
ರಾಯಚೂರು, 06 ಮೇ (ಹಿ.ಸ.) :
ಆ್ಯಂಕರ್ : 2026-27ನೇ ಸಾಲಿನಲ್ಲಿ ಪಿ.ಎಮ್.ಎನ್.ಎ.ಎಮ್ ವತಿಯಿಂದ ನಗರದ ಮಾಣಿಕ ರಾಯಚೂರು ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮೇ.11ರ ಬೆಳಿಗ್ಗೆ 10ಗಂಟೆಗೆ ಶಿಶಿಕ್ಷು ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.
ಈ ಶಿಶಿಕ್ಷು ಮೇಳದಲ್ಲಿ ವಿವಿಧ ಉದ್ದಿಮೆಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದು, ಶಿಶಿಕ್ಷು ತರಬೇತಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ಐಟಿಐ ದ್ವಿತೀಯ ವರ್ಷದಲ್ಲಿ ತರಬೇತಿ ಪಡೆಯುತ್ತಿರುವ ಹಾಗೂ ಈಗಾಗಲೇ ಐಟಿಐ ಉತ್ತೀರ್ಣರಾದ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಈ ಮೇಳದಲ್ಲಿ ಭಾಗವಹಿಸಬಹುದಾಗಿದೆ.
ಮೇಳದಲ್ಲಿ ಕೆ.ಪಿ.ಸಿ, ವೈ.ಟಿ.ಪಿ.ಎಸ್, ಟೋಯೋಟಾ, ಹೋಂಡಾ ಪ್ರೈವೇಟ್ ಲಿಮಿಟೆಡ್ ಕೋಲಾರ, ಕೇನ್ಸ ಟೆಕ್ನಾಲಜಿ ಇಂಡಿಯಾ ಲಿಮಿಟೆಡ್, ಎಲ್.ಎನ್.ಟಿ, ಜೆ.ಎಸ್,ಡ್ಬೂ್ಯ ಹಾಗೂ ಬೆಂಗಳೂರು ಮತ್ತು ಹೈದ್ರಾಬಾದ್ ನ ಪ್ರತಿಷ್ಟಿತ ಬಹುರಾ಼಼ಷ್ಟ್ರೀಯ (ಮಲ್ಟಿ ನ್ಯಾಷನಲ್) ಕಂಪನಿಗಳು ಭಾಗವಹಿಸಲಿವೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9036684778, 9035198134, 9538003397, 8904784507ಗೆ ಸಂಪರ್ಕ ಮಾಡಬಹುದಾಗಿದೆ ಅಥವಾ ರಾಯಚೂರು ನಗರದ ಮಾಣಿಕ್ ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಕಚೇರಿಯ ಸಮಯದಲ್ಲಿ ಭೇಟಿ ನೀಡಿ, ಮಾಹಿತಿ ಪಡೆಯಬಹುದಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್