
ಕಲಬುರಗಿ, 07 ಮೇ (ಹಿ.ಸ.):
ಆ್ಯಂಕರ್:
ಸಾರ್ವಜನಿಕ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಕಲಬುರಗಿ ಮತ್ತು ದಾಂಡೇಲಿ ನಡುವೆ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗ-1ರ ಕಲಬುರಗಿ ಘಟಕ-1 ವತಿಯಿಂದ ಮೇ 2026ರಿಂದ ಈ ಹೊಸ ಸಾರಿಗೆ ಸೇವೆ ಕಾರ್ಯಾಚರಣೆಗೆ ಬಂದಿದ್ದು, ಪ್ರವಾಸಿ ತಾಣಗಳ ವೀಕ್ಷಣೆಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಈ ಬಸ್ ಸೇವೆ ಜೇವರ್ಗಿ, ಶಹಾಪುರ, ಅಂಗಸೂಗುರು, ಕುಷ್ಟಗಿ, ಗದಗ, ಹುಬ್ಬಳ್ಳಿ ಹಾಗೂ ಧಾರವಾಡ ಮಾರ್ಗವಾಗಿ ಸಂಚರಿಸಲಿದೆ.
ಕಲಬುರಗಿ ಬಸ್ ನಿಲ್ದಾಣದಿಂದ ರಾತ್ರಿ 10 ಗಂಟೆಗೆ ಹೊರಡುವ ಬಸ್, ದಾಂಡೇಲಿಗೆ ಬೆಳಿಗ್ಗೆ 8.30ಕ್ಕೆ ತಲುಪಲಿದೆ. ದಾಂಡೇಲಿ ಬಸ್ ನಿಲ್ದಾಣದಿಂದ ಸಂಜೆ 6.30ಕ್ಕೆ ಹೊರಡುವ ಬಸ್, ಕಲಬುರಗಿಗೆ ಬೆಳಿಗ್ಗೆ 5 ಗಂಟೆಗೆ ಆಗಮಿಸಲಿದೆ.
ಪ್ರಯಾಣಿಕರು ಈ ಹೊಸ ಸಾರಿಗೆ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa