ವಿಜಯಪುರ ಜಿಪಂನಲ್ಲಿ ನೂತನ ಉಪ ಕಾರ್ಯದರ್ಶಿ ಕಚೇರಿ ಉದ್ಘಾಟನೆ
ವಿಜಯಪುರ, 06 ಮೇ (ಹಿ.ಸ.) : ಆಂಕರ್ : ಇಂದು ದಿನಾಂಕ 06.05.2026 ರಂದು ವಿಜಯಪುರ ಜಿಲ್ಲಾ ಪಂಚಾಯತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಿಷಿ ಆನಂದ ಅವರು ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ನೂತನವಾಗಿ ನಿರ್ಮಿಸಲಾದ ಉಪ ಕಾರ್ಯದರ್ಶಿ ಅವರ ಕಚೇರಿ ಕೊಠಡಿಯನ್ನು ಉದ್ಘಾಟಿಸಿದರು. ಕಾರ್ಯಕ್ರ
ಕೊಠಡಿ


ವಿಜಯಪುರ, 06 ಮೇ (ಹಿ.ಸ.) :

ಆಂಕರ್ : ಇಂದು ದಿನಾಂಕ 06.05.2026 ರಂದು ವಿಜಯಪುರ ಜಿಲ್ಲಾ ಪಂಚಾಯತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಿಷಿ ಆನಂದ ಅವರು ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ನೂತನವಾಗಿ ನಿರ್ಮಿಸಲಾದ ಉಪ ಕಾರ್ಯದರ್ಶಿ ಅವರ ಕಚೇರಿ ಕೊಠಡಿಯನ್ನು ಉದ್ಘಾಟಿಸಿದರು.

ಕಾರ್ಯಕ್ರಮವು ಸರಳ ಹಾಗೂ ಸೌಹಾರ್ದ ವಾತಾವರಣದಲ್ಲಿ ಜರುಗಿದ್ದು, ಪೂಜಾ ವಿಧಿವಿಧಾನಗಳೊಂದಿಗೆ ನೂತನ ಕಚೇರಿ ಉದ್ಘಾಟನೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ರಿಷಿ ಆನಂದ ಅವರು, ಉತ್ತಮ ಆಡಳಿತಕ್ಕಾಗಿ ಸೂಕ್ತ ಮೂಲಸೌಕರ್ಯಗಳ ಅಗತ್ಯತೆ ಮಹತ್ವದ್ದು ಎಂದು ತಿಳಿಸಿದರು. ಹೊಸ ಕಚೇರಿ ಕೊಠಡಿ ಸಿಬ್ಬಂದಿಗೆ ಅನುಕೂಲಕರವಾದ ಕೆಲಸದ ವಾತಾವರಣವನ್ನು ಒದಗಿಸಲಿದೆ ಮತ್ತು ಆಡಳಿತದ ಕಾರ್ಯಕ್ಷಮತೆಯನ್ನು ಹೆಚ್ಚಿಸಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾನ್ಯ ಉಪ ಕಾರ್ಯದರ್ಶಿಗಳಾದ ಪ್ರಕಾಶ ವಡ್ಡರ, ಮುಖ್ಯ ಯೋಜನಾಧಿಕಾರಿಗಳಾದ ಸಿ.ಬಿ. ಕುಂಬಾರ, ಯೋಜನಾ ನಿರ್ದೇಶಕರಾದ ಅಶೋಕ ಕಲಘಟಗಿ, ಮುಖ್ಯ ಲೆಕ್ಕಾಧಿಕಾರಿಗಳಾದ ರಾಮಣ್ಣ ಅಥಣಿ ಹಾಗೂ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಆನಂದ ಸ್ವಾಮಿ ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯತಿಯ ವಿವಿಧ ವಿಭಾಗಗಳ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಹೊಸ ಕಚೇರಿ ಕೊಠಡಿ ಆರಂಭದಿಂದಾಗಿ ಇಲಾಖೆಯ ಕಾರ್ಯ ನಿರ್ವಹಣೆಗೆ ಮತ್ತಷ್ಟು ವೇಗ ಮತ್ತು ಸೌಕರ್ಯ ಲಭಿಸುವ ನಿರೀಕ್ಷೆ ವ್ಯಕ್ತವಾಯಿತು.

ಕಾರ್ಯಕ್ರಮದ ಅಂತ್ಯದಲ್ಲಿ ಉಪಸ್ಥಿತ ಎಲ್ಲರೂ ಹೊಸ ಕಚೇರಿಯ ಯಶಸ್ವಿ ಕಾರ್ಯಾಚರಣೆಗೆ ಶುಭಾಶಯಗಳನ್ನು ಕೋರಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande