ಮಹಾದೇವತಾತನವರ ಪರಮಶಿಷ್ಯ ಕೊಳಗಲ್ಲು ಚನ್ನನಗೌಡ ಲಿಂಗೈಕ್ಯ
ಇದ್ದಾರೆ
ಮಹಾದೇವತಾತನವರ ಪರಮಶಿಷ್ಯ ಕೊಳಗಲ್ಲು ಚನ್ನನಗೌಡ ಲಿಂಗೈಕ್ಯ


ಬಳ್ಳಾರಿ, 08 ಮೇ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ವೀರಶೈವ ಲಿಂಗಾಯಿತ ಸಮಾಜದ ಮುಖಂಡರು, ಶಿವಶರಣ ಅಲ್ಲೀಪುರದ ಮಹಾದೇವತಾತನವರ ಒಡನಾಡಿಗಳು, ಆತ್ಮೀಯರು ಮತ್ತು ಪರಮಭಕ್ತರೂ ಆಗಿದ್ದ ಕೊಳಗಲ್ಲು ಚನ್ನನಗೌಡ (99) ಅವರು ಶುಕ್ರವಾರ ನಸುಕಿನಲ್ಲಿ ಲಿಂಗೈಕ್ಯರಾಗಿದ್ದಾರೆ.

ಮೃತರಿಗೆ ಮೂವರು ಹೆಣ್ಣು ಮಕ್ಕಳು, ಅಳಿಯಂದಿರರು, ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳು, ಇದ್ದಾರೆ.

ಮೃತರ ಅಂತ್ಯಕ್ರಿಯೆಯು ಕೊಳಗಲ್ಲು ಗ್ರಾಮದಲ್ಲಿರುವ ಅವರ ಕುಟುಂಬದ ಕೃಷಿ ಭೂಮಿಯಲ್ಲಿ ಮೃತರ ತಂದೆ - ತಾಯಿಯ ಸಮಾಧಿಯ ಪಕ್ಕದಲ್ಲಿ ಶುಕ್ರವಾರ ಮಧ್ಯಾಹ್ನ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

ಅಲ್ಲೀಪುರದ ಶ್ರೀಸದ್ಗುರು ಮಹಾದೇವ ತಾತನವರ ಮಠದ ಅಧ್ಯಕ್ಷರಾಗಿ, ತಾಲೂಕು ಬೋರ್ಡ್ ಸದಸ್ಯರಾಗಿ, 40 ವರ್ಷಗಳ ಕಾಲ ಕೊಳಗಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ಕೊಳಗಲ್ಲು ವಿಎಸ್ಎಸ್ಎನ್ ಅಧ್ಯಕ್ಷರಾಗಿ, ವ್ಯಾಪಾರಿಗಳಾಗಿ ಸೇವೆ ಸಲ್ಲಿಸಿ, ಜನಪ್ರಿಯರೂ - ಜನಾನುರಾಗಿಯೂ ಆಗಿದ್ದರು.

ವಿವರಗಳಿಗಾಗಿ ಡಾ. ಪುರುಷೋತ್ತಮಗೌಡ, ಅಧ್ಯಕ್ಷರು, ತುಂಗಭದ್ರ ರೈತ ಸಂಘ, ಮೊಬೈಲ್ : 99457 73393 ಗೆ ಸಂಪರ್ಕಿಸಿರಿ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande