರ ಏಳುಬಾವಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ಸುಭಾನ ಸಾಬ್ ನೀರಲಗಿ, ಶಿವಾನಂದಯ್ಯ ಬೀಳಗಿಮಠ, ಮಹಾದೇವಪ್ಪ ಮಾವಿನಮಡು, ಗವಿಸಿದ್ದಪ್ಪ ವದ್ನಾಳ ಹಿರೇಬಗನಾಳ, ನಾಗರಾಜ ಕುಷ್ಟಗಿ ಲಾಚನಕೇರಿ, ಹನುಮಂತಪ್ಪ ವದ್ನಾಳ, ಪಂಪಣ್ಣ ಚಿಂತಪಲ್ಲಿ, ಕಾಶಪ್ಪ ಚಲವಾದಿ, ಶಿವರಾಜ ಚಲವಾದಿ, ಗಂಗಮ್ಮ ಕುರುಗೋಡು, ವಿಜಯಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande