ಕಬ್ಬು ಬೆಳೆ ಎಫ್.ಆರ್.ಪಿ ದರ ಹೆಚ್ಚಳಕ್ಕೆ ಕಬ್ಬು ಬೆಳೆಗಾರರ ಸಂಘ ಒತ್ತಾಯ
ಬೆಂಗಳೂರು, 06 ಮೇ (ಹಿ.ಸ.) : ಆ್ಯಂಕರ್ : 2026–27ನೇ ಸಾಲಿಗೆ ಕೇಂದ್ರ ಸರ್ಕಾರ ಘೋಷಿಸಿರುವ ಟನ್ಗೆ ₹3650 ಕಬ್ಬಿನ ಕನಿಷ್ಠ ನ್ಯಾಯಸಮ್ಮತ ಬೆಲೆ (ಎಫ್‌.ಆರ್‌.ಪಿ) ರೈತರಿಗೆ ನ್ಯಾಯಸಮ್ಮತವಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಸಂಘದ ರಾಜ್ಯಾಧ್ಯಕ್ಷ ಕುರುಬ
ಕುರಬೂರು ಶಾಂತಕುಮಾರ


ಬೆಂಗಳೂರು, 06 ಮೇ (ಹಿ.ಸ.) :

ಆ್ಯಂಕರ್ : 2026–27ನೇ ಸಾಲಿಗೆ ಕೇಂದ್ರ ಸರ್ಕಾರ ಘೋಷಿಸಿರುವ ಟನ್ಗೆ ₹3650 ಕಬ್ಬಿನ ಕನಿಷ್ಠ ನ್ಯಾಯಸಮ್ಮತ ಬೆಲೆ (ಎಫ್‌.ಆರ್‌.ಪಿ) ರೈತರಿಗೆ ನ್ಯಾಯಸಮ್ಮತವಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಈ ಕುರಿತು ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಪತ್ರಿಕಾ ಪ್ರಕಟಣೆ ನೀಡಿದ್ದು, 10.25% ಸಕ್ಕರೆ ಇಳುವರಿ ಆಧಾರದ ಮೇಲೆ ನಿಗದಿಪಡಿಸಿರುವ ಈ ದರವು ರೈತರ ಉತ್ಪಾದನಾ ವೆಚ್ಚಕ್ಕೂ ತಲುಪುತ್ತಿಲ್ಲ ಎಂದು ಹೇಳಿದ್ದಾರೆ. ಕರ್ನಾಟಕ ಸರ್ಕಾರವು ಟನ್ ಗೆ ₹4450 ನಿಗದಿ ಮಾಡಲು ಶಿಫಾರಸು ಮಾಡಿದ್ದರೂ, ಅದನ್ನು ಪರಿಗಣಿಸದೆ ಕಡಿಮೆ ದರ ಘೋಷಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ದರ ಮುಂದುವರಿದರೆ ರೈತರು ಕಬ್ಬು ಬೆಳೆಯಿಂದ ದೂರವಾಗುವ ಪರಿಸ್ಥಿತಿ ಉಂಟಾಗಬಹುದು ಎಂದು ಎಚ್ಚರಿಸಿದ ಅವರು, ಕೂಡಲೇ ಎಫ್‌.ಆರ್‌.ಪಿ ದರವನ್ನು ಮರುಪರಿಶೀಲಿಸಿ ಕನಿಷ್ಠ ₹4500ಕ್ಕೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಸಕ್ಕರೆ, ಎಥನಾಲ್, ವಿದ್ಯುತ್ ಹಾಗೂ ಕಾಂಪೋಸ್ಟ್ ಗೊಬ್ಬರ ಸೇರಿದಂತೆ ಹಲವು ಉತ್ಪನ್ನಗಳನ್ನು ತಯಾರಿಸುತ್ತಿದ್ದರೂ, ರೈತರಿಗೆ ಸಮರ್ಪಕ ಬೆಲೆ ನೀಡುತ್ತಿಲ್ಲ. ಜೊತೆಗೆ, ಕಬ್ಬಿನ ಹಣ ಪಾವತಿಯಲ್ಲಿ ವಿಳಂಬವಾಗುತ್ತಿರುವುದು ಗಂಭೀರ ಸಮಸ್ಯೆಯಾಗಿದೆ ಎಂದು ಅವರು ದೂರಿದ್ದಾರೆ.

ಇಂತಹ ಅನ್ಯಾಯಗಳನ್ನು ತಡೆಗಟ್ಟಲು 1966ರ ಸಕ್ಕರೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಿ, ನಿಯಮ ಉಲ್ಲಂಘಿಸುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಸಂಘ ಆಗ್ರಹಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande