ಮೇ 10 : ಕೊಪ್ಪಳ - ಕಿನ್ನಾಳ ಉಪಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ
ಕೊಪ್ಪಳ, 07 ಮೇ (ಹಿ.ಸ.) : ಆ್ಯಂಕರ್ : ಜೆಸ್ಕಾಂ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ 110 ಕೆವಿ ಕೊಪ್ಪಳ ಹಾಗೂ 33 ಕೆವಿ ಕಿನ್ನಾಳ ಉಪಕೇಂದ್ರಕ್ಕೆ ಒಳಪಡುವ ವಿವಿಧ ಫೀಡರ್ಗಳಲ್ಲಿ ಮುಂಗಾರು ಪೂರ್ವ ನಿರ್ವಹಣೆ ಕಾಮಗಾರಿಯ ನಿಮಿತ್ತ ಸಂಬ0ಧಿಸಿದ ಫೀಡರ್ ವ್ಯಾಪ್ತಿಯಲ್ಲಿ ಮೇ 10 ರಂದು ಬೆಳಿಗ್ಗೆ 8 ಗಂಟೆಯಿ0
ಮೇ 10 : ಕೊಪ್ಪಳ - ಕಿನ್ನಾಳ ಉಪಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ


ಕೊಪ್ಪಳ, 07 ಮೇ (ಹಿ.ಸ.) :

ಆ್ಯಂಕರ್ : ಜೆಸ್ಕಾಂ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ 110 ಕೆವಿ ಕೊಪ್ಪಳ ಹಾಗೂ 33 ಕೆವಿ ಕಿನ್ನಾಳ ಉಪಕೇಂದ್ರಕ್ಕೆ ಒಳಪಡುವ ವಿವಿಧ ಫೀಡರ್ಗಳಲ್ಲಿ ಮುಂಗಾರು ಪೂರ್ವ ನಿರ್ವಹಣೆ ಕಾಮಗಾರಿಯ ನಿಮಿತ್ತ ಸಂಬ0ಧಿಸಿದ ಫೀಡರ್ ವ್ಯಾಪ್ತಿಯಲ್ಲಿ ಮೇ 10 ರಂದು ಬೆಳಿಗ್ಗೆ 8 ಗಂಟೆಯಿ0ದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಕೊಪ್ಪಳ ಉಪಕೇಂದ್ರದ ಫೀಡರ್ಗಳಾದ ಎಫ್-1 ಕಾಮನೂರ, ಎಫ್-2 ಕೆಡಬ್ಲೂಎಸ್, ಎಫ್-3 ಎಸ್ಜಿ ಕಾಲೇಜ್, ಎಫ್-4 ಎಲ್ಐಎಸ್, ಎಫ್-5 ಬಗನಾಳ, ಎಫ್-6 ಬಸಾಪೂರ, ಎಫ್-8 ಭಾಗ್ಯನಗರ, ಎಫ್-9 ಬನ್ನಿಕಟ್ಟಿ, ಎಫ್ 10 ಗವಿಮಠ, ಎಫ್ 11 ಡಿಸಿ ಆಫೀಸ್, ಎಫ್ 12 ತಾಲೂಕ ಪಂಚಾಯತ, ಎಫ್-13 ಕಾಳಿದಾಸನಗರ, ಎಫ್-14 ಜಾತ್ರ ಫೀಡರ್ ವ್ಯಾಪ್ತಿಯಲ್ಲಿ ಮತ್ತು ಕಿನ್ನಾಳ ಉಪಕೇಂದ್ರದ ಎಫ್-1 ದೇವಲಾಪೂರ, ಎಫ್-2 ಕಿನ್ನಾಳ, ಎಫ್-3 ಓಜನಹಳ್ಳಿ, ಎಫ್-4 ಕಲಕೇರಿ, ಎಫ್-5 ಬುಡಶೆಟ್ನಾಳ, ಎಫ್-6 ಯತ್ನಟ್ಟಿ ಎನ್.ಜೆ.ವೈ ಫೀಡರ್ಗಳ ವ್ಯಾಪ್ತಿಗೆ ಒಳಪಡುವ ಕಾರ್ಯ ಮತ್ತು ಪಾಲನಾ ಶಾಖೆ-1, ಶಾಖೆ-2 ಮತ್ತು ಭಾಗ್ಯನಗರ ಶಾಖೆ ವ್ಯಾಪ್ತಿಯ ಎಲ್ಲ ಏರಿಯಾ ಹಾಗೂ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕು.

ಕಾಮಗಾರಿಯು ಬೇಗನೆ ಪೂರ್ಣಗೊಂಡಲ್ಲಿ ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಈ ಅವಧಿಯಲ್ಲಿ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ತಿ ಕೆಲಸಗಳನ್ನು ಕೈಗೊಳ್ಳಬಾರದೆಂದು ಸೂಚಿಸಲಾಗಿದೆ.

ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande