189ನೇ ದಿನದ ಬಲ್ಡೋಟ ವಿರೋಧಿ ಹೋರಾಟ ಪೂರ್ಣ
ಕೊಪ್ಪಳ, 07 ಮೇ (ಹಿ.ಸ.): ಆ್ಯಂಕರ್ : ನಗರಸಭೆ ಮೈದಾನದಲ್ಲಿ ನಡೆದಿರುವ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಹೋರಾಟ 189 ದಿನ ಪೂರ್ಣಗೊಳಿಸಿತು. ಕೊಪ್ಪಳ ನಗರಕ್ಕೆ ಹೊಂದಿಕೊಂಡು 2011ರಿಂದ ಕಾರ್ಯಾಚರಣೆ ಮಾಡುತ್ತಿರುವ ಬಲ್ಡೋಟ ಎಂಎಸ್ಪಿಎಲ್ ಪಲ್ಲೆಟ್ ಘಟಕ ನಗರದ ಅರ್ಧ ಭಾಗವನ್ನು ಮಾಲಿನ್ಯ ಮಾಡಿ ಇಲ್ಲಿನ ಜ
189ನೇ ದಿನದ ಬಲ್ಡೋಟ ವಿರೋಧಿ ಹೋರಾಟ ಪೂರ್ಣ


189ನೇ ದಿನದ ಬಲ್ಡೋಟ ವಿರೋಧಿ ಹೋರಾಟ ಪೂರ್ಣ


ಕೊಪ್ಪಳ, 07 ಮೇ (ಹಿ.ಸ.):

ಆ್ಯಂಕರ್ : ನಗರಸಭೆ ಮೈದಾನದಲ್ಲಿ ನಡೆದಿರುವ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಹೋರಾಟ 189 ದಿನ ಪೂರ್ಣಗೊಳಿಸಿತು. ಕೊಪ್ಪಳ ನಗರಕ್ಕೆ ಹೊಂದಿಕೊಂಡು 2011ರಿಂದ ಕಾರ್ಯಾಚರಣೆ ಮಾಡುತ್ತಿರುವ ಬಲ್ಡೋಟ ಎಂಎಸ್ಪಿಎಲ್ ಪಲ್ಲೆಟ್ ಘಟಕ ನಗರದ ಅರ್ಧ ಭಾಗವನ್ನು ಮಾಲಿನ್ಯ ಮಾಡಿ ಇಲ್ಲಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಮಾಡುತ್ತಿದೆ. ಈ ಘಟಕ ಬಂದ್ ಮಾಡಿ ಜನರ ಹಿತ ಕಾಪಾಡಬೇಕು.

ಬಸಾಪುರ ಕೆರೆ ಜನ, ಜಾನುವಾರುಗಳಿಗೆ ನೀರು ಕುಡಿಯಲು ಮುಕ್ತಗೊಳಿಸಬೇಕು. ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು ಸೀಜ್ ಮಾಡಬೆಕು. ಹಿರೇಬಗನಾಳ, ಅಲ್ಲಾನಗರ ಸುತ್ತಲಿನ ಸ್ಪಾಂಜ್ ಐರನ್ ಘಟಕಗಳನ್ನು ಕೇಂದ್ರ ಪರಿಸರ ಇಲಾಖೆಯ ಶಿಫಾರಸ್ಸಿನಂತೆ ಸ್ಥಳಾಂತರ ಮಾಡಬೇಕು. 22 ಕಾರ್ಖಾನೆ ಬಾಧಿತ ಹಳ್ಳಿಗಳ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು.

ಎಐಐಎಂಎಸ್ ಮತ್ತು ಐಐಎಸ್ಸಿ ಸಂಸ್ಥೆಗಳಿಂದ ಜನರ ಆರೋಗ್ಯ ಮತ್ತು ಪರಿಸರ ಹಾನಿಯ ಸರ್ವೆ ಮಾಡಿಸಬೇಕು ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ಧರಣಿ ನಡೆಸಲಾಗುತ್ತಿದೆ. ಧರಣಿಯಲ್ಲಿ

ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ನಿವೃತ್ತ ಪ್ರಾಚಾರ್ಯ ಎಲ್.ಎಫ್ ಪಾಟೀಲ್, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಮೂಕಪ್ಪ ಮೇಸ್ತ್ರಿ ಬಸಾಪುರ, ಮಹೇಶ ಮನ್ಶಾಪುರ, ರವಿ ಕಾಂತನವರ, ಗಾಳೆಪ್ಪ ಪೂಜಾರ, ಮಖ್ಬುಲ್ ರಾಯಚೂರು, ಶಿವಾನಂದಯ್ಯ ಬೀಳಗಿಮಠ, ಮಹಾದೇವಪ್ಪ ಮಾವಿನಮಡು, ಮಹ್ಮದ್ ಅಖ್ತರ್ ಸಿದ್ದಿಕಿ, ಬಾಲಕ ಆರ್ಣವ ಮನ್ನಾಪುರ, ಹನುಮಂತಪ್ಪ ವದ್ನಾಳ, ಗಾಳೆಪ್ಪ ಕಡೇಮನಿ, ಮಂಜುನಾಥ ಕವಲೂರು, ವಿನಯ ಸಜ್ಜನ್, ಗಾಯಕ ಸದಾಶಿವ ಪಟೇಲ್, ಹನುಮಪ್ಪ ದಳವಾಯಿ, ನಾಗರಾಜ ಕುಷ್ಟಗಿ, ಗಂಗಮ್ಮ ಕುರುಗೋಡು, ದೇವೇಂದ್ರಪ್ಪ ಪೂಜಾರ, ಚನ್ನವೀರಯ್ಯ ಹಿರೇಮಠ, ಮಹಾದೇವಯ್ಯ ಸಾಲಿಮಠ, ಭೀಮಪ್ಪ ಯಲಬುರ್ಗಾ, ದುರುಗಪ್ಪ ಕನಕಮನಿ ವಿಜಯಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ ಇದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande