
ಕುಡತಿನಿ, 08 ಮೇ (ಹಿ.ಸ.) :
ಆ್ಯಂಕರ್ : ಕುರುಗೋಡು ಉಪ ವಿಭಾಗ ವ್ಯಾಪ್ತಿಯ ಕುಡತಿನಿ ಶಾಖೆಯಲ್ಲಿ ಟವರ್ ನಿರ್ಮಾಣ ಮತ್ತು ಕಂಡಕ್ಟರ್ ಸ್ಟಿಂಗ್ ಕಾಮಗಾರಿ ನಡೆಯುವುದರಿಂದ ಮೇ 9 ರಿಂದ 11 ರವರೆಗೆ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಏಳುಬೆಂಚಿ, ಸಿದ್ದಮ್ಮನಹಳ್ಳಿ, ಯರಂಗಳಿ, ಬಸವಣ್ಣ ಕ್ಯಾಂಪ್, ಭೂಲಕ್ಷ್ಮಿ ಕ್ಯಾಂಪ್ ಕೃಷಿ ಪ್ರದೇಶಗಳು, ಕುಡುತಿನಿ ನಗರ, ವೇಣಿವೀರಾಪುರ ಪೀಗ್ರಾಮಗಳು, ವೇಣಿವೀರಾಪುರ ಕೈಗಾರಿಕೆ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್