ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಗದಗ, 08 ಮೇ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2025-26 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಪ್ರತಿಶತ 70 ಕ್ಕಿಂತಲೂ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ, ಕಲಿಕಾ ಸಾಮಗ್ರಿಗಳ ವಿತರ
ಫೋಟೋ


ಗದಗ, 08 ಮೇ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2025-26 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಪ್ರತಿಶತ 70 ಕ್ಕಿಂತಲೂ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ, ಕಲಿಕಾ ಸಾಮಗ್ರಿಗಳ ವಿತರಣೆ, 2025-26ನೇ ಸಾಲಿನನಲ್ಲಿ ಸೇವಾ ನಿವೃತ್ತಿ ಹೊಂದಿದ ಸಂಘದ ನೌಕರ ಸದಸ್ಯರಿಗೆ ಹಾಗೂ ಸಂಘದ ಹಿರಿಯ ನಿವೃತ್ತ ನೌಕರ ಸದಸ್ಯರಿಗೆ ಸನ್ಮಾನ ಮತ್ತು ವಿಶ್ವಕರ್ಮ ಭವನ, ವಿದ್ಯಾರ್ಥಿ ವಸತಿ ನಿಲಯಗಳ ಕಟ್ಟಡಕ್ಕೆ ದೇಣಿಗೆ ನೀಡಿದ ಮಹಾದಾನಿಗಳ ಫೋಟೋ ಅನಾವರಣ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ವಿಶ್ವಕರ್ಮ ಸಮಾಜದ ನೌಕರ ಸಂಘಗಳ ಅಧ್ಯಕ್ಷರುಗಳಗೆ ಸನ್ಮಾನ ಸಮಾರಂಭ ದಿನಾಂಕ 24-05-2026 ರ ರವಿವಾರ ಬೆಳೆಗ್ಗೆ 9-30 ಕ್ಕೆ ನಗರದ ವಿಶ್ವಕರ್ಮ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

2025-26 ನೇ ಸಾಲಿನ ಸಾರ್ವತ್ರಿಕ ಪರೀಕ್ಷೆಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳಲ್ಲಿ ಶೇ. 70 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ ಅರ್ಹರು. ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳಲ್ಲಿ ಮೊದಲ ಮೂರು ಸ್ಥಾನ ಪಡೆದ ಜಿಲ್ಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿಶೇಷ ಪ್ರತಿಭಾ ಪುರಸ್ಕಾರ ಹಾಗೂ ಉಳಿದ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರದೊಂದಿಗೆ ಸನ್ಮಾನಿಸಿ ಗೌರವಿಸಲಾಗುವುದು. ದೃಢೀಕರಿಸಿದ ಅಂಕಪಟ್ಟಿ, ಆಧಾರ ಕಾರ್ಡ, ಹಾಗೂ 2 ಪಾಸ್ ಪೋರ್ಟ ಫೋಟೋಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ದಿನಾಂಕ 18-05-2026 ರೊಳಗಾಗಿ ಸಂಘದ ಗೂಗಲ್ ಫಾರ್ಮನಲ್ಲಿ ಅಥವಾ ಖುದ್ದಾಗಿ ಸಂಘದ ಕಾರ್ಯಾಲಯದಲ್ಲಿ ಅಥವಾ ತಾಲೂಕಾ ನಿದರ್ಶಕರಿಗೆ ಅಥವಾ ಆಯ್ಕೆ ಸಮಿತಿಯವರಿಗೆ ಸಲ್ಲಿಸಬೇಕು.

ಪಿಯುಸಿ ವಿಭಾಗ ಕೆ. ಎಸ್. ಬಡಿಗೇರ- 9482176166, ಆರ್. ಎಂ. ಬಡಿಗೇರ- 9916765934, ವಿಜಯಕುಮಾರ ರಾಜನಾಳ- 9341804366 ಹಾಗೂ ಎಸ್ ಎಸ್ ಎಲ್ ಸಿ ವಿಭಾಗ ಚಿದಾನಂದ ಎಂ. ಪತ್ತಾರ- 9449187796, ಡಿ. ಎಸ್. ಬಡಿಗೇರ- 9481523535, ಬಿ. ಎಂ. ಬಡಿಗೇರ- 9482001657 ಸಂಖ್ಯೆಗಳಗೆ ಸಂಪರ್ಕಿಸಿ ಹೆಸರು ನೊಂದಾಯಿಸಬಹುದು.

ವೃತ್ತಿಪರ ಪದವಿಗಳಾದ ಎಂ ಬಿ ಬಿ ಎಸ್, ಬಿ ಎ ಎಂ ಎಸ್, ಎಂ ವಿ ಎ, ಬಿ ವಿ ಎಸ್, ಬಿ ಡಿ ಎಸ್, ಎನ್ ಐ ಟಿ, ಐ ಐ ಟಿ, ಐಐಎಂ ಎಸ್, ಬಿ ಎಸ್ ಸಿ ನರ್ಸಿಂಗ್, ಬಿ ಎಸ್ ಸಿ ಅಗ್ರಿ, ಬಿ ಇ ಕೋರ್ಸಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಅಭ್ಯರ್ಥಿಗಳು ಪ್ರತಿಭಾ ಪ್ರುರಸ್ಕಾರಕ್ಕಾಗಿ ಡಾ. ಗಿರೀಶ ಬಡಿಗೇರ- 9742842134 ಹಾಗೂ ವಿಜಯಕುಮಾರ ರಾಜನಾಳ- 9341804366 ಇವರಲ್ಲಿ ಹೆಸರು ನೊಂದಾಯಿಸಬೇಕು ಎಂದು ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರಾಜಗೋಪಾಲ ಕಡ್ಲಿಕೊಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಡಾ. ಸಿ. ವಿ. ಬಡಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande