ಮಹಿಳಾ ಸಬಲೀಕರಣ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿಗಳ ಸೂಚನೆ
ಮಹಿಳಾ ಸಬಲೀಕರಣ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿಗಳ ಸೂಚನೆ
ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಮಹಿಳಾ ಸಬಲೀಕರಣ ಯೋಜನೆಗಳ ಅನುಷ್ಠಾನಗಳ ಸಭೆ ನಡೆಸಿದರು


ಕೋಲಾರ, ೦೬ ಮೇ (ಹಿ.ಸ) :

ಆ್ಯಂಕರ್ : ಮಹಿಳಾ ಸಬಲೀಕರಣದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಅಪೌಷ್ಟಿಕತೆ ನಿವಾರಣೆ, ಗೃಹಲಕ್ಷಿö್ಮ ಯೋಜನೆ ಸೇರಿದಂತೆ ಮಹಿಳಾ ಸುರಕ್ಷತಾ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ೨೦೨೫-೨೬ನೇ ಸಾಲಿನ ನಾಲ್ಕನೇ ತ್ರೈಮಾಸಿಕದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲೆಯ ಅಪೌಷ್ಟಿಕತೆ ನಿವಾರಣೆ, ಗೃಹಲಕ್ಷ್ಮಿ ಯೋಜನೆ, ಸ್ತ್ರೀಶಕ್ತಿ ಒಕ್ಕೂಟಗಳು, ಮಹಿಳಾ ಸುರಕ್ಷತಾ ಕಾಯ್ದೆಗಳು ಹಾಗೂ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಸೇರಿದಂತೆ ಇಲಾಖೆಯ ವಿವಿಧ ಜನಕಲ್ಯಾಣ ಕಾರ್ಯಕ್ರಮಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯ ಕುರಿತು ವಿಸ್ತೃತವಾಗಿ ಚರ್ಚಿಸಿ, ಅಗತ್ಯ ನಿರ್ದೇಶನಗಳನ್ನು ನೀಡಿದರು.

ಜಿಲ್ಲೆಯ ಉಪ ನಿರ್ದೇಶಕರ ಕಚೇರಿ ಹಾಗೂ ೬ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಒಟ್ಟು ೧೫ ಹುದ್ದೆಗಳು ಮತ್ತು ಯೋಜನಾ ಹಂತದಲ್ಲಿ ೧೩೦ ಹುದ್ದೆಗಳು ಸೇರಿ ಒಟ್ಟು ೧೪೫ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ ಪ್ರಸ್ತುತ ೩೮ ಹುದ್ದೆಗಳು ಭರ್ತಿಯಾಗಿದ್ದು, ೧೦೭ ಹುದ್ದೆಗಳು ಖಾಲಿ ಇವೆ. ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಈಗಾಗಲೇ ಅರೆ ಸರ್ಕಾರಿ ಪತ್ರ ವ್ಯವಹಾರ ನಡೆಸಲಾಗಿದೆ ಎಂದು ಇಲಾಖೆಯ ಉಪನಿರ್ದೇಶಕರು ಸಭೆಗೆ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು ೨೧೮೦, ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳು ಮಂಜೂರಾಗಿದ್ದು, ೨೧೧೧, ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ (೬೯ ಖಾಲಿ ಹುದ್ದೆ). ಹಾಗೆಯೇ, ೨೧೮೦, ಅಂಗನವಾಡಿ ಸಹಾಯಕಿಯರ ಹುದ್ದೆಗಳಲ್ಲಿ ೧೯೪೬, ಸಿಬ್ಬಂದಿ ಕಾರ್ಯನಿರತರಾಗಿದ್ದು, ೨೩೪ ಹುದ್ದೆಗಳು ಖಾಲಿಯಿರುತ್ತವೆ ಎಂದು ಅವರು ತಿಳಿಸಿದರು.

೨೦೨೫-೨೬ ನೇ ಸಾಲಿನಲ್ಲಿ ಆಡಳಿತ ವೆಚ್ಚದಡಿ ಒಟ್ಟು ೪೬೫೪.೮೦ ಲಕ್ಷ ರೂ.ಗಳ ಆಯವ್ಯಯ ಹಂಚಿಕೆಯಾಗಿದ್ದು, ೫೧೦೬.೮೪ ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಮಾರ್ಚ್-೨೬ರ ಅಂತ್ಯಕ್ಕೆ ಒಟ್ಟು ೪೮೪೬.೨೨ ಲಕ್ಷ ರೂ. (ಶೇ. ೯೪.೯೦) ಪ್ರಗತಿ ಸಾಧಿಸಲಾಗಿದೆ. ಹೆಚ್ಚುವರಿ ಅನುದಾನ ಬಿಡುಗಡೆಯಾಗಿರುವುದರಿಂದ ಈ ಸಾಧನೆ ದಾಖಲಾಗಿದೆ.

ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಡಿ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಅತ್ಯುತ್ತಮ ಆರ್ಥಿಕ ಪ್ರಗತಿ ಕಂಡುಬAದಿದೆ.

ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿಯಡಿ ಕೋಲಾರ ಜಿಲ್ಲೆಯಲ್ಲಿ ಫೆಬ್ರವರಿ-೨೦೨೬ರ ಮಾಹೆಯ ಅಂತ್ಯಕ್ಕೆ ೩.೨೯ ಲಕ್ಷಕ್ಕೂ ಅಧಿಕ ನೊಂದಣಿ ಮಾಡಿಕೊಂಡಿದ್ದಾರೆ. (ಗ್ರಾಮೀಣ: ೨,೪೮,೯೯೭, ನಗರ: ೮೦,೫೩೭). ಜಿಲ್ಲೆಯಲ್ಲಿ ಕಳೆದ ೨೯ ತಿಂಗಳುಗಳಲ್ಲಿ ಒಟ್ಟು ೯೨,೪೩,೭೦೧ ಮಾಸಿಕ ನೊಂದಣಿಗಳ ಪೈಕಿ, ಅರ್ಹತೆ ಹೊಂದಿದ ೮೮,೭೬,೪೩೨ ಫಲಾನುಭವಿಗಳಿಗೆ ನೇರವಾಗಿ ಡಿಬಿಟಿ ಮೂಲಕ ಒಟ್ಟು ೧,೭೭೫.೨೯ ಕೋಟಿ ರೂ.ಗಳ ಧನಸಹಾಯವನ್ನು ಪಾವತಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಇನ್ನೂ ನೊಂದಣಿ ಮಾಡಿಸದ ಫಲಾನುಭವಿಗಳ ಸಂಖ್ಯೆ ೧೨,೩೧೨ ಇರುತ್ತದೆ.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ೫,೦೧೨ ಸ್ತ್ರೀಶಕ್ತಿ ಗುಂಪುಗಳನ್ನ ರಚಿಸಲಾಗಿದ್ದು, ಒಟ್ಟು ೭೫,೭೨೦ ಮಹಿಳಾ ಸದಸ್ಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ೨೦೨೫-೨೬ ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಸ್ತಿçÃಶಕ್ತಿ ಗುಂಪುಗಳಿಗೆ ಸುತ್ತುನಿಧಿಯಾಗಿ ಬಿಡುಗಡೆಯಾಗಿದ್ದ ೧೦ ಲಕ್ಷ ರೂ.ಗಳನ್ನು ಸಂಪೂರ್ಣವಾಗಿ ಮರುಹಂಚಿಕೆ ಮಾಡಿ ವೆಚ್ಚ ಮಾಡಲಾಗಿದೆ (ಶೇ. ೧೦೦ ಪ್ರಗತಿ).

