
ರಾಯಚೂರು, 08 ಮೇ (ಹಿ.ಸ.) :
ಆ್ಯಂಕರ್ : ಕೈಗಾರಿಕಾ ತರಬೇತಿ ಸಂಸ್ಥೆ ರಾಯಚೂರು ವತಿಯಿಂದ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ರವರ ಸಹಕಾರದೊಂದಿಗೆ 2026-27 ನೇ ಸಾಲಿನಲ್ಲಿ ದಿನಾಂಕ 11/05/2026 ರಂದು ಬೆಳ್ಳಿಗೆ 10.00 ಗಂಟೆಗೆ ಉದ್ಯೋಗ ಮೇಳವನ್ನು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ರಾಯಚೂರು ಇಲ್ಲಿ ಆಯೋಜಿಸಲಾಗಿದೆ ಎಂದು ಉದ್ಯೋಗಾಧಿಕಾರಿ ನವೀನಕುಮಾರ ಸಂಗೇಪಾಗ್ ಅವರು ತಿಳಿಸಿದ್ದಾರೆ.
ಮೇಳದಲ್ಲಿ ಭಾಗವಹಿಸುವ ಕಂಪನಿಗಳು ಸಾವಿತ್ರಿ ಗ್ರೂಪ್ ಆಫ್ ಇಂಡಸ್ಟ್ರೀಸ್, óಷಾó ಹೊಂಡಯೈ ಸೇಲ್ಸ್ ಆಂಡ್ ಸರ್ವಿಸಸ್ ರಾಯಚೂರು, ತಿರುಮಲ ಹೊಂಡ ಸೇಲ್ಸ್ ಆಂಡ್ ಸರ್ವಿಸಸ್ರಾಯಚೂರು, ಹೋಂಡಾ ಪ್ರೈವೇಟ್ ಲಿಮಿಟೆಡ್ ಕೋಲಾರ, ಕೇನ್ಸ ಟೆಕ್ನಾಲಜಿ ಇಂಡಿಯಾ ಲಿಮಿಟೆಡ್, ಎಲ್,ಆಂಡ್,ಟಿ, ಜೆ,ಎಸ್,ಡ್ಬ್ಯೂ ಟೊಯೋಟಾ, ಶಿಲ್ಪಾ ಫಾರ್ಮಾ ಸಿಟಿಕಲ್ಸ್ ರಾಯಚೂರು, ಸ್ಕೈ ಲೈನ್ ಮ್ಯಾನೆಜಮೇಂಟ್ ಸರ್ವಿಸಸ್, ನಿರ್ಮಾಣ ಆರ್ಗನೈಜೇಷನ್ ಬೆಂಗಳೂರು, ಸಾರಾ ಕನ್ಸಲ್ಟೆನ್ಸಿ ಆಂಡ್ ಸರ್ವಿಸಸ್, ಆಡ್ರೋಯಿಟ್ ಸ್ಟ್ಯಾಫಿಂಗ್ ಸಲ್ಯೂಷನ್ಸ್, ಇ ಟೂ ಇ ಪ್ರಕ್ಯೂರ್ಮೆಂಟ್ ಹಾಗೂ ಬೆಂಗಳೂರು ಮತ್ತು ಹೈದ್ರಾಬಾದ್ ನ ಪ್ರತಿಷ್ಟಿತ ಬಹುರಾಷ್ಟ್ರೀಯ ಕಂಪನಿಗಳು ಸದರಿ ಉದ್ಯೋಗ ಮೇಳದಲ್ಲಿ ವಿವಿಧ ಉದ್ದಿಮೆಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದು ಮೇಳದಲ್ಲಿ ಅಭ್ಯರ್ಥಿಗಳನ್ನು ಆಯ್ಕೆಮಾಡಿಕೊಳ್ಳುತ್ತಿರುವುದರಿಂದ ಸದರಿ ಮೇಳಕ್ಕೆ ಎಸ್.ಎಸ್.ಎಲ್.ಸಿ, ಪಿಯುಸಿ, ಡಿಪ್ಲೋಮೊ ಪೂರ್ಣಗೊಳಿಸಿದ ಹಾಗೂ ಪದವಿಧರರು ಮತ್ತು ಐಟಿಐನ ಎಲ್ಲಾ ವೃತ್ತಿಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದು.
ಆಸಕ್ತ ಅಭ್ಯರ್ಥಿಗಳು ಈ ಮೇಳದ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮಾಣಿಕ್ ನಗರ ರಾಯಚೂರು . ಮೊ.ಸಂ: 1) 9036684778 2) 9035198134 ಇವರನ್ನು ಸಂಪರ್ಕಿಸಬಹುದೆಂದು ಉದ್ಯೋಗಾಧಿಕಾರಿಗಳಾದ ನವೀನಕುಮಾರ ಸಂಗೇಪಾಗ್ ಅವರು ತಿಳಿಸಿರುತ್ತಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್