ಬಳ್ಳಾರಿ ತಾರಾನಾಥ ಆಸ್ಪತ್ರೆ ಸಿಬ್ಬಂದಿ ವರ್ಗಾವಣೆ
ಬಳ್ಳಾರಿ, 06 ಮೇ (ಹಿ.ಸ.) : ಆ್ಯಂಕರ್ : ಬಳ್ಳಾರಿಯ ಸರ್ಕಾರಿ ತಾರಾನಾಥ ಆಯುರ್ವೇದ ಆಸ್ಪತ್ರೆಯ ಶುಶ್ರೂಷಧಿಕಾರಿ ಗುರುಸ್ವಾಮಿ, ಕುಕ್ ಪ್ರಮೀಳಾ, ಮಸಾಜಿಷ್ಟ್ ಚಂದ್ರಪ್ಪ ಅವರು ವಿವಿಧ ಸ್ಥಳಗಳಿಗೆ ವರ್ಗಾವಣೆಯಾಗಿದ್ದು ಇವರನ್ನು ಆಸ್ಪತ್ರೆಯ ಸಿಬ್ಬಂದಿ ಬೀಳ್ಕೊಟ್ಟು, ಹೊಸ ಸ್ಥಳದಲ್ಲೂ ಉತ್ತಮವಾಗಿ ಕರ್ತ
ಬಳ್ಳಾರಿ : ತಾರಾನಾಥ ಆಸ್ಪತ್ರೆ : ಸಿಬ್ಬಂದಿಗಳ ವರ್ಗಾವಣೆ


ಬಳ್ಳಾರಿ, 06 ಮೇ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ಸರ್ಕಾರಿ ತಾರಾನಾಥ ಆಯುರ್ವೇದ ಆಸ್ಪತ್ರೆಯ ಶುಶ್ರೂಷಧಿಕಾರಿ ಗುರುಸ್ವಾಮಿ, ಕುಕ್ ಪ್ರಮೀಳಾ, ಮಸಾಜಿಷ್ಟ್ ಚಂದ್ರಪ್ಪ ಅವರು ವಿವಿಧ ಸ್ಥಳಗಳಿಗೆ ವರ್ಗಾವಣೆಯಾಗಿದ್ದು ಇವರನ್ನು ಆಸ್ಪತ್ರೆಯ ಸಿಬ್ಬಂದಿ ಬೀಳ್ಕೊಟ್ಟು, ಹೊಸ ಸ್ಥಳದಲ್ಲೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಒಳ್ಳೆಯ ಹೆಸರನ್ನು ಪಡೆಯಲಿ ಎಂದು ಶುಭ ಹಾರೈಸಿಸಿದ್ದಾರೆ.

ಸರ್ಕಾರಿ ತಾರಾನಾಥ ಆಯುರ್ವೇದ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ. ಕೊಟ್ರೇಶ್ ಅವರು ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ತಮಿಮ್ ಅನ್ಸಾರಿ, ಡಾ. ರತ್ನಶ್ರೀ, ಡಾ. ಪ್ರಭಾವತಿ, ಆಸ್ಪತ್ರೆಯ ಶುಶ್ರೂಷಾ ಅಧೀಕ್ಷಕಿ ನಿರ್ಮಲ, ಮೂಗಪ್ಪ, ಮಲ್ಲಿಕಾರ್ಜುನ, ಟಿ. ರಾಧ, ದೇವರಾಜ, ಬಸವರಾಜ, ವಾಜಿದ್ ಅಲಿ, ಫಾರ್ಮಸಿಸ್ಟ್ ರಂಜಿತ್, ಮುಬಿನಾವಾಜ್, ಸೀಮಾ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande