
ಕೊಪ್ಪಳ, 06 ಮೇ (ಹಿ.ಸ.) :
ಆ್ಯಂಕರ್ : ನಗರಸಭೆ ಮುಂದಿನ ಬಲ್ಡೋಟ ವಿರೋಧಿ ಹೋರಾಟದಲ್ಲಿ ನಿನ್ನೆ ಜಿಲ್ಲಾಧಿಕಾರಿಗಳು ಪುನರುಚ್ಚಾರ ಮಾಡಿ ಮತ್ತೇ ಸುಪ್ರೀಂ ಕೋರ್ಟ್ ಬಸಾಪುರ ಕೆರೆಯ ಪ್ರಕರಣದಲ್ಲಿ ಆದೇಶ ಮಾಡಿದೆ ಎಂದು ಹೇಳಿರುವುದು ಹಸಿ ಸುಳ್ಳಿನಿಂದ ಕೂಡಿದ್ದರಿಂದ ವೇದಿಕೆಯಿಂದ ಖಂಡಿಸಲಾಯಿತು. ಕೇವಲ ಬಸಾಪುರ ಕೆರೆ 2 ಎ. ಕಾರ್ಖಾನೆಯವರು ದಾರಿಗೆ ಬಳಸಿ ಷರತ್ತು ಉಲ್ಲಂಘನೆ ಮಾಡಿದ್ದಾರೆ ಎಂದು ಕಂಪನಿಯಿಂದಾದ ದೊಡ್ಡ ಷರತ್ತು ಉಲ್ಲಂಘನೆ ಮರೆಮಾಚಿದ್ದಾರೆ.
ಸುಮಾರು 20 ಎಕರೆ ಕೆರೆ ಮುಚ್ಚಿದ್ದನ್ನು ವೇದಿಕೆ ಸಾಬೀತು ಮಾಡಲು ಸಿದ್ಧವಿದೆ ಎಂದು ಜಂಟಿ ಕ್ರಿಯಿ ವೇದಿಕೆ ಪ್ರಧಾನ ಸಂಚಾಲಕರಾದ ಅಲ್ವಮಪ್ರಭು ಬೆಟ್ಟದೂರು ಮಾತನಾಡಿ ಹೇಳಿದರು. ಧರಣಿಯಲ್ಲಿ ರಾಜಶೇಖರ ಏಳುಬಾವಿ, ವಿನಯ ಸಜ್ಜನ್, ಸದಾನಂದಯ್ಯ ಬೀಳಗಿಮಠ, ಶಂಭುಲಿಂಗಪ್ಪ ಹರಗೇರಿ, ಮಹಾದೇವಪ್ಪ ಹರಗೇರಿ, ವಿಜಯಮಹಾಂತೆಶ ಹಟ್ಟಿ, ಶಿವಪ್ಪ ಜಲ್ಲಿ ಇದ್ದರು.
ಬಲ್ಡೋಟ ಕಾರ್ಖಾನೆ ಬಸಾಪುರ ಕೆರೆಯಿಂದ ತೆರವುಗೊಳ್ಳಲಿ: ಗೋನಾಳ
ಬಸಾಪುರ ಕೆರೆ ಹೋರಾಟ ವೆದಿಕೆಯಲ್ಲಿ ಅನಿರ್ದಿಷ್ಟ ಧರಣಿಗೆ ಬೆಂಬಲಿಸಿದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ ಮಾತನಾಡಿ, ಬಸಾಪುರ ಕೆರೆ ಸಮುದಾಯದ ಆಸ್ತಿ, ಇದನ್ನು ಮಾರಾಟ ಮಾಡುವ, ಪರಭಾರೆ ಮಾಡುವ ಹಕ್ಕು ಯಾರಿಗೂ ಇಲ್ಲ. ಇದರ ಮೇಲಿನ ಕಟ್ಟು ಕತೆಗಳು ಈಗಾಗಲೆ ಬಯಲಿಗೆ ಬಂದಿವೆ. ಆವತ್ತಿನ ತಹಶೀಲ್ದಾರ, ಉಪ ಆಯುಕ್ತರು, ಜಿಲ್ಲಾಧಿಕಾರಿ ಹರಸಾಹಸ ಮಾಡಿ, ಬಲ್ಡೋಟ ಕಾರ್ಖಾನೆಗೆ ಗ್ರಾಮದ ಜನರ ಅನುಮತಿ ಕೇಳದೆ 33 ಲಕ್ಷಕ್ಕೆ ಮಾರಾಟ ಮಾಡಿ, ಜನರ ನೀರು ಬಳಕೆಯ ಹಕ್ಕನ್ನು ಕಿತ್ತುಕೊಂಡಿರುವುದು ನಾಚಿಕೆಯಾಗುತ್ತಿದೆ ಎಂದು ಕೆರೆ ಮುಕ್ಥಗೊಳಿಸುವ ಹೋರಾಟದಲ್ಲಿ ರೈತರನ್ನು ಬೆಂಬಲಿಸಿ ಮಾತನಾಡಿದರು.
ಕೆರೆ ಹೋರಾಟ ನೆತೃತ್ವವನ್ನು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ, ಡಿ.ಎಸ್.ಎಸ್. ಮುಖಂಡ ಬಸಾಪುರ ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ಮದ್ದಾನಯ್ಯ ಹಿರೇಮಠ, ಕನಕಪ್ಪ ಪೂಜಾರ, ಬಸವರಾಜ್ ಹೂಗಾರ, ನಾಗರಾಜ್ ಎಲಿಗಾರ, ಹನುಮಂತ ಕದ್ರಳ್ಳಿ, ಮಹಾಂತೇಶ ಮಡಿವಾಳರ, ಮೂಕಪ್ಪ ಕಂಬಳಿ, ಅಜ್ಜಪ್ಪ ಬಸಾಪುರ, ನಿಂಗಪ್ಪ ಬಸಾಪುರ, ಮಲ್ಲಪ್ಪ ಗಾಂಜಿ ಬಸಾಪುರ, ಮಂಗಳೇಶ ರಾಠೋಡ್ ಗಿಣಿಗೇರಿ, ಹನುಮಂತ ಕಟಿಗಿ ಗಿಣಿಗೇರಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್