

ಬಳ್ಳಾರಿ, 07 ಮೇ (ಹಿ.ಸ.)
ಆ್ಯಂಕರ್ : ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ ಅವರು ನಗರದಲ್ಲಿನ ಬೀದಿಬದಿ ವ್ಯಾಪಾರಿಗಳಿಗೆ ನೆರಳಿಗಾಗಿ ಬೃಹತ್ ಕೊಡೆಗಳನ್ನು ಗುರುವಾರ ವಿತರಣೆ ಮಾಡಿದ್ದಾರೆ.
ಬಳ್ಳಾರಿಗೆ ಗಡಿಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆಯ ಎರಡೂ ಬದಿಗಳು ಹಾಗೂ ದೊಡ್ಡ ಮಾರುಕಟ್ಟೆ ಬಳಿಯ ಬೀದಿ ಬದಿ ವ್ಯಾಪಾರಸ್ಥರಿಗೆ ಈ ಕೊಡೆಗಳನ್ನು ವಿತರಿಸಲಾಯಿತು.
ಕೊಡೆಗಳ ವಿತರಣೆಯು ಮೂರು ದಿನಗಳಿಂದ ಕೊಡೆಗಳ ವಿತರಣೆ ನಡೆಯುತ್ತಿದ್ದು, ಮೂರನೆ ದಿನವಾದ ಗುರುವಾರವೂ ವಿತರಣೆ ನಡೆಯಿತು.
ಥಿಯೇಟರ್ ಶಿವು, ದುರ್ಗಾಮೋಹನ್, ಟಿಲ್ಲು, ಬೆಣಕಲ್ ರಘು, ಕಪ್ಪೆಶಿವು, ಸೆವೆನ್ ಹಿಲ್ಸ್ ರಘು, ಗೌತಮ್, ಧರ್ಮಶ್ರೀ, ಭಾಸ್ಕರ್ ರೆಡ್ಡಿ, ಟಿ.ಹೆಚ್. ಸೀನಾ, ರಘು, ಬುಜ್ಜಿ, ಹನಮಂತು, ರಸೂಲ್, ಪ್ರದೀಪ್, ಶ್ರೀಕಾಂತ್, ಸುನೀಲ್, ಶಶಿ ಸೇರಿದಂತೆ ಇನ್ನಿತರರು ಕೊಡೆಗಳನ್ನು ವಿತರಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್