ಇಲಾಖೆಯು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡ ವಿಶೇಷ ತಪಾಸಣಾ ಶಿಬಿರ ಹಾಗೂ ಪೌಷ್ಠಿಕ ಆಹಾರ ವಿತರಣೆಯ ಫಲವಾಗಿ ಜಿಲ್ಲೆಯಲ್ಲಿ ಅಪೌಷ್ಟಿಕತೆ ಗಣನೀಯವಾಗಿ ನಿಯಂತ್ರಣಕ್ಕೆ ಬಂದಿದೆ. ಮಾರ್ಚ್-೨೦೨೫ ರಲ್ಲಿ ೬೫೫ ರಷ್ಟಿದ್ದ ಸಾಧಾರಣ ಅಪೌಷ್ಟಿಕ ಮಕ್ಕಳ ಸಂಖ್ಯೆ ಮಾರ್ಚ್-೨೦೨೬ ರ ವೇಳೆಗೆ ೨೪೪ ಕ್ಕೆ ಇಳಿದಿದೆ (೪೧೧ ಮಕ್ಕಳು ಸಾಮಾನ್ಯ ಸ್ಥಿತಿಗೆ ಬಂದಿದ್ದಾರೆ). ಅದೇ ರೀತಿ ೭೩ ರಷ್ಟಿದ್ದ ತೀವ್ರ ಅಪೌಷ್ಟಿಕ ಮಕ್ಕಳ ಸಂಖ್ಯೆ ೩೮ ಕ್ಕೆ ಕುಸಿದಿದೆ (೩೫ ಮಕ್ಕಳು ಸುಧಾರಣೆ ಕಂಡಿದ್ದಾರೆ). ಒಟ್ಟು ತೂಕ ಮಾಡಿದ ೭೪,೫೫೦ ಮಕ್ಕಳಲ್ಲಿ ಪ್ರಸ್ತುತ ಒಟ್ಟು ಅಪೌಷ್ಟಿಕತೆ ಪ್ರಮಾಣ ಕೇವಲ ಶೇ. ೦.೩೮ ರಷ್ಟಿದೆ.

ಪೋಷಣ್ ಟ್ರ್ಯಾಕರ್ ಆಪ್ನಲ್ಲಿ ಮಾಹಿತಿ ನಮೂದಿಸುವಲ್ಲಿ ಜಿಲ್ಲೆಯು ಶೇ. ೯೯ ರಷ್ಟು ಪ್ರಗತಿ ಸಾಧಿಸಿದ್ದು, ಪೂರಕ ಪೌಷ್ಠಿಕ ಆಹಾರ ವಿತರಣೆಯಲ್ಲಿ ಶೇ. ೯೭.೧ ರಷ್ಟು ಪ್ರಗತಿಯೊಂದಿಗೆ ಕೋಲಾರ ಜಿಲ್ಲೆಯು ರಾಜ್ಯದಲ್ಲೇ ೨ನೇ ಸ್ಥಾನ ಪಡೆದುಕೊಂಡಿದೆ.

ಜಿಲ್ಲೆಯ ಶ್ರೀನಿವಾಸಪುರ ಹೊರತುಪಡಿಸಿ ಉಳಿದ ೫ ತಾಲ್ಲೂಕುಗಳಲ್ಲಿ ಒಟ್ಟು ೬೦ ಹಾಸಿಗೆಗಳ ಸಾಮರ್ಥ್ಯದ ಪೌಷ್ಠಿಕ ಪುನಶ್ಚೇತನ ಕೇಂದ್ರಗಳುಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.

೨೦೨೫-೨೬ನೇ ಸಾಲಿನಲ್ಲಿ (ಏಪ್ರಿಲ್-೨೦೨೫ ರಿಂದ ಮಾರ್ಚ್-೨೦೨೬) ಭಾಗ್ಯಲಕ್ಷ್ಮಿ/ಸುಕನ್ಯ ಸಮೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು ೪,೬೮೨ ಫಲಾನುಭವಿ ಹೆಣ್ಣು ಮಕ್ಕಳಿಗೆ (ಮೊದಲ ಮಗು: ೩,೯೩೫, ಎರಡನೇ ಮಗು: ೭೪೬) ಅನುಮೋದನೆ ನೀಡಲಾಗಿದೆ.

೨೦೦೬-೦೭ನೇ ಸಾಲಿನ ಆರಂಭಿಕ ಹಂತದಲ್ಲಿ ನೊಂದಾಯಿತ ಅರ್ಹ ಫಲಾನುಭವಿಗಳಲ್ಲಿ ೪,೬೪೫ ಫಲಾನುಭವಿಗಳಿಗೆ ಎಲ್.ಐ.ಸಿ ಸಂಸ್ಥೆಯಿAದ ನೇರವಾಗಿ ತಲಾ ೩೨,೩೫೧ ರೂ.ಗಳ ಪರಿಪಕ್ವ ಮೊತ್ತವನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ.

ಗರ್ಭಿಣಿ ಮತ್ತು ಬಾಣಂತಿಯರ ರಕ್ಷಣೆಗಾಗಿ ಜಾರಿಯಲ್ಲಿರುವ ಈ ಯೋಜನೆಯಡಿ ೨೦೨೫-೨೬ನೇ ಸಾಲಿನಲ್ಲಿ ಮೊದಲ ಮಗುವಿನ ನೊಂದಣಿಯಲ್ಲಿ ಶೇ. ೯೮.೮೨ ರಷ್ಟು (೭,೧೧೫ ಪ್ರಗತಿ) ಹಾಗೂ ಎರಡನೇ ಹೆಣ್ಣು ಮಗುವಿನ ನೊಂದಣಿಯಲ್ಲಿ ಶೇ. ೯೭.4೫ ರಷ್ಟು (೨,೭೪೮ ಪ್ರಗತಿ) ಭೌತಿಕ ಗುರಿ ಸಾಧಿಸಲಾಗಿದೆ.

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಜಿಲ್ಲೆಯಲ್ಲಿ ಏಪ್ರಿಲ್-೨೦ ಜos ರಿಂದ ಮಾರ್ಚ್-೨೦೨೬ ರ ಅವಧಿಯಲ್ಲಿ ಒಟ್ಟು ೮೩ ಪ್ರಕರಣಗಳು ದಾಖಲಾಗಿದ್ದು, ೨೫ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಯೋಜನೆಯಡಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಗೌರವಧನಕ್ಕಾಗಿ ಬಿಡುಗಡೆಯಾದ ೪೦.೧೭ ಲಕ್ಷ ರೂ.ಗಳಲ್ಲಿ ೩೯.೪೨ ಲಕ್ಷ ರೂ. ವೆಚ್ಚ ಮಾಡಲಾಗಿದೆ.

ಸಖಿ ಒನ್ ಸ್ಟಾಪ್ ಸೆಂಟರ್ ಮತ್ತು ಸಾಂತ್ವನ ಕೇಂದ್ರಗಳು ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನೆರವಾಗುವ ಸಖಿ ಕೇಂದ್ರದಲ್ಲಿ ವರ್ಷದಲ್ಲಿ ಒಟ್ಟು ೩೨೫ ವಿವಿಧ ಪ್ರಕರಣಗಳು ದಾಖಲಾಗಿದ್ದು, ೫೦ ಪ್ರಕರಣಗಳನ್ನು ಆಪ್ತ ಸಮಾಲೋಚನೆ ಮೂಲಕ ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ. ಜಿಲ್ಲೆಯ ೪ ಸಾಂತ್ವನ ಕೇಂದ್ರಗಳ ಮೂಲಕ ಒಟ್ಟು ೮೦೪ ಪ್ರಕರಣಗಳ ಪೈಕಿ ೭೬೧ ಪ್ರಕರಣಗಳನ್ನು ಬಗೆಹರಿಸಲಾಗಿದ್ದು, ಇದಕ್ಕಾಗಿ ಕಾಯ್ದಿರಿಸಿದ ೨೫.೩೦ ಲಕ್ಷ ರೂ. ಅನುದಾನವನ್ನು ಸಂಪೂರ್ಣ ಬಳಸಲಾಗಿದೆ.

ಮಾಲೂರಿನ ಸ್ವಾಧಾರ ಗೃಹದಲ್ಲಿ (ಶಕ್ತಿ ಸದನ) ಪ್ರಸ್ತುತ ೩೦ ಮಹಿಳೆಯರು ಮತ್ತು ೧೦ ಮಕ್ಕಳಿಗೆ ಆಶ್ರಯ ನೀಡಲಾಗಿದ್ದು, ವರ್ಷದಲ್ಲಿ ೩೭.೮೨ ಲಕ್ಷ ರೂ. ವೆಚ್ಚ ಮಾಡಲಾಗಿದೆ. ಕೋಲಾರದ ಬಾಲಕಿಯರ ವಸತಿ ನಿಲಯದಲ್ಲಿ ೫೦ ಗ್ರಾಮೀಣ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣಕ್ಕಾಗಿ ವಸತಿ ಸೌಲಭ್ಯ ಕಲ್ಪಿಸಲಾಗಿದ್ದು, ೧೪.೮೮ ಲಕ್ಷ ರೂ. ವೆಚ್ಚ ಭರಿಸಲಾಗಿದೆ.

ಅಂಗನವಾಡಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಂಟಿ ಸಮೀಕ್ಷೆ ಮತ್ತು ನಿವೇಶನ ಗುರುತಿಸುವಿಕೆ ಜಿಲ್ಲೆಯ ಒಟ್ಟು ೨,೧೮೦ ಅಂಗನವಾಡಿ ಕೇಂದ್ರಗಳ ಪೈಕಿ ೧,೧೩೭ ಕೇಂದ್ರಗಳು ಸ್ವಂತ ಕಟ್ಟಡಗಳಲ್ಲಿ ಹಾಗೂ ೪೩೦ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ನಗರ ಮತ್ತು ಗ್ರಾಮೀಣ ಪ್ರದೇಶದ ಬಾಡಿಗೆ ಕಟ್ಟಡಗಳಲ್ಲಿರುವ ಅಂಗನವಾಡಿಗಳಿಗೆ ಸ್ವಂತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆಯ ಉಪ ನಿರ್ದೇಶಕರು ಹಾಗೂ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಸಮ್ಮುಖದಲ್ಲಿ ವಿಶೇಷ ಜಂಟಿ ಸಭೆ ನಡೆಸಲಾಗಿದೆ.

ನಿವೇಶನ ರಹಿತ ಒಟ್ಟು ೧೯ ಪ್ರದೇಶಗಳ ಪೈಕಿ, ಪ್ರಸ್ತುತ ನಗರ ವ್ಯಾಪ್ತಿಯಲ್ಲಿ ೨೨ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ೧೭ ಸೇರಿ ಒಟ್ಟು ೩೯ ನಿವೇಶನಗಳನ್ನು ಯಶಸ್ವಿಯಾಗಿ ಗುರುತಿಸಲಾಗಿದ್ದು, ಇವುಗಳನ್ನು ಇಲಾಖೆಯ ವಶಕ್ಕೆ ಪಡೆದು ಹೊಸ ಕಟ್ಟಡ ನಿರ್ಮಿಸಲು ಶೀಘ್ರ ಕ್ರಮ ವಹಿಸಲಾಗುವುದು ಎಂದು ಅಧಿಕಾರಿಗಳು ಸಭೆಗೆ ವರದಿ ಮಾಡಿದರು. ರಾಷ್ಟçವ್ಯಾಪಿಯಲ್ಲಿ ಚಾಲ್ತಿಯಲ್ಲಿರುವ ಮಕ್ಕಳ ಸಹಾಯವಾಣಿ-೧೦೯೮ ಅನ್ನು ಇಆರ್ ಎಸ್ ಎಸ್ -೧೧೨ ರೊಂದಿಗೆ ವಿಲೀನಗೊಳಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧೀನದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಬಾಲಗರ್ಭಿಣಿಯರಿಗೆ ನೆರವು, ಬಾಲವಿವಾಹ ತಡೆ, ಮಕ್ಕಳು, ಬಾಣಂತಿಯರಿಗೆ ಪೌಷ್ಠಿಕ ಆಹಾರ, ಅಪೌಷ್ಠಿಕ ಮಕ್ಕಳ ಆರೈಕೆ ಮುಂತಾದ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು ಸ್ವಯಂ ಆಸಕ್ತಿ ವಹಿಸಿ ಮಾನವೀಯ ದೃಷ್ಟಿಯಲ್ಲಿ ಕೆಲಸ ನಿರ್ವಹಿಸಬೇಕೆಂದು ಎಚ್ಚರಿಕೆ ನೀಡಿದರು.

ಸಭೆಯ ಕೊನೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಇಲಾಖೆಯಲ್ಲಿ ಬಾಕಿ ಉಳಿದಿರುವ ಯೋಜನೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಮತ್ತು ಸಾರ್ವಜನಿಕರಿಗೆ ಇಲಾಖೆಯ ಸೌಲಭ್ಯಗಳು ತಾರತಮ್ಯವಿಲ್ಲದೆ ತಲುಪಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ಎಸ್. ಎಂ. ಮಂಗಳ, ಮಹಿಳಾ ಮಾತ್ತು ಮಕ್ಕಳು ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣಸ್ವಾಮಿ, ಸಿ ಡಿ ಪಿ ಓ ನಾಗರತ್ನ ಎಲ್ಲಾ ತಾಲ್ಲೂಕಿನ ಶಿಶು ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಶ್ರೀನಿವಾಸನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande